ಯುವಕನಿಂದ ಶಿಕ್ಷಕಿ ಮೇಲೆ ಆಸಿಡ್ ದಾಳಿ

6:03 PM, Saturday, February 1st, 2014
Share
1 Star2 Stars3 Stars4 Stars5 Stars
(No Ratings Yet)
Loading...

Acid Attackದಾವಣಗೆರೆ: ಹರಿಹರ ತಾಲೂಕಿನ ಕೊಕ್ಕನೂರಿನ ಖಾಸಗಿ ಶಾಲೆ ಶಿಕ್ಷಕಿ ಕವಿತಾ ಎಂಬುವರ ಮೇಲೆ ಮಹೇಶ್ ಎಂಬ ಯುವಕ ಶುಕ್ರವಾರ ಆ್ಯಸಿಡ್ ದಾಳಿ ನಡೆಸಿದ್ದಾನೆ. ಮುಖ, ಕೈ, ಕಣ್ಣುಗಳಿಗೆ ಆ್ಯಸಿಡ್ ಬಿದ್ದಿದ್ದು, ಎಡಗಣ್ಣಿಗೆ ತೀವ್ರ ಘಾಸಿಯಾಗಿದೆ. ತನ್ನನ್ನು ಪ್ರೀತಿಸುವಂತೆ ಆತ ಶಿಕ್ಷಕಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ.

ಹೆಚ್ಚಿನ ಚಿಕಿತ್ಸೆಗಾಗಿ ಶಿಕ್ಷಕಿಯನ್ನು ದಾವಣಗೆರೆಯ ಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕವಿತಾ ಜತೆಗಿದ್ದ ಎಲ್‌ಕೆಜಿ ವಿದ್ಯಾರ್ಥಿ ರಘುವಿನ ಮೇಲೂ ಆ್ಯಸಿಡ್ ಬಿದ್ದಿದೆ. ಈ ಮಗುವಿಗೆ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕವಿತಾ ಮತ್ತು ಮಹೇಶ್ ದೂರದ ಸಂಬಂಧಿಗಳು. ಮೂಲತಃ ಹೊನ್ನಾಳಿ ತಾಲೂಕು ಕೋಣನತಲೆ ಗ್ರಾಮದವರು. ಕವಿತಾ ಹೊನ್ನಾಳಿ ತಾಲೂಕಿನ ಗೋಣಿಗೆರೆಯ ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮಹೇಶ್ ವ್ಯವಸಾಯ ಮಾಡುತ್ತಿದ್ದು, ಮದುವೆ ಮಾಡಿಕೊಳ್ಳುವಂತೆ ಕವಿತಾರನ್ನು ಪೀಡಿಸುತ್ತಿದ್ದ. ಇದರಿಂದ ಬೇಸತ್ತ ಕವಿತಾ, ವರ್ಷದ ಹಿಂದೆ ಗೋಣಿಗೆರೆ ಬಿಟ್ಟು ಕೊಕ್ಕನೂರಿಗೆ ಬಂದಿದ್ದರು. ಅಲ್ಲಿ ಸೋದರಮಾವನ ಮನೆಯಲ್ಲಿದ್ದು, ಅಂಜನಾದೇವಿ ಕಾನ್ವೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು.

”ಮಹೇಶ್ ಇಲ್ಲಿಗೂ ಆಗಾಗ ಬರುತ್ತಿದ್ದು, ಶಾಲೆಯ ಮುಖ್ಯಶಿಕ್ಷಕರಿಗೆ ಆಕೆಯ ಬಗ್ಗೆ ಸುಳ್ಳು ದೂರು ನೀಡುತ್ತಿದ್ದ,” ಎಂದು ಆಕೆಯ ಸೋದರ ಮಾವ ಮಹದೇವಪ್ಪ ತಿಳಿಸಿದ್ದಾರೆ.

ಹೆಲ್ಮೆಟ್ ಧರಿಸಿದ್ದ: ಶುಕ್ರವಾರ ಸಂಜೆ ಶಾಲೆ ಮುಗಿಸಿ ವಿದ್ಯಾರ್ಥಿ ರಘುವಿನೊಂದಿಗೆ ಮನೆಗೆ ತೆರಳುತ್ತಿದ್ದಾಗ ಗ್ರಾಮದ ಆಂಜನೇಯ ದೇವಸ್ಥಾನ ಸರ್ಕಲ್‌ನಲ್ಲಿ ಈ ಘಟನೆ ನಡೆದಿದೆ. ಹೆಲ್ಮೆಟ್ ಧರಿಸಿದ್ದ ಮಹೇಶ್, ಆಕೆಗಾಗಿ ಒಂದು ಗಂಟೆವರೆಗೂ ಕಾದಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿನಾರಾಯಣ್, ಆರೋಪಿಯನ್ನು ಬಂಧಿಸಿರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ” ಈ ಬಗ್ಗೆ ಮಲೆಬೆನ್ನೂರು ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸುತ್ತಿದ್ದಾರೆ,” ಎಂದು ತಿಳಿಸಿದ್ದಾರೆ.

ದಾವಣಗೆರೆ: ಹರಿಹರ ತಾಲೂಕಿನ ಕೊಕ್ಕನೂರಿನ ಖಾಸಗಿ ಶಾಲೆ ಶಿಕ್ಷಕಿ ಕವಿತಾ ಎಂಬುವರ ಮೇಲೆ ಮಹೇಶ್ ಎಂಬ ಯುವಕ ಶುಕ್ರವಾರ ಆ್ಯಸಿಡ್ ದಾಳಿ ನಡೆಸಿದ್ದಾನೆ. ಮುಖ, ಕೈ, ಕಣ್ಣುಗಳಿಗೆ ಆ್ಯಸಿಡ್ ಬಿದ್ದಿದ್ದು, ಎಡಗಣ್ಣಿಗೆ ತೀವ್ರ ಘಾಸಿಯಾಗಿದೆ. ತನ್ನನ್ನು ಪ್ರೀತಿಸುವಂತೆ ಆತ ಶಿಕ್ಷಕಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ.

ಹೆಚ್ಚಿನ ಚಿಕಿತ್ಸೆಗಾಗಿ ಶಿಕ್ಷಕಿಯನ್ನು ದಾವಣಗೆರೆಯ ಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕವಿತಾ ಜತೆಗಿದ್ದ ಎಲ್‌ಕೆಜಿ ವಿದ್ಯಾರ್ಥಿ ರಘುವಿನ ಮೇಲೂ ಆ್ಯಸಿಡ್ ಬಿದ್ದಿದೆ. ಈ ಮಗುವಿಗೆ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕವಿತಾ ಮತ್ತು ಮಹೇಶ್ ದೂರದ ಸಂಬಂಧಿಗಳು. ಮೂಲತಃ ಹೊನ್ನಾಳಿ ತಾಲೂಕು ಕೋಣನತಲೆ ಗ್ರಾಮದವರು. ಕವಿತಾ ಹೊನ್ನಾಳಿ ತಾಲೂಕಿನ ಗೋಣಿಗೆರೆಯ ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮಹೇಶ್ ವ್ಯವಸಾಯ ಮಾಡುತ್ತಿದ್ದು, ಮದುವೆ ಮಾಡಿಕೊಳ್ಳುವಂತೆ ಕವಿತಾರನ್ನು ಪೀಡಿಸುತ್ತಿದ್ದ. ಇದರಿಂದ ಬೇಸತ್ತ ಕವಿತಾ, ವರ್ಷದ ಹಿಂದೆ ಗೋಣಿಗೆರೆ ಬಿಟ್ಟು ಕೊಕ್ಕನೂರಿಗೆ ಬಂದಿದ್ದರು. ಅಲ್ಲಿ ಸೋದರಮಾವನ ಮನೆಯಲ್ಲಿದ್ದು, ಅಂಜನಾದೇವಿ ಕಾನ್ವೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು.

”ಮಹೇಶ್ ಇಲ್ಲಿಗೂ ಆಗಾಗ ಬರುತ್ತಿದ್ದು, ಶಾಲೆಯ ಮುಖ್ಯಶಿಕ್ಷಕರಿಗೆ ಆಕೆಯ ಬಗ್ಗೆ ಸುಳ್ಳು ದೂರು ನೀಡುತ್ತಿದ್ದ,” ಎಂದು ಆಕೆಯ ಸೋದರ ಮಾವ ಮಹದೇವಪ್ಪ ತಿಳಿಸಿದ್ದಾರೆ.

ಹೆಲ್ಮೆಟ್ ಧರಿಸಿದ್ದ: ಶುಕ್ರವಾರ ಸಂಜೆ ಶಾಲೆ ಮುಗಿಸಿ ವಿದ್ಯಾರ್ಥಿ ರಘುವಿನೊಂದಿಗೆ ಮನೆಗೆ ತೆರಳುತ್ತಿದ್ದಾಗ ಗ್ರಾಮದ ಆಂಜನೇಯ ದೇವಸ್ಥಾನ ಸರ್ಕಲ್‌ನಲ್ಲಿ ಈ ಘಟನೆ ನಡೆದಿದೆ. ಹೆಲ್ಮೆಟ್ ಧರಿಸಿದ್ದ ಮಹೇಶ್, ಆಕೆಗಾಗಿ ಒಂದು ಗಂಟೆವರೆಗೂ ಕಾದಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿನಾರಾಯಣ್, ಆರೋಪಿಯನ್ನು ಬಂಧಿಸಿರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ” ಈ ಬಗ್ಗೆ ಮಲೆಬೆನ್ನೂರು ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸುತ್ತಿದ್ದಾರೆ,” ಎಂದು ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English