ಅಪರಾಧಿ ಬ್ಯಾಂಕ್‌ ಮ್ಯಾನೇಜರ್‌ ರಮೇಶ ನಾಯ್ಕನಿಗೆ ಮರಣದಂಡನೆ

4:26 PM, Thursday, December 5th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

naik

ಪುತ್ತೂರು : ಪಾಣಾಜೆ ಗ್ರಾಮದ ಅರ್ಧಮೂಲೆಯಲ್ಲಿ ತನ್ನ ಸ್ವಂತ ಮಕ್ಕಳನ್ನು ಕೆರೆಗೆ ದೂಡಿ ಹಾಕಿ ಕೊಲೆಗೈದ ಅಪರಾಧಿ ಬ್ಯಾಂಕ್‌ ಮ್ಯಾನೇಜರ್‌ ರಮೇಶ ನಾಯ್ಕನಿಗೆ ಮರಣದಂಡನೆ ವಿಧಿಸಿ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಟಿ.ಜೆ. ಶಿವಶಂಕರೇಗೌಡ ಐತಿಹಾಸಿಕ ತೀರ್ಪು ನೀಡಿದ್ದಾರೆ.

ಪುತ್ತೂರಿನಲ್ಲಿ ತ್ವರಿತ ಸೆಷನ್ಸ್‌ ನ್ಯಾಯಾಲಯ ಮತ್ತು ಈಗ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದ ಇತಿಹಾಸದಲ್ಲಿಯೇ ರಮೇಶ ನಾಯ್ಕನಿಗೆ ನೀಡಿದ ಮರಣ ದಂಡನೆಯು ಮೊದಲ ಪ್ರಕರಣವಾಗಿದೆ.

ಸಾಯುವ ತನಕ ನೇಣು ಹಾಕುವಂತೆ ತೀರ್ಪು ಪ್ರಕಟಿಸಿದ ನ್ಯಾಯಾಧೀಶರು ಉಚ್ಚ ನ್ಯಾಯಾಲಯದ ದೃಢೀಕರಣಕ್ಕಾಗಿ ತೀರ್ಪನ್ನು ರವಾನಿಸುವುದಾಗಿ ನ್ಯಾಯಾಲಯದಲ್ಲಿ ಘೋಷಿಸಿದರು.

ಕೊಲೆ ಪ್ರಕರಣದ ಅಪರಾಧಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ ನ್ಯಾಯಾಧೀಶ ಟಿ.ಜೆ. ಶಿವಶಂಕರೇಗೌಡ ಮಂಗಳವಾರ ರಾತ್ರಿ 7.15ಕ್ಕೆ ನ್ಯಾಯಾಲಯದ ತಮ್ಮ ಆಸನಕ್ಕೆ ಆಗಮಿಸಿದರು. ನೂರು ಪುಟಗಳಿಗೂ ಮಿಕ್ಕಿದ ತೀರ್ಪಿನ ಹಾಳೆಗಳಿಗೆ ಸಹಿ ಮಾಡಿ ಬಳಿಕ ತೀರ್ಪು ಬರೆದ ಹಾಳೆಗೆ ಸಹಿ ಮಾಡಿದರು.

ಬಳಿಕ ತೀರ್ಪನ್ನು ಬಹಿರಂಗ ನ್ಯಾಯಾಲಯದಲ್ಲಿ ಘೋಷಿಸಿದ ನ್ಯಾಯಾಧೀಶರು ‘ರಮೇಶ ನಾಯ್ಕ ನಿನಗೆ ಮರಣ ದಂಡನೆ ವಿಧಿಸಲಾಗಿದೆ. ಸಾಯುವ ತನಕ ನೇಣು ಹಾಕುವಂತೆ ಆದೇಶಿಸಿದ್ದೇನೆ’ ಎಂದು ಶಿಕ್ಷೆಯ ಕುರಿತ ಇತರ ಶಾಂತಚಿತ್ತರಾಗಿ ವಿವರಗಳನ್ನು ನೀಡಿದರು.

ಮಂಗಳವಾರ ಶಿಕ್ಷೆ ಪ್ರಮಾಣ ಆಲಿಸಲು ಪುತ್ತೂರು ನ್ಯಾಯಾಲಯಕ್ಕೆ ಅಪರಾಧಿ ರಮೇಶ ನಾಯ್ಕನನ್ನು ಕರೆತರಲಾಗಿತ್ತು. ಬೆಳಿಗ್ಗೆ ನ್ಯಾಯಾಲಯದಲ್ಲಿ ಮರಣದಂಡನೆ ವಿಧಿಸಬಾರದು ಎಂಬ ಕುರಿತು ದೇಶದ ಸರ್ವೋಚ್ಚ ನ್ಯಾಯಾಲಯವು ವಿವಿಧ ಸಂದರ್ಭಗಳಲ್ಲಿ ಉಲ್ಲೇಖೀಸಿದ ವರದಿಗಳು ಪ್ರಕಟವಾದ ಪತ್ರಿಕೆಗಳ ಪ್ರತಿಗಳನ್ನು ನ್ಯಾಯಾಧೀಶರಿಗೆ ಅಪರಾಧಿ ನೀಡಿದ್ದನು.

ಕುತೂಹಲ ಕೆರಳಿಸಿದ ಈ ಕೊಲೆ ಪ್ರಕರಣದ ತೀರ್ಪು ಕೇಳಲು ನ್ಯಾಯವಾದಿಗಳಷ್ಟೇ ಅಲ್ಲ. ಸಾರ್ವಜನಿಕರು ಕೂಡ ನ್ಯಾಯಾಲಯದ ಆವರಣದಲ್ಲಿ ಸೇರಿದ್ದರು. ರಮೇಶ ನಾಯ್ಕನಿಗೆ ಮರಣ ದಂಡನೆ ವಿಧಿಸಿದ ತೀರ್ಪು ಪ್ರಕಟಗೊಂಡ ಬೆನ್ನಲ್ಲೇ ಸಾರ್ವಜನಿಕರು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೆ. ಶಿವಪ್ರಸಾದ್‌ ಆಳ್ವರ ಕೊಠಡಿಗೆ ಬಂದು ಅವರನ್ನು ಅಭಿನಂದಿಸಿ ಅವರ ಪ್ರಯತ್ನವನ್ನು ಶ್ಲಾಘಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English