ಮಂಗಳೂರು : ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕಂತೆ ಇಂಧನಗಳ ಬಳಕೆ ಸಹ ಹೆಚ್ಚುತ್ತಿದ್ದು,ಇದೊಂದು ಆತಂಕಕಾರಿ ಬೆಳವಣಿಗೆಯಾಗಿದ್ದು,ಸಾಂಪ್ರದಾಯಿಕ ಇಂಧನಗಳ ಬದಲಿಗೆ ಪರ್ಯಾಯ ಇಂಧನಗಳನ್ನು ವಿಶೇಷವಾಗಿ ಜೈವಿಕ ಇಂಧನಗಳ ಸಂಶೋಧನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳುಆಸಕ್ತಿ ವಹಿಸಿದ್ದು,ಈ ದಿಸೆಯಲ್ಲಿ ಸಂಶೋಧನೆಗಳು ಪರಿಸರಕ್ಕೆ ಹಾನಿಯಾಗದಂತೆ ಎಚ್ಚರ ವಹಿಸಬೇಕೆಂದು ಬೆಂಗಳೂರಿನ ಭಾರತೀಯವಿಜ್ಞಾನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ.ಮೋಹನ್ ಕುಮಾರ್ ತಿಳಿಸಿದ್ದಾರೆ.
ಅವರು ಇಂದು ಮಂಗಳೂರಿನ ಕರ್ನಾಟಕ ಬ್ಯಾಂಕ್ ನ ಸಭಾಂಗಣದಲ್ಲಿ ಕರಾವಳಿಅಭಿವೃದ್ಧಿ ಪ್ರಾಧಿಕಾರ ಮಂಗಳೂರು ಜೈವಿಕ ಇಂಧನ ಕಾರ್ಯಪಡೆ,ಬೆಂಗಳೂರು ಇವರ ಆಶ್ರಯದಲ್ಲಿ ಜೈವಿಕ ಇಂಧನ ಸಂಶೋಧನೆ ಮತ್ತು ಉದ್ಯಮ ಅವಕಾಶಗಳು ಕುರಿತ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಜೈವಿಕ ಇಂಧನ ಸಂಪನ್ಮೂಲಗಳು ನಮ್ಮಲ್ಲಿ ವಿಪುಲವಾಗಿದ್ದು ಬೇಡಿಕೆಯೂ ಹೆಚ್ಚಾಗಿದ್ದು,ಇದರ ಉತ್ಪಾದನೆಯಲ್ಲಿ ತೊಡಗುವವರಿಗೆ ಉತ್ತಮ ಭವಿಷ್ಯ ಇದೆಎಂದು ಅಭಿಪ್ರಾಯ ಪಟ್ಟರು.
ಕರ್ನಾಟಕ ಸರಕಾರದಜೈವಿಕ ಇಂಧನ ಕಾರ್ಯಪಡೆ ಅಧ್ಯಕ್ಷರಾದ ಶ್ರೀ ವೈ.ಬಿ.ರಾಮಕೃಷ್ಣ ಅವರು ಮಾತನಾಡಿ ಇಂದಿನ ನಮ್ಮ ಜೀವನ ಶೈಲಿ ಆಹಾರ ಭದ್ರತೆ ಮುಖ್ಯವೋ/ ಇಂಧನ ಭದ್ರತೆ ಮುಖ್ಯವೋ ಎಂಬ ಜಿಜ್ಞಾಸೆಯಲ್ಲಿ ನಮ್ಮನ್ನು ದೂಡಿದೆ. ನಮ್ಮ ಜೈವಿಕ ಇಂಧನ ನೀತಿ ಕೃಷಿಗೆ ಪೂರಕವಾಗಿರಬೇಕೇಹೊರತು ಕೃಷಿಗೆ ಪರ್ಯಾಯವಾಗಿರಬಾರದು.ಇಂಧನಕ್ಕಾಗಿ ಆಹಾರ ಧಾನ್ಯಗಳನ್ನು ಬಳಸಿದರೆ ನಾವು ಆಹಾರದ ಕೊರತೆ ಎದುರಿಸಬೇಕಾದೀತು.ಆದ್ದರಿಂದ ನಾವು ಆಹಾರೋತ್ಪಾದನೆಗೆ ದಕ್ಕೆ ಆಗದಂತೆ ಜೈವಿಕ ಇಂಧನ ಮೂಗಳನ್ನು ಸಂಶೋಧನೆ ಮಾಡುವತ್ತ ಗಮನ ಕೇಂದ್ರಿ ಕರಿಸಬೇಕೆಂದರು. ಬರಡು ಬಂಗಾರ ಯೋಜನೆಯನ್ವಯ ರಾಜ್ಯದ 13.5 ಲಕ್ಷ ಹೆಕ್ಟೇರ್ ಪಾಳುಭೂಮಿಯಲ್ಲಿ ಜೈವಿಕ ಇಂಧನ ಮೂಲಗಳಿಗೆ ಅನುಕೂಲವಾದ ಗಿಡಮರಗಳನ್ನು ನೆಡಲು ಕಾರ್ಯ ಆರಂಭವಾಗಿದೆ.ಅದೇರೀತಿಹಸಿರು ಹೊನ್ನು ಯೋಜನೆಯನ್ವಯ ಸುರಹೊನ್ನೆ,ಹೊಂಗೆ,ದೂಪ ,ನಾಗಸಂಪಿಗೆ ಮುಂತಾದ ಜೈವಿಕ ಇಂಧನ ಮೂಲ ಸಸಿಗಳನ್ನು ಬೆಳೆಸಲಾಗುತ್ತಿದೆ.
ಜೈವಿಕ ಇಂಧನ ತಂತ್ರಜ್ಞಾನ ದೇಶೀಯವಾದುದು. ಯಾವುದೇ ತಂತ್ರಜ್ಞಾನಸಾಮಾನ್ಯ ಜನರಿಗೆ ಕೈಗೆಟುಕುವಂತಿರಬೇಕು.ರಾಜ್ಯದಲ್ಲಿ ಈಗಾಗಲೇ 12ಕ್ಕೂ ಹೆಚ್ಚುಸಂಸ್ಥೆಗಳು ಜೈವಿಕ ಇಂಧನ ಸಂಶೋಧನೆ ಕೈಗೊಂಡಿದ್ದು,ಮುಂದಿನ ವರ್ಷ 25ಕ್ಕೂ ಹೆಚ್ಚು ಸಂಸ್ಥೆಗಳು ಈ ಕಾರ್ಯದಲ್ಲಿ ತೊಡಗಲಿವೆ ಎಂದರು.
ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯೋಗೀಶ್ ಭಟ್ ಈಸಂದರ್ಭದಲ್ಲಿ ಮಾತನಾಡಿದರು. ಶ್ರೀ ಬಸವರಾಜು,ಆಪ್ತ ಕಾರ್ಯದರ್ಶಿ ಅಧ್ಯಕ್ಷರು ಜೈವಿಕ ಇಂಧನ ಕಾರ್ಯಪಡೆ ಬೆಂಗಳೂರು ಇವರು ಉಪಸ್ಥಿತರಿದ್ದರು.ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ.ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ ಪ್ರಭಾಕರ ರಾವ್ ಸ್ವಾಗತಿಸಿದರು.
Click this button or press Ctrl+G to toggle between Kannada and English