ಮಲ್ಪೆ : ಉಡುಪಿ ಅಜ್ಜರಕಾಡಿನ ಮಹಿಳಾ ಪ್ರ.ದರ್ಜೆ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿಯಾಗಿದ್ದ ರಂಜಿತಾ (19)ಳನ್ನು ನವಂಬರ್ 27 ರಂದು ಚೂರಿಯಿಂದ ಇರಿದು ಕೊಲೆ ಮಾಡಿದ ಆರೋಪಿ ಯೋಗೀಶನನ್ನು ಮಲ್ಪೆ ಪೊಲೀಸರು ನವಂಬರ್ 30 ರಂದು ಮಧ್ಯಾಹ್ನ ಸ್ಥಳೀಯರ ನೆರವಿನಿಂದ ಬಂಧಿಸಿದ್ದಾರೆ.
ಯೋಗೀಶ (26). ಈತ ವೃತ್ತಿಯಲ್ಲಿ ಎಲೆಕ್ಟೀಶಿಯನ್, ಪೈಂಟಿಗ್ ಇನ್ನಿತರ ಕೆಲಸ ಮಾಡಿಕೊಂಡಿದ್ದ. ಆತ ಸ್ಥಳೀಯವಾಗಿ ರಂಜಿತಾಳನ್ನು ತಾನು ಲವ್ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದ. ತನ್ನನ್ನು ಪ್ರೀತಿಸುವಂತೆ ಆಕೆಯನ್ನು ಪದೇ ಪದೇ ಪೀಡಿಸುತ್ತಿದ್ದ, ಆಕೆ ಒಪ್ಪದ ಕಾರಣ ಚೂರಿಯಿಂದ ಇರಿದು ಕೊಲೆಗೈದಿದ್ದ.
ಯುವತಿ ಕಿರುಕುಳವನ್ನು ತಾಳಲಾರದೆ ತನ್ನ ಮನೆಯಲ್ಲಿ ವಿಷಯ ತಿಳಿಸಿದ್ದಳು. ಮನೆಯವರು ಯುವಕನಿಗೆ ಬುದ್ದಿವಾದ ಹೇಳಿ ಇನ್ನು ಮುಂದೆ ಆಕೆಯ ತಂಟೆಗೆ ಬಾರದಂತೆ ಎಚ್ಚರಿಕೆ ನೀಡಿದ್ದರು. ಆದರೂ ಪೇಮದ ಹುಚ್ಚಿನಿಂದ ಕೊಲೆಮಾಡಿಯೇ ಬಿಟ್ಟಿದ್ದ.
ಈತನ ಪತ್ತೆಗಾಗಿ 8 ತಂಡ ರಚಿಸಿ ಕಳೆದ ಮೂರು ದಿನಗಳಿಂದ ಪೊಲೀಸರು ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದರು. ಶನಿವಾರ ಆತನ ಮನೆಯಿಂದ ಸುಮಾರು 2 ಕಿ.ಮೀ. ದೂರದಲ್ಲಿರುವ ಸೀ ವೀವ್ ರೆಸಾರ್ಟ್ ಬಳಿಯ ಹೊಳೆಯ ಮಧ್ಯೆ ನಿನ್ನೆ ಸೈಕಲ್ ಪತ್ತೆಯಾಯಾಗಿತ್ತು, ಸೈಕಲ್ ಪತ್ತೆಯಾದ ಸಮೀಪದ ಮನೆಯೊಂದರಲ್ಲಿ ಟರ್ಪಲಿನ್ ಮುಚ್ಚಿದ್ದ ಕಾರೊಂದು ಅನುಮಾನಸ್ಪದವಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸ್ಥಳೀಯರು ಟರ್ಪಲಿನ್ ತೆಗೆದಾಗ ಕಾರ್‌ನೊಳಗೆ ಯೋಗಿಶ್ ಪತ್ತೆಯಾದ, ಕೂಡಲೇ ಪೊಲೀಸರಿಗೆ ತಿಳಿಸಿದ ನಾಗರಿಕರು ಆತನ ಬಂಧನಕ್ಕೆ ನೆರವಾದರು.
ಸೈಕಲ್ ಹೊಳೆಬದಿಯಿಂದ ಸುಮಾರು 30 ಅಡಿ ದೂರದಲ್ಲಿ ಹೊಳೆಯ ಮಧ್ಯೆ ಭಾಗದಲ್ಲಿ ಕಂಡುಬಂದಿತ್ತು. ಸಂಜೆಯಾಗುತ್ತಲೇ ಹೊಳೆಯಲ್ಲಿ ನೀರು ಇಳಿತಗೊಂಡ ಕಾರಣ ಹೊಳೆ ಮಧ್ಯೆ ಸೈಕಲ್ ಇರುವುದನ್ನು ಆ ಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ತಿಳಿಸಿದ್ದರು . ಅದರಂತೆ ಪೊಲೀಸರು ಸ್ಥಳಕ್ಕೆ ಬಂದು ಸೈಕಲನ್ನು ವಶಕ್ಕೆ ಪಡೆದುಕೊಂಡಿದ್ದರು. ಯೋಗೀಶ ಯುವತಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಅನಂತರ ಸೈಕಲ್ ಏರಿ ಪರಾರಿಯಾಗಿದ್ದ ಎಂದು ತಿಳಿದು ಬಂದಿದೆ.
Click this button or press Ctrl+G to toggle between Kannada and English