ಅಂಗವಿಕಲರಲ್ಲೂ ವಿಶೇಷ ಪ್ರತಿಭೆ ಇದೆ: ಪಾಲೆಮಾರ್

9:40 PM, Friday, December 3rd, 2010
Share
1 Star2 Stars3 Stars4 Stars5 Stars
(No Ratings Yet)
Loading...

ಜೆ. ಕೃಷ್ಣ ಪಾಲೆಮಾರ್ ಮಂಗಳೂರು: ದ.ಕ ಜಿಲ್ಲಾಡಳಿತ, ದ.ಕ ಜಿಲ್ಲಾ ಪಂಚಾಯತ್ ಮಂಡಳಿ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರು, ಅಂಗವಿಕಲರ ಹಾಗೂ ಹಿರಿಯ ನಾಗರಿಕ ಕಲ್ಯಾಣ ಇಲಾಖೆ, ಅಂಗವಿಕಲರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ದ.ಕ ಹಾಗೂ ಲಯನ್ಸ್ ಕ್ಲಬ್ ಮಂಗಳೂರು, ಗಾಂಧಿನಗರ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ 2010′ ಕಾರ್ಯಕ್ರಮವನ್ನು ಇಂದು, ಬೆಳಿಗ್ಗೆ ನಗರದ ಪುರಭವನದಲ್ಲಿ ಆಚರಿಸಲಾಯಿತು.
ವಿಶ್ವ ಅಂಗವಿಕಲರ ದಿನಾಚರಣೆ 2010' ಕಾರ್ಯಕ್ರಮವನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರುಸಮಾರಂಭದ ಉದ್ಘಾಟನೆಯನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಉದ್ಘಾಟನೆ ಬಳಿಕ ಮಾತನಾಡಿದ ಪಾಲೆಮಾರ್ ಅಂಗವಿಕಲರಿಗೆ ಸಾಮಥ್ರ್ಯದ ಕೊರತೆ ಇದ್ದರೂ ಅವರಲ್ಲಿ ವಿಶೇಷ ಪ್ರತಿಭೆ ಇದೆ, ಅವರಲ್ಲಿ ನಾವು ದೇವರನ್ನು ಕಂಡಾಗ ಮಾತ್ರ ಅವರ ಸೇವೆ ಮಾಡಲು ಸಾಧ್ಯ ಎಂದರು.
ಭಿನ್ನ ಸಾಮಥ್ರ್ಯದ ಮಕ್ಕಳಿಗೆ ಸರಕಾರದ ವತಿಯಿಂದ ಉದ್ಯೋಗ ನೀಡುವ ಯೋಜನೆಯನ್ನು ಈಗಾಗಲೇ ರೂಪಿಸಲಾಗಿದ್ದು ಅದು ಸದ್ಯದಲ್ಲೇ ಜಾರಿಗೊಳ್ಳಲಿದೆ. ರಾಜ್ಯದಲ್ಲಿರುವ ಎಲ್ಲಾ ಅಂಗವಿಕಲ ಶಾಲೆಗಳಿಗೆ ಅನುದಾನ ನೀಡಲು ಸರಕಾರ ಮುಂದೆ ಬಂದಿದೆ ಎಂದು ಹೇಳಿದರು.
ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿಯವರು ಅಂಗವಿಕಲರಿಗೆ ಭೋದಿಸುವ ಶಿಕ್ಷಕರಿಗೆ ವಿಶೇಷ ಸೌಲಭ್ಯ ನೀಡುವ ಬಗ್ಗೆ ಸರಕಾರ  ಈಗಾಗಲೇ ಚಿಂತನೆ ನಡೆಸಿದೆ. ಅದನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದರು. ಶಾಲೆಗಳಲ್ಲಿ ಸರಿಯಾಗಿ ಊಟ ಸಿಗದ ಮಕ್ಕಳು, ತಮ್ಮ ಗಮನಕ್ಕೆ ತಂದಲ್ಲಿ ಅವರಿಗೂ ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ವಿಶ್ವ ಅಂಗವಿಕಲರ ದಿನಾಚರಣೆ 2010ಅಂಗವಿಕಲ ಕಲ್ಯಾಣಧಿಕಾರಿ ಡಿ.ಬಿ ಪುಟ್ಟಸ್ವಾಮಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಬಂಡವಾಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಯೋಗೀಶ್ ಭಟ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲಯನ್ ಪಿ. ಕಿಶೋರ್ ರಾವ್ ಲ. ಗಣೇಶ್ ಶೆಟ್ಟಿ, ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶಕುಂತಳಾ ಎ, ಗಾಂಧಿನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಹರೀಶ್ ಕಲ್ಬಾವಿ, ಅಂಗವಿಕಲ ಸಂಸ್ಥೆಯ ಮುರಳೀಧರ್ ನಾಯಕ್, ದಿನೇಶ್ ಶೆಟ್ಟಿ, ಲ. ಸನತ್ ಕುಮಾರ್ ಜೈನ್, ಎಡ್ವಿನ್ ಜೆ. ಕರ್ಕಡಾ ಉಪಸ್ಥಿತರಿದ್ದರು.

ವಿಶ್ವ ಅಂಗವಿಕಲರ ದಿನಾಚರಣೆ 2010ಈ ಸಂದರ್ಭದಲ್ಲಿ 20 ಮಂದಿ ಅಂಗವಿಕಲ ಸೇವಾನಿರತರನ್ನು ಶಾಲು ಹೊದಿಸಿ ಹಣ್ಣು ಹಂಪಲುಗಳನ್ನು ನೀಡಿ ಗೌರವಿಸಲಾಯಿರು.

ವಿಶ್ವ ಅಂಗವಿಕಲರ ದಿನಾಚರಣೆ 2010ಬಿ.ಜೆ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಇಬ್ಬರು ಫಲಾನುಭವಿಗಳಿಗೆ ತ್ರಿಚಕ್ರ, ವ್ಹೀಲ್ ಚೇರ್ ನ್ನು ಉಸ್ತುವಾರಿ ಸಚಿವರು ವಿತರಿಸಿದರು.

ವಿಶ್ವ ಅಂಗವಿಕಲರ ದಿನಾಚರಣೆ 2010

ವಿಶ್ವ ಅಂಗವಿಕಲರ ದಿನಾಚರಣೆ 2010

ವಿಶ್ವ ಅಂಗವಿಕಲರ ದಿನಾಚರಣೆ 2010

ವಿಶ್ವ ಅಂಗವಿಕಲರ ದಿನಾಚರಣೆ 2010

ವಿಶ್ವ ಅಂಗವಿಕಲರ ದಿನಾಚರಣೆ 2010

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English