ಮಂಗಳೂರು : ಕರಾವಳಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ರಾಷ್ಟ್ರ ಮಟ್ಟದ ಡಿಸೈನರ್ಸ್ ಫೆಸ್ಟ್ ಡಿಸೈನ್ ಫಿಯೆಸ್ಟ 2014 ಸಮಗ್ರ ಪ್ರಥಮ ಪ್ರಶಸ್ತಿ ರೂ.25000/- ಮತ್ತು ಟ್ರೋಫಿಯನ್ನು ಎಸ್.ಡಿ.ಎಂ. ಮ್ಯಾನೇಜ್ಮೆಂಟ್ ಕಾಲೇಜ್ ಮಂಗಳೂರು ಹಾಗೂ ಸಮಗ್ರ ದ್ವಿತೀಯ ಪ್ರಶಸ್ತಿ ರೂ.15000/- ಮತ್ತು ಟ್ರೋಫಿಯನ್ನು ಶ್ರೀ ರಾಮಕೃಷ್ಣ ಕಾಲೇಜ್ ಮಂಗಳೂರು ಗಳಿಸಿತು. ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ, ಜಿ.ಆರ್ ಎಜ್ಯುಕೇಶನ್ ಟ್ರಸ್ಟ್ (ರಿ.)ನ ಸ್ಥಾಪಕಾಧ್ಯಕ್ಷರಾದ ಶ್ರೀ. ಎಸ್. ಗಣೇಶ್ ರಾವ್ ರವರು ವಿಜೇತರಿಗೆ ಬಹುಮಾನ ವಿತರಿಸಿದರು.
ಕರಾವಳಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆಯೋಜಿಸಿದ ರಾಷ್ಟ್ರ ಮಟ್ಟದ ಡಿಸೈನರ್ಸ್ ಫೆಸ್ಟ್ ಡಿಸೈನ್ ಫಿಯೆಸ್ಟ 2014. ಸ್ಪರ್ಧೆಯಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳ್ನಾಡ್, ಕೇರಳ, ಗೋವಾ, ಕರ್ನಾಟಕ ಮೊದಲಾದ ರಾಜ್ಯದ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿಜೇತರಿಗೆ ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ, ಜಿ.ಆರ್ ಎಜ್ಯುಕೇಶನ್ ಟ್ರಸ್ಟ್(ರಿ.)ನ ಸ್ಥಾಪಕಾಧ್ಯಕ್ಷರಾದ ಶ್ರೀ. ಎಸ್. ಗಣೇಶ್ ರಾವ್ರವರು ಬಹುಮಾನವನ್ನು ವಿತರಿಸಿದರು. ಸಮಾರಂಭದಲ್ಲಿ ಕರಾವಳಿ ಕಾಲೇಜುಗಳ ಸಮೂಹದ ನಿದೇರ್ಶಕಿ ಶೀಮತಿ ಲತಾ.ಜಿ.ರಾವ್, ಪ್ರಾಂಶುಪಾಲರಾದ ಪ್ರೊ. ಮೋಹನ್ ನಾಯ್ಕ್, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಕು.ಸಂಝೀನ ನಿರೂಪಿಸಿದರು, ಉಪನ್ಯಾಸಕಿ ಹೇಝಲ್ ಸ್ವಾಗತಿಸಿದರು, ವಿದ್ಯಾರ್ಥಿನಿ ಖ್ಯಾತಿ ಬಂಗೇರ ವಂದಿಸಿದರು.
ಐಸ್ ಬ್ರೇಕರ್ ಸ್ಪರ್ಧೆಯ ಪ್ರಥಮ ಬಹುಮಾನವನ್ನು- ಫೀಲ್ಡ್ ಮಾರ್ಷಲ್ ಕೆ.ಎಮ್. ಕಾರಿಯಪ್ಪ ಕಾಲೇಜ್ ಮಡಿಕೇರಿ, ದ್ವಿತೀಯ – ಎಸ್.ಡಿ.ಎಂ. ಮ್ಯಾನೇಜ್ಮೆಂಟ್ ಕಾಲೇಜು ಮಂಗಳೂರು, ಟ್ಯಾಟೂಯಿಂಗ್ ಪ್ರಥಮ – ಇಂಟರ್ನೇಶನಲ್ ಇನಸ್ಟಿಟ್ಯೂಟ್ ಆಫ್ ಫ್ಯಾಶನ್ ಡಿಸೈನ್ ಬೆಂಗಳೂರು, ದ್ವಿತೀಯ – ಶ್ರೀ ರಾಮಕೃಷ್ಣ ಕಾಲೇಜ್ ಮಂಗಳೂರು, ಪೆನ್ಸಿಲ್ ಸ್ಕೆಚ್ಚಿಂಗ್ ಪ್ರಥಮ – ಇಂಟರ್ನೇಶನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಡಿಸೈನ್ ಕಾಲೇಜ್ ಬೆಂಗಳೂರು, ದ್ವಿತೀಯ – ಕೆನರಾ ಕಾಲೇಜ್ ಮಂಗಳೂರು, ಫ್ಲವರ್ ಅರೇಂಜ್ಮೆಂಟ್ ಪ್ರಥಮ – ಎಸ್.ಡಿ.ಎಂ. ಮ್ಯಾನೇಜ್ಮೆಂಟ್ ಕಾಲೇಜ್ ಮಂಗಳೂರು, ದ್ವಿತೀಯ – ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ಬಿಕೋಲಿನ್ ಗೋವಾ, ಫೇಸ್ ಪೈಂಟಿಂಗ್ ಪ್ರಥಮ – ಎಸ್.ಡಿ.ಎಂ. ಮ್ಯಾನೇಜ್ಮೆಂಟ್ ಕಾಲೇಜ್ ಮಂಗಳೂರು, ದ್ವಿತೀಯ – ಮ್ಯಾಪ್ಸ್ ಕಾಲೇಜ್ ಮಂಗಳೂರು, ಹೇರ್ ಸ್ಟೈಲಿಂಗ್ ಪ್ರಥಮ – ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜ್ ಮಂಗಳೂರು, ದ್ವಿತೀಯ ಸಂತ ಆಗ್ನೇಸ್ ಕಾಲೇಜ್ ಮಂಗಳೂರು, ಮೆಹೆಂದಿ ಪ್ರಥಮ – ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ಕಾಲೇಜ್ ಉಡುಪಿ, ದ್ವಿತೀಯ – ಕೆನರಾ ಕಾಲೇಜ್ ಮಂಗಳೂರು, ಮೊಡಲ್ ಮೇಕಿಂಗ್ ಪ್ರಥಮ – ಕೆ.ಎಲ್.ಇ.ಎಸ್. ಸಿಐಎಮ್ ಪಾಲಿಟೆಕ್ನಿಕ್ ಹುಬ್ಬಳ್ಳಿ, ದ್ವಿತೀಯ – ಕೆನರಾ ಕಾಲೇಜ್ ಮಂಗಳೂರು, ಕ್ಲೇ ಮೊಡಲಿಂಗ್ ಪ್ರಥಮ – ಕರಾವಳಿ ಪಾಲಿಟೆಕ್ನಿಕ್ ಕಾಲೇಜ್ ಮಂಗಳೂರು, ದ್ವಿತೀಯ – ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ಪಣಜಿ ಗೋವಾ, ಗ್ರೂಪ್ ಡ್ಯಾನ್ಸ್ ಪ್ರಥಮ – ಶ್ರೀ ರಾಮಕೃಷ್ಣ ಕಾಲೇಜ್ ಮಂಗಳೂರು, ದ್ವಿತೀಯ – ಸಂತ ಅಲೋಶಿಯಸ್ ಕಾಲೇಜ್ ಮಂಗಳೂರು, ಕೊಲಾಜ್ ಮೇಕಿಂಗ್ ಪ್ರಥಮ – ಡಾ. ಜೆ.ಜೆ. ಮಾಗ್ಡಮ್ ಇಂಜಿನಿಯರಿಂಗ್ ಕಾಲೇಜ್ ಮಹಾರಾಷ್ಟ್ರ, ದ್ವಿತೀಯ – ಮಿಫ್ಟ್ ಕಾಲೇಜ್ ಮಂಗಳೂರು, ಫ್ಯಾಶನ್ ಶೋ ಪ್ರಥಮ – ಸರಕಾರಿ ಪಾಲಿಟೆಕ್ನಿಕ್ ಪಣಜಿ ಗೋವಾ, ದ್ವಿತೀಯ – ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ಉಡುಪಿ ಇವರುಗಳು ಪಡೆದರು.
Click this button or press Ctrl+G to toggle between Kannada and English