ಮಂಗಳೂರು : ಸುಳ್ಯ ತಾಲೂಕಿನ ಕುಕ್ಕೆ ಸುಬ್ರ ಮಣ್ಯ ದೇವಾಲಯದಲ್ಲಿ ಶುಕ್ರವಾರ ಚಂಪಾ ಷಷ್ಠಿ ಆರಂಭವಾಗಿದ್ದು ಪರ ವಿರೋಧದ ಚರ್ಚೆಯ ನಡುವೆಯೂ ಸುಮಾರು ನೂರಕ್ಕೂ ಅಧಿಕ ಭಕ್ತರು ಚಂಪಾ ಷಷ್ಠಿಯ ಮೊದಲ ದಿನ ದೇವಾಲಯದಲ್ಲಿ ಮಡೆಸ್ನಾನ ಮಾಡಿದ್ದಾರೆ.
ಶುಕ್ರವಾರ ಮಧ್ಯಾಹ್ನ ನಡೆದ ಮಡೆಸ್ನಾನದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು. ಸುಮಾರು 202 ಜನ ಭಕ್ತರು ಮೊದಲ ದಿನದ ಮಡೆ ಸ್ನಾನದಲ್ಲಿ ಪಾಲ್ಗೊಂಡಿದ್ದರು. ಇನ್ನೂ ಎರಡು ದಿನ ಮಡೆಸ್ನಾನ ಆಚರಣೆ ಯಥಾಸ್ಥಿತಿಯಂತೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿಕೆ ನೀಡಿದೆ.
ಮಡೆ ಸ್ನಾನದ ಕುರಿತು ಮಾಹಿತಿ ನೀಡಿರುವ ದೇವಾಲಯದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮಡೆಸ್ನಾನ ನಡೆಸಲಾಗುತ್ತಿದೆ ಎಂದು ಹೇಳಿದರು. ಜಿಲ್ಲಾಡಳಿತ ಸಹ ಮಡೆಸ್ನಾನ ನಡೆಸಲು ಅನುಮತಿ ನೀಡಿದೆ ಎಂದು ಅವರು ಹೇಳಿದ್ದಾರೆ.
ಮಡೆಸ್ನಾನಕ್ಕೆ ಅವಕಾಶ ನೀಡಿದ್ದನ್ನು ವಿರೋಧಿಸಿ ಪ್ರಗತಿಪರ ಸಂಘಟನೆಗಳು ಶನಿವಾರ ಮಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿವೆ.
ಬೆಂಗಳೂರಿನ ಬಸನವಗುಡಿಯಲ್ಲಿರುವ ನಿಡುಮಾಮಿಡಿ ಮಠದಲ್ಲಿ ಸುಮಾರು 20 ಕ್ಕೂ ಅಧಿಕ ಮಠಾಧೀಶರೊಂದಿಗೆ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಗುರುವಾರ ಮಠದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದರು.
Click this button or press Ctrl+G to toggle between Kannada and English