ಭಯೋತ್ಪಾದನಾ ರಾಜಕೀಯ ಕೊನೆಗೊಳಿಸಿ : ಎಸ್‍ಡಿಪಿಐ

2:04 PM, Saturday, November 30th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

SDPIಬೆಳ್ತಂಗಡಿ: ಎಸ್‍ಡಿಪಿಐನ ತಾಲೂಕು ಸಮಿತಿ ವತಿಯಿಂದ ಬೆಳ್ತಂಗಡಿಯ ಗುರು ನಾರಾಯಣ ಸಭಾಭವನದಲ್ಲಿ ಭಯೋತ್ಪಾದನಾ ರಾಜಕೀಯ ಕೊನೆಗೊಳಿಸಿ ಅಭಿಯಾನದ ಪ್ರಯುಕ್ತ ವಿಚಾರ ಸಂಕಿರಣವು ಶುಕ್ರವಾರ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‍ಡಿಪಿಐನ ರಾಜ್ಯ ಸಮಿತಿ ಸದಸ್ಯ ಅನ್ವರ್ ಸಾದತ್  ಭಯೋತ್ಪಾದನೆಯ ನೆಪದಲ್ಲಿ ಒಂದು ಸಮುದಾಯವನ್ನು ಶಾಶ್ವತವಾಗಿ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಕಾರ್ಯತಂತ್ರಗಳು ನಡೆಯುತ್ತಿವೆ. ಇದು ಖಂಡನೀಯ ಎಂದು ಹೇಳಿದರು.

ಗಾಂಧಿ ಹತ್ಯೆಯೇ ಈ ದೇಶ ಕಂಡ ಮೊದಲ ಭಯೋತ್ಪಾದನೆ. ಯಾರೋ ನಡೆಸುವ ಭಯೋತ್ಪಾದಕ ಕೃತ್ಯಗಳನ್ನು ಮುಸ್ಲಿಂರ ತಲೆಗೆ ಕಟ್ಟುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಮುಖ್ಯ ವಾಹಿನಿಯ ಎಲ್ಲಾ ರಾಜಕೀಯ ಪಕ್ಷಗಳು ಅಲ್ಪಸಂಖ್ಯಾತರನ್ನು ಓಟ್ ಬ್ಯಾಂಕ್ ಆಗಿ ಉಪಯೋಗಿಸುವ ಕಾರ್ಯ ಮಾಡುತ್ತಿದೆ ಎಂದು ಆರೋಪಿ ಸಿದರು.

ಈ ಕಾರ್ಯಕಮದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಕ್ಬರ್  ಅಧ್ಯಕ್ಷತೆಯನ್ನು ವಹಿಸಿದ್ದರು. ಅತಿಥಿಗಳಾಗಿ ಬಿಎಸ್‍ಪಿ ಜಿಲ್ಲಾ ಕಾರ್ಯದರ್ಶಿ ರಘು ಧರ್ಮಸೇನ, ಅಲ್ಫೊನ್ಸ್ ಫ್ರಾಂಕೋ, ಕೂಸಪ್ಪಮತ್ತು ಅಕ್ಬರ್ ಮಟ್ಲ  ಹಾಗೂ ಮತ್ತಿತರರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English