ಬೆಂಗಳೂರು : ‘ವರಕವಿ ಬೇಂದ್ರೆಯವರ ‘ಪಾತರಗಿತ್ತಿ ಪಕ್ಕ ನೋಡಿದ್ದೇನ ಅಕ್ಕ..’ ಹಾಡಿನ ಮೂಲಕ ಖ್ಯಾತಿ ಪಡೆದಿದ್ದ ಸುಗುಮ ಸಂಗೀತ ಕ್ಷೇತ್ರದ ಗಾಯಕ ಯಶವಂತ ಹಳಿಬಂಡಿ ಅವರು ಮಂಗಳವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಯಶವಂತ ಹಳಿಬಂಡಿ ಅವರ ಪಾರ್ಥೀವ ಶರೀರವನ್ನು ಬ್ಯಾಂಕ್ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಇರಿಸಲಾಗಿದೆ. ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಧಾರಾವಾಡದಲ್ಲಿ 1950, ಮೇ 25ರಂದು ಜನಿಸಿದ ಯಶವಂತ ಹಳಿಬಂಡಿ ಅವರು ಸುಗಮ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಭಾವಗೀತೆ, ಜಾನಪದ ಸೇರಿದಂತೆ ಸುಮಾರು 250ಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದಾರೆ. ಬಾರೊ ಸಾಧನ ಕೇರಿಗೆ… ಎಂದು ಕರೆಯುತ್ತಿದ್ದ ಕಂಠ ಇನ್ನಿಲ್ಲ.
ವರಕವಿ ದ.ರಾ ಬೇಂದ್ರೆವರ ಎದುರೇ ಅವರ ಗೀತೆಯನ್ನು ಹಾಡಿ ಅವರ ಮೆಚ್ಚುಗೆ ಆಶೀರ್ವಾದ ಪಡೆದಿದ್ದು ಯಶವಂತ ಹಳಿಬಂಡಿ ಅವರ ಸಾಧನೆ.ಬಾಳಪ್ಪ ಹುಕ್ಕೇರಿ, ಅನುರಾಧ ಧಾರೇಶ್ವರ್ ಮುಂತಾದವರ ಗಾಯನದಿಂದ ಪ್ರಭಾವಿತರಾಗಿ ಗಾಯನ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಯಶವಂತ ಅವರು ಸುಮಾರು ನಾಲ್ಕು ದಶಕಗಳ ಕಾಲ ಸುಗಮ ಸಂಗೀತ ಕ್ಷೇತ್ರದಲ್ಲಿ ತಮ್ಮ ನೆಲೆ ಕಂಡುಕೊಂಡರು.
Click this button or press Ctrl+G to toggle between Kannada and English