ಮಂಗಳೂರಿನಿಂದ ಚೆನ್ನೈ ರೈಲಿನಲ್ಲಿ ಜರ್ಮನ್‌ ಮಹಿಳೆಯ ಅತ್ಯಾಚಾರ

6:26 PM, Tuesday, January 14th, 2014
Share
1 Star2 Stars3 Stars4 Stars5 Stars
(5 rating, 4 votes)
Loading...
German woman

ಮಂಗಳೂರು : ಮಂಗಳೂರಿನಿಂದ ಚೆನ್ನೈಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಜರ್ಮನ್‌ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದ ಬಗ್ಗೆ ವರದಿಯಾಗಿದೆ. ಭಾರತದಲ್ಲಿ ವಿದೇಶಿಯರ ಮೇಲೆ ನಡೆದ ಆತ್ಯಾಚಾರಕ್ಕೆ ಇನ್ನೊಂದು ಪ್ರಕರಣ ಸೇರಿದೆ.

ಅತ್ಯಾಚಾರ ನಡೆಸಿದ ಆರೋಪಿ ಮಂಗಳೂರಿಗೆ ಬಂದಿದ್ದು ಈತನ ಪತ್ತೆಗಾಗಿ ಪೊಲೀಸ್‌ ಆಧಿಕಾರಿಗಳು ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರಕರಣದ ಸಂಬಂಧ ಈಗಾಗಲೇ ಎಫ್ಐಆರ್‌ ದಾಖಲಿಸಿರುವ ರೈಲ್ವೆ ಪೊಲೀಸರು ಸಂತ್ರಸ್ತ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English