ವಿದ್ಯಾವಲ್ಲಭತೀರ್ಥ ಸ್ವಾಮೀಜಿಯವರ ಪರ್ಯಾಯ ದರ್ಬಾರ್

5:19 PM, Saturday, January 18th, 2014
Share
1 Star2 Stars3 Stars4 Stars5 Stars
(No Ratings Yet)
Loading...

Kaniyoor Paryaya

ಉಡುಪಿ : ಶನಿವಾರ ಮುಂಜಾನೆ ಸುಮಾರು ನಾಲ್ಕು ಗಂಟೆಗೆ ಜೋಡುಕಟ್ಟೆಯಿಂದ ಆರಂಭಗೊಂಡ ಪರ್ಯಾಯ ಮೆರವಣಿಗೆ ಡಯಾನ ವೃತ್ತ- ವಿತ್ರ ಆಸ್ಪತ್ರೆ- ತೆಂಕುಪೇಟೆ ಮಾರ್ಗವಾಗಿ ರಥಬೀದಿಯನ್ನು ಸೇರಿತು.

ಪರ್ಯಾಯ ಮೆರವಣಿಗೆಯಲ್ಲಿ ಭಗವಾನ್‌ ಶ್ರೀ ಕೃಷ್ಣನ ವಿವಿಧ ಲೀಲೆಗಳನ್ನು ಸಾರುವ ಸ್ತಬ್ಧ ಚಿತ್ರಗಳಲ್ಲದೆ, ಆಚಾರ್ಯ ಮಧ್ವರಿಗೆ ಕೃಷ್ಣನ ವಿಗ್ರಹ ಸಿಕ್ಕಿದ ಸನ್ನಿವೇಶವನ್ನು ಸಾರುವ ಸ್ತಬ್ಧಚಿತ್ರಗಳೂ ಮೆರವಣಿಗೆಯಲ್ಲಿ ಸಾಗಿಬಂದವು.

ಬಳಿಕ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿಯವರ ಪರ್ಯಾಯ ದರ್ಬಾರ್ ರಾಜಾಂಗಣದಲ್ಲಿ ಸಾಂಪ್ರದಾಯ ಬದ್ಧವಾಗಿ ನಡೆಯಿತು. ದರ್ಬಾರ್ ಕಾರ್ಯಕ್ರಮದ ವೇದಿಕೆಯಲ್ಲಿ ಪೇಜಾವರ ಮಠದ ಶ್ರೀಗಳಾದ ವಿಶ್ವೇಶ ತೀರ್ಥ ಶ್ರೀಪಾದರು, ಸೋದೆ ಮಠಾಧೀಶ ತೀರ್ಥರು, ಶಿರೂರು ಮಠದ ಲಕ್ಷ್ಮೀ ವರ ತೀರ್ಥರು, ಪಲಿಮಾರು ಮಠದ ವಿದ್ಯಾದೀಶ ತೀರ್ಥರು ಪೇಜಾವರ ಮಠದ ಕಿರಿಯ ಶ್ರೀಗಳಾದ ವಿಶ್ವ ಪ್ರಸನ್ನ ತೀರ್ಥರ ದಿವ್ಯ ಉಪಸ್ಥಿತಿ ಇತ್ತು.

ಈ ಸಂದರ್ಭ ಧರ್ಮಸ್ಥಳದ ಧರ್ಮಾಧಿಕಾರಿ ಡಾ . ವೀರೇಂದ್ರ ಹೆಗ್ಗಡೆ , ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ , ಸಂಸದ ಜಯಪ್ರಕಾಶ್ ಹೆಗ್ಡೆ , ಸಚಿವರಾದ ವಿನಯ್ ಕುಮಾರ್ ಸೊರಕೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು .

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 16 ಜನ ಸಾಧಕರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು .

ಪರ್ಯಾಯೋತ್ಸವದ ಸಡಗರದಲ್ಲಿ ಶ್ರೀಕೃಷ್ಣಮಠ ಅಲಂಕಾರದಿಂದ ಕಂಗೊಳಿಸುತ್ತಿದೆ. ಶ್ರೀಕೃಷ್ಣನಿಗೆ ಪ್ರತಿನಿತ್ಯವೂ ವಿಶೇಷ ಅಲಂಕಾರಗಳು ನಡೆಯುತ್ತಿದೆ. ಅಷ್ಟಮಠಾಧೀಶರು ರಾಮನವಮಿ, ಪರಶುರಾಮ ಜಯಂತಿ, ಧನ್ವಂತರಿ ಜಯಂತಿ, ಕೃಷ್ಣಾಷ್ಟಮಿ ಮೊದಲಾದ ಪರ್ವಕಾಲದಲ್ಲಿ ಆಯಾ ರೂಪಗಳನ್ನು ಅಲಂಕರಿಸುತ್ತಾರೆ. ನವರಾತ್ರಿ, ಪ್ರತಿ ಶುಕ್ರವಾರ ದೇವಿ ಅಲಂಕಾರ ನಡೆಸುತ್ತಾರೆ.

Kaniyoor Paryaya

Kaniyoor Paryaya

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English