ಮಂಗಳೂರು: ಕರಾವಳಿ ಕರ್ನಾಟಕದ ಪ್ರಥಮ ಪ್ರವಾಸಿ ಮತ್ತು ಪ್ರದರ್ಶನ ಮಂಗಳೂರು ಟ್ರಾವೆಲ್ ಮಾರ್ಟ್ ನ್ನು ಇಂದು ಬೆಳಿಗ್ಗೆ ಮಿಲಾಗ್ರಿಸ್ ಹಾಲ್ ಪಳ್ನೀರ್ , ಮಂಗಳೂರು ಇಲ್ಲಿ ಉದ್ಘಾಟಿಸಲಾಯಿತು.
ಪ್ರವಾಸಿ ವಸ್ತು ಪ್ರದರ್ಶನ ಮಳಿಗೆಯನ್ನು ಮಂಗಳೂರು ಪಶ್ಚಿಮ ವಲಯ ಐಜಿಪಿ ಅಲೋಕ್ ಮೋಹನ್ (ಐಪಿಎಸ್) ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಂಗಳೂರು ದೇಶದಲ್ಲಿ ಪ್ರಮುಖವಾಗಿ ಬೆಳೆಯುತ್ತಿರುವ ಪ್ರದೇಶ ಇಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 25 ಕ್ಕಿಂತಲೂ ಹೆಚ್ಚು ಪಂಚತಾರ ಹೊಟೇಲುಗಳಿವೆ. ಇದರಿಂದಾಗಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶವಿದೆ. ನಾವು ಮಂಗಳೂರಿಗೆ ಹೊರಗಿನವರನ್ನು ಆಕರ್ಷಿಸಲುಪ್ರವಾಸೋಧ್ಯಮವನ್ನು ಅಭಿವೃದ್ಧಿ ಪಡಿಸಬೇಕು ಎಂದು ಹೇಳಿದರು.
ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ಯೋಗೀಶ್ ಭಟ್ ಮಾತನಾಡಿ ಕರಾವಳಿಯಲ್ಲಿ ಸಾಕಷ್ಟು ಸೌಂದರ್ಯವಿದೆ. ಇಲ್ಲಿರುವ ದೇವಸ್ಥಾನ, ಬೀಚುಗಳನ್ನು ಅಭಿವೃದ್ಧಿ ಪಡಿಸಬೇಕಿದೆ ಎಂದರು.
ಪ್ರವಾಸೋದ್ಯಮ ಇಲಾಖೆಗೆ ಬೇಕಾಗುವ ಎಲ್ಲಾ ಸವಲತ್ತುಗಳನ್ನು ಇನ್ನೆರೆಡು ವರ್ಷಗಳಲ್ಲಿ ಒದಗಿಸಲಾಗುವುದು ಅದರ ಜೊತೆಗೆ ಮಂಗಳಾ ಕಾರ್ನಿಶ್, ರೋಪ್ ಬ್ರಿಡ್ಜ್, ಮೊದಲಾದ ಕೆಲಸಗಳನ್ನು ಪೂರ್ತಿಗೊಳಿಸಲಾಗುವುದು ಎಂದರು.
ಭಾರತ ಸರಕಾರ ಪ್ರವಾಸೋದ್ಯಮ ಇಲಾಖೆಗೆ ಪ್ರಾದೇಶಿಕ ನಿರ್ದೇಶಕರಾದ ಸಂಜಯ ಶ್ರೀ ವಾಸ್ತವ್ ಮಾತನಾಡಿ, ಪ್ರವಾಸೋದ್ಯಮ ದೇಶದ ಆರ್ಥಿಕ ವ್ಯವಸ್ಥೆಯನ್ನು ಬದಲಿಸಿದೆ, ನಾವು ನಮ್ಮ ಪ್ರವಾಸೋಧ್ಯಮವನ್ನು ಪ್ರಚಾರಪಡಿಸಬೇಕು. ನಮ್ಮಲ್ಲಿ ಆಕರ್ಷಣೀಯ ತಾಣಗಳೀವೆ, ನಾವು ನಮ್ಮ ಉದ್ಯಮವನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು, ಅಲ್ಲದೆ ಸರಕಾರದಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಸಿಗುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಎಂ.ಆರ್.ಪಿಎಲ್ ನ ಡಿಜಿಎಂ ಲಕ್ಷ್ಮೀ ಎಂ, ಕುಮಾರನ್, ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸದಾನಂದ ಶೆಟ್ಟಿ, ಉಪಸ್ಥಿತರಿದ್ದರು. ಮಂಗಳೂರು ಟ್ರಾವೆಲ್ ಏಂಜೆಟ್ಸ್ ಅಸೋಸಿಯೇಷನ್ನ ಅಧ್ಯಕ್ಷ ರೋಶನ್ ಪಿಂಟೋ ಹಾಗೂ ಲೂಯಿಸ್ ಪಿಂಟೋ ಉಪಸ್ಥಿತರಿದ್ದರು.
ಮೂರು ದಿನಗಳ ಕಾಲ ನಡೆಯುವ ಪ್ರಮುಖ ವಸ್ತು ಪ್ರದರ್ಶನದಲ್ಲಿ ವಿವಿಧ ಪ್ರವಾಸೋಧ್ಯಮ ಏಜೆಂಟರು ಪ್ರವಾಸಿ ಮಾಹಿತಿಗಳ ಪ್ರದರ್ಶನ, ಕರಕುಶಲ ವಸ್ತುಗಳು, ಆಹಾರ, ವಾಹನ ವ್ಯವಸ್ಥೆ ಮಾಹಿತಿಗಳನ್ನು ನೀಡಲಿದ್ದಾರೆ. ಡಿ.4 ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.
Click this button or press Ctrl+G to toggle between Kannada and English