ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳುವ ಮೂಲಕ ಹಿರಿಯ ಬಿಜೆಪಿ ಮುಖಂಡ ಎಲ್.ಕೆ.ಆಡ್ವಾಣಿ ಅವರು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ ಮೋದಿ ಅವರ ಕೈಗೆ ಚುನಾವಣೆ ಹೊಣೆ ಸಿಕ್ಕ ಮೇಲೆ ಅಡ್ವಾಣಿ ಅವರು ರಾಜ್ಯಸಭೆ ಕಣಕ್ಕಿಳಿಯಬಹುದು ಎನ್ನುವ ಊಹಾಪೋಹ ಎದ್ದಿತ್ತು. ಆದರೆ, ಎಲ್ಲಾ ಸುದ್ದಿಗಳನ್ನು ಬದಿಗೊತ್ತಿ ಲೋಕಸಭೆ ಸ್ಪರ್ಧೆ ಬಗ್ಗೆ ಅಡ್ವಾಣಿ ಖಚಿತಪಡಿಸಿದ್ದಾರೆ.
ರಾಜ್ಯಸಭೆಗೆ ಸ್ಪರ್ಧಿಸುವ ಕುರಿತು ಈವರೆಗೆ ನಾನು ಏನೂ ಹೇಳಿಲ್ಲ. ಯಾರಾದರೂ ಈ ಕುರಿತು ಹೇಳಿದರೆ ಈ ಕುರಿತು ಯೋಚಿಸುತ್ತೇನೆ. ಒಂದು ವೇಳೆ ರಾಜ್ಯಸಭೆಗೆ ಆಯ್ಕೆಯಾಗುವ ಕುರಿತು ಚಿಂತಿಸುತ್ತಿದ್ದರೆ ಅದನ್ನು ಮೊದಲೇ ತಿಳಿಸುತ್ತಿದ್ದೆ ಎಂದು ಆಡ್ವಾಣಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English