ಬಿಎಸ್‌ವೈ ಮುನಿಸು: ರಾಜ್ಯ ಬಿಜೆಪಿ ಇಕ್ಕಟ್ಟಿನಲ್ಲಿ

10:40 AM, Tuesday, January 28th, 2014
Share
1 Star2 Stars3 Stars4 Stars5 Stars
(No Ratings Yet)
Loading...

B-S-Yeddyurappa
ಬೆಂಗಳೂರು : ಬಿಜೆಪಿಯ ಜೊತೆ ಇತ್ತೀಚೆಗಷ್ಟೇ ಕೆಜೆಪಿಯನ್ನು ವಿಲೀನಗೊಳಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಇದೀಗ ಬಿಜೆಪಿ ಯಲ್ಲಿ ಮೂಲೆ ಗುಂಪಾಗಿದ್ದು, ರಾಜ್ಯ ನಾಯಕರ ವರ್ತನೆಗೆ ಬೇಸತ್ತು ಅಧಿ ವೇಶನ ಸೇರಿದಂತೆ ಪಕ್ಷದ ಚಟುವಟಿಕೆ ಯಿಂದ ದೂರ ಉಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾ ವಣೆಗೂ ಮುನ್ನವೇ ಬಿಜೆಪಿಯಲ್ಲಿ ಅಸ ಮಾಧಾನದ ಹೊಗೆ ಎದ್ದಿದೆ. ಮುನಿಸಿ ಕೊಂಡಿರುವ ಯಡಿಯೂರಪ್ಪರನ್ನು ಸಮಾಧಾನಪಡಿಸಲು ಬಿಜೆಪಿ ನಾಯಕ ರಾರೂ ಮುಂದಾಗುತ್ತಿಲ್ಲ. ಇದರಿಂದಾಗಿ ವಿಧಾನಮಂಡಲ ಅಧಿವೇಶನದಿಂದಲೂ ದೂರ ಇರುವ ಅವರು, ಪಕ್ಷದ ಶಾಸ ಕಾಂಗ ಸಭೆಯಲ್ಲೂ ಪಾಲ್ಗೊಂಡಿಲ್ಲ. ಪದಾಧಿಕಾರಿಗಳ ಸಭೆಯಿಂದಲೂ ದೂರ ಉಳಿದಿದ್ದಾರೆ.

ಕೆಜೆಪಿ ವಿಲೀನಗೊಳಿಸುವ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸದೆ ವಚನ ಭ್ರಷ್ಟತನ ಅನುಸರಿಸುತ್ತಿರುವ ತನ್ನ ಮಾತೃ ಪಕ್ಷದ ನಾಯಕರ ವಿರುದ್ಧ ಯಡಿಯೂರಪ್ಪ ಅಸಮಾಧಾನಗೊಂಡಿದ್ದಾರೆ. ಪಕ್ಷದಲ್ಲಿ ತನ್ನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಹಿರಿಯ ಮುಖಂಡ ಅನಂತ್ ಕುಮಾರ್, ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್ ಮತ್ತಿತರರ ನಡೆಯಿಂದ ಅವರು ಅಸಂತುಷ್ಟರಾಗಿದ್ದಾರೆ. ವಿಧಾನಮಂಡಲ ಅಧಿವೇಶನ ಪ್ರಾರಂಭ ವಾದಂದಿನಿಂದ ಈವರೆಗೆ ಯಡಿಯೂಪ್ಪ ಕಲಾಪದಲ್ಲಿ ಭಾಗವಹಿಸಿಲ್ಲ. ಪಕ್ಷದ ಶಾಸಕಾಂಗ ಸಭೆಯಲ್ಲೂ ಪಾಲ್ಗೊಳ್ಳದೇ ತನ್ನ ಮುನಿಸು ತೋರ್ಪಡಿಸಿಕೊಂಡಿದ್ದಾರೆ. ಬಿಜೆಪಿಯಲ್ಲಿ ಲೋಕಸಭಾ ಚುನಾವಣೆಗೂ ಮುನ್ನವೆ ಅಸಮಾಧಾನದ ಹೊಗೆ ಎದ್ದಿದೆ. ಪಕ್ಷಕ್ಕೆ ಮರು ಸೇರ್ಪಡೆಗೊಂಡ ಕೆಲವೇ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೆ ಬುಸುಗುಟ್ಟಲು ಪ್ರಾರಂಭಿಸಿದ್ದಾರೆ. ವಿಧಾನಸಭೆ ಅಧಿವೇಶನ ಹಾಗೂ ಇತ್ತೀಚೆಗೆ ನಡೆದ ಬಿಜೆಪಿಯ ಯಾವುದೇ ಮಹತ್ವದ ಸಭೆಯಲ್ಲೂ ಪಾಲ್ಗೊಳ್ಳದೆ ಅವರು ಅಸಮಾಧಾನವನ್ನು ಬಹಿರಂಗವಾಗಿಯೇ ತೋರಿಸುತ್ತಿದ್ದಾರೆ.

ಪಕ್ಷದ ಸಂಸದೀಯ ಮಂಡಳಿ, ಕೋರ್ ಕಮಿಟಿಯಲ್ಲಿ ಸೂಕ್ತ ಸ್ಥಾನ ನೀಡಿಲ್ಲ. ಶಾಸಕಾಂಗ ಪಕ್ಷದ ನಾಯಕನನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಮಾಡಿಲ್ಲ. ಆಯ್ಕೆಗೆ ಮುನ್ನವೇ ತಾನೇ ಪ್ರತಿಪಕ್ಷ ನಾಯಕ ಎಂದು ಜಗದೀಶ್ ಶೆಟ್ಟರ್ ಘೋಷಿಸಿಕೊಂಡ ಬಗ್ಗೆಯೂ ಯಡಿಯೂರಪ್ಪ ಅಸಮಾಧಾನ ಹೊಂದಿದ್ದಾರೆ.

ಪ್ರಮುಖ ವಿಭಾಗಗಳಲ್ಲಿ ಕೆಜೆಪಿಯಿಂದ ಬಂದವರಿಗೆ ಕೊಟ್ಟ ಮಾತಿನಂತೆ ಶೇ.40ರಷ್ಟು ಸ್ಥಾನಗಳನ್ನು ನೀಡಿಲ್ಲ. ವಿಧಾನಮಂಡಲದ ವಿವಿಧ ಸಮಿತಿಗಳಲ್ಲಿ ತನ್ನ ಬೆಂಬಲಿಗರಿಗೆ ಶೇ.20ರಷ್ಟು ಸ್ಥಾನಮಾನ ನೀಡುವ ಬಗ್ಗೆಯೂ ಚಕಾರ ಎತ್ತುತ್ತಿಲ್ಲ ಎನ್ನುವ ಅಸಮಾಧಾನ ಯಡಿಯೂರಪ್ಪ ಅರದ್ದಾಗಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ ಸಹ ಈಶ್ವರಪ್ಪ ತಾನು ಚುನಾವಣೆಗೆ ಸ್ಪರ್ಧಿಸುವುದಾಗಿ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಮತ್ತೊಂದೆಡೆ ತಾನು ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾಗುವುದಿಲ್ಲ ಎಂದು ಹೇಳಿದ್ದರೂ ಸಹ ಪ್ರಹ್ಲಾದ್ ಜೋಷಿ ಈ ಹುದ್ದೆ ನೀಡುವುದಾಗಿ ಬಹಿರಂಗವಾಗಿ ಘೋಸಿದ್ದಾರೆ.

ಇವರು ಯಾರನ್ನು ಕೇಳಿ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ? ತನ್ನ ನಿಲುವಿಗೆ ವಿರುದ್ಧವಾಗಿ ಹೇಳಿಕೆ ನೀಡಲು ಇವರಿಗೆ ಅಧಿಕಾರ ನೀಡಿದವರಾರು? ಎಂದು ಹಿರಿಯ ಆರೆಸ್ಸೆಸ್ ಮುಖಂಡರ ಮುಂದೆ ಯಡಿಯೂರಪ್ಪ ಅಲವತ್ತುಕೊಂಡಿದ್ದಾರೆ. ತನ್ನ ಜತೆ ಚರ್ಚೆ ನಡೆಸದೆ ಪಕ್ಷದ ನಾಯಕರು ಯಾವುದೇ ನಿರ್ಧಾರ ಪ್ರಕಟಿಸುವಂತಿಲ್ಲ. ಈ ಕುರಿತು ಪಕ್ಷದ ನಾಯಕರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಅವರು ಕೋರಿದ್ದಾರೆ. ಇನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತನ್ನ ಬೆಂಬಲಿಗರಿಗೆ ಟಿಕೆಟ್ ನೀಡುವ ವಿಚಾರದಲ್ಲೂ ಪಕ್ಷದ ನಾಯಕರು ತನ್ನೊಂದಿಗೆ ಚರ್ಚೆ ನಡೆಸಿಲ್ಲ. ಪಕ್ಷದಲ್ಲಿ ತನಗೆ ಅನಾಥ ಭಾವ ಮೂಡುತ್ತಿದೆ ಎಂದು ಯಡಿಯೂರಪ್ಪ ಆಪ್ತರಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ.

ಧಾರವಾಡ ಮತ್ತು ಬೆಳಗಾವಿ ವಿಭಾಗಗಳ ಪಕ್ಷದ ಮುಖಂಡರ ಸಭೆ ಕರೆಯಲಾಗಿತ್ತು. ಆದರೆ ತನಗೆ ಅಲ್ಲಿಯೂ ಆಹ್ವಾನ ನೀಡಿಲ್ಲ. ಇಂದಿನ ಪದಾಧಿಕಾರಿಗಳ ಸಭೆಗೂ ಆಹ್ವಾನ ನೀಡಿಲ್ಲ. ಪದಾಧಿಕಾರಿಗಳ ನೇಮಕಾತಿಯಲ್ಲಿ ತನಗೆ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎಂದು ಅವರು ಅಸಮಾಧಾನ ತೋಡಿಕೊಂಡಿದ್ದಾರೆಯೆಂದು ಅವರ ಆಪ್ತ ಮೂಲಗಳು ಹೇಳಿವೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English