ಏ ಮೇರೆ ವತನ್‌…ಗೆ ಐದು ದಶಕ

12:31 PM, Tuesday, January 28th, 2014
Share
1 Star2 Stars3 Stars4 Stars5 Stars
(No Ratings Yet)
Loading...

Latha-Mangeshkar
ಮುಂಬೈ : ಚೀನಾ ಜತೆಗಿನ ಯುದ್ಧದಲ್ಲಿ ಭಾರತ ಸೋತು ನೂರಾರು ಸೈನಿಕರು ಮಡಿದ ಸಂದರ್ಭದಲ್ಲಿ  ಗಾಯಕಿ ಲತಾ ಮಂಗೇಷ್ಕರ್‌ ಅವರು ಹಾಡಿದ್ದ ‘ಏ ಮೇರೆ ವತನ್‌ ಕೆ ಲೋಗೊ’ ಗೀತೆಗೆ ಈಗ 51 ವರ್ಷ.

1962ರಲ್ಲಿ ಚೀನಾ ಯುದ್ಧದಲ್ಲಿ ಮಡಿದ ಭಾರತೀಯರ ಯೋಧರ ಸ್ಮರಣಾರ್ಥ 1963ರ ಜನವರಿ 27ರಂದು ಅಂದಿನ ಪ್ರಧಾನಿ ನೆಹರೂ ಅವರ ಸಮ್ಮುಖದಲ್ಲಿ ಲತಾ ಈ  ಹಾಡನ್ನು ಪ್ರಸ್ತುತಪಡಿಸಿದ್ದರು.

ಲತಾ ಹಾಡಿದ್ದ ಈ ಹಾಡು ಕೇಳಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ನೆರೆದಿದ್ದ ಜನರ ಕಣ್ಣಾಲಿಗಳು ಒದ್ದೆಯಾಗಿದ್ದವು. ಈ ಹಾಡಿನ 51ನೇ ವರ್ಷಾಚರಣೆ ನಿಮಿತ್ತ ಶಹೀದ್‌ ಭಾರತ್ ಸಮಿತಿ ಮತ್ತು ಲೋಧಾ ಪ್ರತಿಷ್ಠಾನ ಸೋಮವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು 84 ವರ್ಷದ ಲತಾ ಮಂಗೇಷ್ಕರ್‌ ಅವರನ್ನು ಸನ್ಮಾನಿಸಿದರು.

‘ದಿವಂಗತ ಪ್ರಧಾನಿ ನೆಹರೂ ಅವರ ಸಮ್ಮುಖದಲ್ಲಿ ಹಾಡಿದ್ದ ಈ ಹಾಡಿಗೆ  51 ವರ್ಷ ತುಂಬಿದೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ’ ಎಂದು ಲತಾ ಹೇಳಿದರು.

‘ಇಷ್ಟೊಂದು ವರ್ಷಗಳು ಹೇಗೆ ಕಳೆದು ಹೋದವು ಎಂಬುದು ಊಹಿಸಲು ಕಷ್ಟಸಾಧ್ಯ. ಆ ಸಂದರ್ಭದಲ್ಲಿ ಆವರಿಸಿಕೊಂಡಿದ್ದ ದುಃಖವನ್ನು ಈ ಹಾಡು ನೆನಪಿಸುತ್ತದೆ’ ಎಂದು ಮೆಲುಕು ಹಾಕಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English