ಸುರತ್ಕಲ್ ವ್ಯಾಪ್ತಿಯಲ್ಲಿ ದಕ್ಷ ಪೊಲೀಸ್ ಅಧಿಕಾರಿ ಬೇಕು

9:11 PM, Tuesday, January 28th, 2014
Share
1 Star2 Stars3 Stars4 Stars5 Stars
(4 rating, 7 votes)
Loading...

Munirಮಂಗಳೂರು :  ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿ ಪರಿಸರದಲ್ಲಿ ನಿರಂತರವಾಗಿ ನಡೆಯುತ್ತಿರುವ ಕೋಮು ಸಂಬಂಧಿ ಅಹಿತಕರ ಘಟನೆಗಳನ್ನು ತಡೆಗಟ್ಟಲು ಸುರತ್ಕಲ್ ಠಾಣಾಧಿಕಾರಿ ನಟರಾಜ್ ಸಂಪೂರ್ಣ ವಿಫಲರಾಗಿದ್ದಾರೆ. ಕೋಮುಸೂಕ್ಷ್ಮ ಸುರತ್ಕಲ್ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ದಕ್ಷ ಪೊಲೀಸ್ ಅಧಿಕಾರಿಯನ್ನು ತಕ್ಷಣ ನೇಮಿಸಬೇಕು ಎಂದು ಡಿವೈಎಫ್ಐ ದ ಕ ಜಿಲ್ಲಾ ಅಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್ ವಿವಾದದಲ್ಲಿ ಕ್ರಿಕೆಟ್ ತಂಡಗಳ ಮಧ್ಯೆ ಆರಂಭವಾದ ಜಗಳ ಇಂದು ಅಮಾಯಕರ ಮೇಲೆ ನಿರಂತರ ಹಲ್ಲೆ, ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ. ಹಲ್ಲೆ ಘಟನೆಗೆ ಕಾರಣರಾದವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸುರತ್ಕಲ್ ಠಾಣಾಧಿಕಾರಿ ವಿಫಲವಾಗಿರುವುದರಿಂದ ಸುರತ್ಕಲ್ ಪರಿಸರದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ನಿಜವಾದ ಹಲ್ಲೆಕೋರರನ್ನು ಬಂಧಿಸುವ ಬದಲು ಸಂಘಟನೆಗಳ ಜೊತೆ ಮಾತುಕತೆ ನಡೆಸಿ ಅಮಾಯಕರನ್ನು ಠಾಣಾಧಿಕಾರಿ ಪ್ರಕರಣಗಳಲ್ಲಿ ಫಿಕ್ಸ್ ಮಾಡುತ್ತಿದ್ದಾರೆ. ಇತ್ತಿಚ್ಚೆಗೆ ಕುಳಾಯಿಯಲ್ಲಿ ಮುಸ್ಲಿಂ ಯುವಕ ಇಜಾಜ್ ಎಂಬಾತನಿಗೆ ಕ್ರಿಕೆಟ್ ಬೆಟ್ಟಿಂಗ್ ವಿಚಾರದಲ್ಲಿ ಹಲ್ಲೆ ನಡೆಸಿದ್ದು ಅದಕ್ಕೆ ಪ್ರತಿಕಾರವಾಗಿ ಮುಸ್ಲಿಂ ಯುವಕರ ತಂಡ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿದ್ದವು. ಈ ಸಂಧರ್ಭ ಪರ ವಿರೋಧ ದೂರು ದಾಖಲಾಗಿತ್ತು. ಇಜಾಜ್ ಮೇಲೆ ಹಲ್ಲೆ ನಡೆಸಿದ ಮೂರು ಮಂದಿ ಹಿಂದೂ ಯುವಕರನ್ನು ಪೊಲೀಸರು ಬಂಧಿಸಿದ್ದು ನಂತರ ಮನೆಗಳಿಗೆ ನುಗ್ಗಿದ ಆರೋಪದ ಹಿನ್ನಲೆಯಲ್ಲಿ 7 ಮಂದಿ ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಇದರ ನಂತರ ದುಷ್ಕಮರ್ಿಗಳು ಶಕೀಲ್ ಎಂಬಾತನ ಮೇಲೆ ರಾಡ್ ನಿಂದ ಹಲ್ಲೆ ನಡೆಸಿದ್ದು ಪೊಲೀಸರು ಕೇಸು ದಾಖಲಿಸಿದ್ದಾರೆ. ಆ ಸಂಬಂಧ ಸುರತ್ಕಲ್ ಪೊಲೀಸರು ಮೂರು ಮಂದಿಯನ್ನು ಬಂಧಿಸಿದ್ದಾರೆ. ಇದಾದ ನಂತರ ಮಾರ್ಬಲ್ ಉದ್ಯೋಗಿ ಸುದರ್ಶನ್ ಎಂಬವರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿ ವಿಚಾರಣೆಗಾಗಿ ಶಕೀಲ್ ರನ್ನು ಠಾಣೆಗೆ ಕರೆಸಿಕೊಂಡ ಠಾಣಾಧಿಕಾರಿ ಹಲ್ಲೆಯಲ್ಲಿ ಶಕೀಲ್ ಪಾತ್ರ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ನಂತರ ಮನೆಗೆ ನುಗ್ಗಿ ಹಲ್ಲೆ ಪ್ರಕರಣದಲ್ಲಿ ಫಿಕ್ಸ್ ಮಾಡಿ ಅಮಾಯಕ ಶಕೀಲ್ನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪೊಲೀಸರು ಕುಳಾಯಿಯಲ್ಲಿ ನಡೆದ ಎಲ್ಲಾ ಅಹಿತಕರ ಪ್ರಕರಣಗಳಲ್ಲಿಯೂ ಆರೋಪಿಗಳನ್ನು ಬಂಧಿಸಿದ್ದರೂ ವಾಸ್ತವವಾಗಿ ಪೊಲೀಸರು ಯಾರನ್ನೂ ಬಂಧಿಸಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಸಂಘಟನೆಗಳು ಮತ್ತು ಮುಸ್ಲಿಂ ಸಂಘಟನೆಗಳ ಮಧ್ಯೆ ಮಾತುಕತೆ ನಡೆಸಿ ಕೆಲವೊಂದು ಆರೋಪಿಗಳ ಜೊತೆ ಸಂಘಟನೆಗಳು ಸೂಚಿಸಿದ ಅಮಾಯಕರನ್ನೂ ಠಾಣೆಗೆ ಕರೆಸಿ ಫಿಕ್ಸ್ ಮಾಡಲಾಗಿದೆ. ಇದು ತೀರಾ ಅಪಾಯಕಾರಿಯಾಗಿದ್ದು ಇಂತಹ ಬೆಳವಣಿಗೆಗಳಿಂದಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದಳ್ಳುರಿ ಹೆಚ್ಚಾಗುತ್ತಿದೆ ಎಂದು ಡಿವೈಎಫ್ಐ ಅಭಿಪ್ರಾಯಪಡುತ್ತದೆ. ಪೊಲೀಸರು ಹಿಂದೂ ಸಂಘಟನೆಯ ಪ್ರಮುಖರು ಮತ್ತು ಮುಸ್ಲಿಂ ಸಂಘಟನೆಯ ಪ್ರಮುಖರ ಜೊತೆ ಮಾತುಕತೆ ಮಾಡಿ ಅಮಾಯಕರನ್ನು ಫಿಕ್ಸ್ ಮಾಡಿ ಎಫ್ಐಆರ್ನಲ್ಲಿ ಹೆಸರು ಹಾಕಿ ನ್ಯಾಯಾಲಯಕ್ಕೆ ಹಾಜರುಪಡಿಸುವುದರಿಂದ ನೈಜ ಆರೋಪಿಗಳು ರಾಜಾರೋಷವಾಗಿ ತಿರುಗಾಡುವಂತಾಗುತ್ತದೆ ಮತ್ತು ಮತ್ತಷ್ಟು ಇಂತಹ ಕೋಮುಪ್ರಚೋಧಕ ಕೃತ್ಯಗಳನ್ನು ಸಂಘಟನೆಗಳಿಂದ ಮಾಡಲಾಗುತ್ತದೆ. ಪ್ರಾರಂಭದಲ್ಲಿ ನಡೆದ ಸಣ್ಣ ಘಟನೆಯ ಸಂದರ್ಭದಲ್ಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡು ನೈಜ ಆರೋಪಿಗಳನ್ನೇ ಬಂಧಿಸಿದ್ದರೆ ಮುಂದೆ ಆ ಪ್ರದೇಶದಲ್ಲಿ ಕ್ರಿಮಿನಲ್ ಕೃತ್ಯ ನಡೆಸುವ ಯುವಕರೇ ಇಲ್ಲವಾಗುತ್ತಿದ್ದರು. ಆದರೆ ಪೊಲೀಸರು ಈ ಕ್ರಮದಿಂದ ಅಮಾಯಕರು ಜೈಲು ಸೇರುತ್ತಿದ್ದು, ನೈಜ ಆರೋಪಿಗಳು ಕ್ರಿಮಿನಲ್ ಕೃತ್ಯವನ್ನು ಮುಂದುವರೆಸುವಂತಾಗಿದೆ. ಆದುದರಿಂದ ಕುಳಾಯಿ ಮತ್ತು ಸುರತ್ಕಲ್ ಪ್ರದೇಶದಲ್ಲಿ ನಡೆಯುತ್ತಿರುವ ಎಲ್ಲಾ ಕೋಮು ಅಹಿತಕರ ಘಟನೆಗಳಿಗೆ ಸುರತ್ಕಲ್ ಠಾಣಾಧಿಕಾರಿ ನಟರಾಜ್ ನೇರ ಹೊಣೆಯಾಗಿದ್ದು, ಪೊಲೀಸ್ ಆಯುಕ್ತರು ಅವರ ವಿರುದ್ಧ ತನಿಖೆ ನಡೆಸಿ ಸುರತ್ಕಲ್ ಠಾಣೆಗೆ ದಕ್ಷ ಠಾಣಾಧಿಕಾರಿಯನ್ನು ನೇಮಿಸಬೇಕೆಂದು ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English