ಕಾರ್ಕಳ: ಹಿರ್ಗಾನ ಶ್ರೀ ಕುಂದೇಶ್ವರ ದೇವಸ್ಥಾನ ಜಾತ್ರೆ ಸಂದರ್ಭ ಐದು ಮೇಳಗಳ ಸಂಚಾಲಕ ಬೈಲೂರು ಕಿಶನ್ ಹೆಗ್ಡೆ ಅವರಿಗೆ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಕಿಶನ್ ಹೆಗ್ಡೆ, ಯಕ್ಷಗಾನ ಎಂದರೆ ಕೇವಲ ಕಲೆ ಅಲ್ಲ, ಅದು ಸಂಸ್ಕೃತಿ, ಧರ್ಮ.ದೇವರ ಕೆಲಸ ಮಾಡಿದಂತೆಯೇ ಶ್ರದ್ಧೆಯಿಂದ ಮಾಡಬೇಕು. ಪರಂಪರೆ ಹಿರಿಯರಿಂದ ಯುವಜನಾಂಗದತ್ತ ಸಾಗುವಲ್ಲಿ ಹಿಂದೆ ಬಿದ್ದಿದ ಎಂಬ ಕೂಗು ಇರುವ ನಡುವೆಯೂ ಕುಂದೇಶ್ವರದಂಥ ಊರಿನಲ್ಲಿ ಯುವ ಸಮೂಹ ಬಯಲಾಟ ಸತತವಾಗಿ ಪ್ರದರ್ಶಿಸುತ್ತಿರುವುದು ಯಕ್ಷಗಾನಕ್ಕೆ ಒಳ್ಳೆ ಭವಿಷ್ಯ ಇರುವುದನ್ನು ಸೂಚಿಸುತ್ತದೆ ಎಂದರು.
ಸಾಲಿಗ್ರಾಮ ಡೇರೆ ಮೇಳ, ಹಿರಿಯಡ್ಕ, ಹಾಲಾಡಿ, ಮಡಾಮಕ್ಕಿ, ಸೌಕೂರು ಮೇಳಗಳ ಯಜಮಾನಿಕೆ ವಹಿಸುವ ಮೂಲಕ ಯಕ್ಷ ಸಂಸ್ಕೃತಿಯನ್ನು ಪೋಷಿಸುತ್ತಿರುವ ಕಿಶನ್ ಹೆಗ್ಡೆ, ಯಕ್ಷಗಾನದ ಸಮಥ ಯಜಮಾನ ಹೆಸರು ಗಳಿಸಿದವರು. ಪಳ್ಳಿ ಸೋಮನಾಥ ಹೆಗ್ಡೆ ಅವರ ಮಾರ್ಗದಶನದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಪರಂಪರೆ ಉಳಿಸಿ, ಬೆಳೆಸುತ್ತಿರುವ ಕಿಶನ್ ಹೆಗ್ಡೆ, ಯಕ್ಷರಂಗ ಕಂಡ ಅಪರೂಪದ ಸಂಘಟಕ ಎಂದು ಅಭಿನಂದನೆ ಭಾಷಣ ಮಾಡಿದ ಪತ್ರಕತ ಜಿತೇಂದ್ರ ಕುಂದೇಶ್ವರ ಹೇಳಿದರು.
ಕ್ಷೇತ್ರ ಧರ್ಮದರ್ಶಿ ದಿ.ರಾಘವೇಂದ್ರ ಭಟ್ ಮೇಳದ ಸಂಚಾಲಕರಾಗಿ, ಧಮದರ್ಶಿಗಳಾಗಿ, ಯಕ್ಷಗಾನ, ನಾಟಕ ಸಂಘಗಳನ್ನು ಕಟ್ಟಿ ಯುವ ಕಲಾವಿದರನ್ನು ರೂಪಿಸಿದವರು. ಅವರ ನೆನಪಲ್ಲಿ ಆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ, ಕುಂದೇಶ್ವರ ದೇವರ ಅನುಗ್ರಹ ರೂಪವಾಗಿ ಕುಂದೇಶ್ವರದ ಸಮ್ಮಾನ್ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಧರ್ಮದರ್ಶಿ ಕೃಷ್ಣರಾಜೇಂದ್ರ ಭಟ್ ಹೇಳಿದರು.
ಹಿರಿಯ ಯಕ್ಷಗಾನ ಕಲಾವಿದ ನಡಿಬೆಟ್ಟು ಧಮರಾಜ ಕಟ್ಟಡ, ಲಕ್ಷ್ಮೀಪುರ ದೇಗುಲದ ಮಾಜಿ ಆಡಳಿತ ಮೊಕ್ತೇಸರ ಬಾಬಣ್ಣ ವಾಗ್ಲೆ, ಉದ್ಯಮಿ ಸಿರಿಯಣ್ಣ ಶೆಟ್ಟಿ ಇದ್ದರು. ಅಶ್ವತ್ಥನಾರಾಯಣ ವಾಗ್ಲೆ, ಪ್ರಕಾಶ್ ವಾಗ್ಲೆ, ಯಶವಂತ್, ಸದಾಶಿವ, ಶಂಕರ ಅಂಬೇಲ್ಕರ್ ಸಹಕರಿಸಿದರು.
ಕುಂದೇಶ್ವರದಲ್ಲಿ ಮಂಗಳವಾರದಿಂದ ಆರಂಭಗಂಡು ಶುಕ್ರವಾರ ವರೆಗೆ ಧಾಮಿಕ, ಸಾಂಸ್ಕೃತಿಕ ಕಾಯಕ್ರಮಗಳು ವಿಜೃಂಬಣೆಯಿಂದ ನಡೆದವು.
Click this button or press Ctrl+G to toggle between Kannada and English