ಮಂಗಳೂರು : ನಗರದ ಸೆಂಟ್ರಲ್ ಮಾರುಕಟ್ಟೆಯ ವ್ಯಾಪಾರಿ ಸಂಘದ ವತಿಯಿಂದ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ಜನವರಿ 4 ರ ಶನಿವಾರ ನಡೆದಿದೆ.
ಬೀದಿ ವ್ಯಾಪಾರಿಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಮಾರುಕಟ್ಟೆಯ ವ್ಯಾಪಾರಿಗಳು ಸಭೆ ನಡೆಸಿದಾಗ ಸಿಐಟಿಯು ಸಂಘಟನೆಯ ಕಾರ್ಯಕರ್ತರು ಬೀದಿ ವ್ಯಾಪಾರಿಗಳನ್ನು ಬೆಂಬಲಿಸಿ ಏಕಾಏಕಿ ವರ್ತಕರ ವಿರುದ್ಧ ಧಿಕ್ಕಾರದ ಘೊಷಣೆಗಳನ್ನು ಕೂಗಿದರು ಆಗ ಪ್ರತಿಭಟನೆ ಉಗ್ರ ಸ್ವರೂಪ ತಾಳುವ ಮೊದಲು ಪೊಲೀಸರು ನಿಯಂತ್ರಣಕ್ಕೆ ಮುಂದಾದರು.
ಪೊಲೀಸರು ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಮನವಿ ಮಾಡಿದರಾದರೂ ಸಿಐಟಿಯು ಕಾರ್ಯಕರ್ತರು ಘೊಷಣೆಗಳನ್ನು ಕೂಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಘರ್ಷಣೆಗೆ ತಿರುಗುವ ಸಾಧ್ಯತೆ ಕಂಡು ಬಂದುದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ವರ್ತಕರ ವಿರುದ್ಧ ಪ್ರತಿಭಟನೆ ನೆಡೆಸಿದ ಸಿಐಟಿಯು ಸಂಘಟನೆಯ ನಾಯಕರಾದ ಸುನೀಲ್ ಕುಮಾರ್ ಬಜಾಲ್, ಇಬ್ರಾಹಿಂ, ಇಮ್ತಿಯಾಜ್, ಸಂತೋಷ್, ಅಬ್ದುಲ್ಲಾ, ಹನೀಫ್ ಮೊದಲಾದವರನ್ನು ಪೊಲೀಸರು ಬಂಧಿಸಿದರು.
Click this button or press Ctrl+G to toggle between Kannada and English