ಕುಕ್ಕೆ ಸುಬ್ರಹ್ಮಣ್ಯನಿಗೆ ಅವಭೃತೋತ್ಸವ

5:38 PM, Monday, December 9th, 2013
Share
1 Star2 Stars3 Stars4 Stars5 Stars
(No Ratings Yet)
Loading...

Temple

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಚಂಪಾಷಷ್ಠಿ ಮಹೋತ್ಸವದ ಪ್ರಯುಕ್ತ ಮಾರ್ಗಶಿರ ಶುದ್ಧ ಸಪ್ತಮಿ ಸೋಮವಾರ ಬೆಳಿಗ್ಗೆ ಕುಮಾರಾಧಾರಾ ನದಿಯಲ್ಲಿ ಶ್ರೀ ದೇವರಿಗೆ ನೌಕಾವಿಹಾರ ಹಾಗೂ ಅವಭೃತೋತ್ಸವ ನಡೆಯಿತು.

ದೇವಳದಿಂದ  ಬಂಡಿ ರಥದಲ್ಲಿ ಶ್ರೀ ದೇವರ ಅವಭೃತೋತ್ಸವ ಸವಾರಿ ಹೊರಟು, ಬಿಲದ್ವಾರದ ಕಟ್ಟೆಯಲ್ಲಿ ಪೂಜೆ ನಡೆಸಲಾಯಿತು.ಬಳಿಕ ಕುಮಾರಾಧಾರಾ ನದಿ ತಟದವರೆಗೆ ಸಾಗಿಬಂದು ನದಿಯಲ್ಲಿ ತಳಿರು ತೋರಣ ಮತ್ತು ಹೂವುಗಳಿಂದ ಸಿಂಗರಿಸಲ್ಪಟ್ಟ ತೆಪ್ಪದಲ್ಲಿ ನೌಕಾವಿಹಾರ ನಡೆಯಿತು.  ಬಳಿಕ ಅವಭೃತೋತ್ಸವ ನಡೆಯಿತು. ದೇವಳದ ಪ್ರಧಾನ ಅರ್ಚಕ ವೇ|ಮೂ| ಕೇಶವ ಜೋಗಿತ್ತಾಯರ ಹಿರಿತನದಲ್ಲಿ ಅರ್ಚಕ ವೃಂದದವರು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ನಂತರ ಕುಮಾರಧಾರೆಯಲ್ಲಿನ ಕಟ್ಟೆಯಲ್ಲಿ ಶ್ರೀ ದೇವರಿಗೆ ವಿಶೇಷ ಕಟ್ಟೆಪೂಜೆ ನೆರವೇರಿತು.

Temple

ಸಾವಿರಾರು ಭಕ್ತಾದಿಗಳು ಭಕ್ತಿ, ಶ್ರಧ್ಧೆಯಿಂದ ಶ್ರೀ ದೇವರೊಂದಿಗೆ ಕುಮಾರಧಾರ ನದಿಯಲ್ಲಿ ಅವಭೃತ ಸ್ನಾನ ಮಾಡಿದರು. ಶ್ರೀ ಕ್ಷೇತ್ರದ ಆನೆ ಯಶಸ್ವಿಯು ನದಿನೀರಿನಲ್ಲಿ ಜಲಕ್ರೀಡೆಯಾಡಿ ಸಂಭ್ರಮಿಸಿತು. ಶ್ರೀ ದೇವರ ಅವಭೃತೋತ್ಸವದ ಬಳಿಕ ಕುಮಾರಾಧಾರಾದಿಂದ ಶ್ರೀ ದೇವಳದವರೆಗೆ ಅಂಗಡಿ ಹಾಗೂ ಇನ್ನಿತರ ವ್ಯಾಪಾರಸ್ಥರು ಮತ್ತು ಮನೆಯವರು  ಫಲ ಪುಷ್ಫ ಆರತಿಯನ್ನು ನೀಡಿ  ಶ್ರೀ ದೇವರಿಗೆ ಸೇವೆ ಸಲ್ಲಿಸಿದರು.

ಈ ಸಂಧರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ,ಕಾರ್ಯನಿರ್ವಹಣಾಧಿಕಾರಿ ಎಂ.ನಾಗರಾಜ್(ಪ್ರಭಾರ),ಸಹಾಯಕ ಕಾರ್ಯನಿವರ್ಾಹಣಾಧಿಕಾರಿ ರವೀಂದ್ರ, ವ್ಯವಸ್ಥಾಪನಾ ಸಮಿತಿ ಸದಸ್ಯರಾ ಸುಬ್ರಹ್ಮಣ್ಯ ಭಟ್ ಮಾನಾಡು,ವನಜಾ ವಿ.ಭಟ್,ಮೋನಪ್ಪ ಮಾನಾಡು,ಕಿಶೋರ್ ಕುಮಾರ್ ಶಿರಾಡಿ,ಮೋಹನ್ರಾಮ್ ಸುಳ್ಳಿ,ಚಂದ್ರಶೇಖರ್ ತಳೂರು ಉಪಸ್ಥಿತರಿದ್ದರು.

Temple

Temple

Temple

Temple

Temple

Temple

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English