ಉಜಿರೆ : ಕಳೆದ 30 ದಿನಗಳಿಂದ ರುಡ್ ಸೆಟ್ ಸಂಸ್ಥೆಯಲ್ಲಿ ನಡೆಯುತ್ತಿದ್ದ ಮೆನ್ಸ್ ಪಾರ್ಲರ್ ಮೆನೇಜ್ ಮೆಂಟ್ ತರಬೇತಿಯ ಸಮಾರೋಪ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಬಾರ್ಡ್, ಪ್ರಾದೇಶಿಕ ಕಛೇರಿ, ಬೆಂಗಳೂರು ಇದರ ಉಪ ಮಹಾ ಪ್ರಭಂಧಕರಾದ ಶ್ರೀ ಟಿ. ರಮೇಶ್ರವರು ಶಿಭಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡುತ್ತಾ ಜೀವನದಲ್ಲಿ ಗುರಿಯನ್ನು ಸಾದಿಸಬೇಕಾದರೆ ಆತ್ಮವಿಸ್ವಾಸ ಮತ್ತು ಪರಿಶ್ರಮ ಬಹಳ ಮುಖ್ಯ ಎಂದು ನುಡಿದರು. ಈ ಕಾರ್ಯಕ್ರಮದಲ್ಲಿ ನಬಾರ್ಡ್, ವೃತ್ತ ಕಛೇರಿ, ಮಂಗಳೂರು ಇದರ ಸಹಾಯಕ ಮಹಾಪ್ರಭಂಧಕರಾದ ಶ್ರೀ ಪ್ರಸಾದ್ ರಾವ್ ವರು ಮತ್ತು ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಟಿ.ಪಿ ಜಗದೀಶ್ ಮುರ್ತಿ ರವರು ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕರಾದ ಶ್ರೀ.ಎಂ.ಕೆ.ಎಸ್.ಪ್ರಭುರವರು ಸ್ವಾಗತಿಸಿ, ಪ್ರಸ್ತಾವಿಕ ಭಾಷಣ ಮಾಡಿದರು. ಉಪನ್ಯಾಸಕಿಯಾದ ಶ್ರೀಮತಿ ಅನಸೂಯರವರು ಕಾರ್ಯಕ್ರಮವನ್ನು ನಿರೂಪಿಸಿದರೆ ಉಪನ್ಯಾಸಕರಾದ ಶ್ರೀ ಜೇಮ್ಸ್ ಅಬ್ರಹಾಂ ವಂದಿಸಿದರು. ಈ ತರಬೇತಿಯಲ್ಲಿ 28 ಶಿಭಿರಾರ್ಥಿಗಳು ಭಾಗವಹಿಸಿ ತರಬೇತಿಯ ಪ್ರಯೋಜನವನ್ನು ಪಡೆದರು.
Click this button or press Ctrl+G to toggle between Kannada and English