ಬೆಂಗಳೂರು: ಸಂಸ್ಕಾರ, ಸಂಸ್ಕೃತಿಗಳನ್ನು ಒಳಗೊಂಡ ಶಿಕ್ಷಣದಿಂದ ಮಾತ್ರವೇ ಸದೃಢ ಹಾಗೂ ಸಭ್ಯ ಸಮಾಜ ನಿರ್ಮಾಣ ಸಾಧ್ಯ ಎಂದು ತುಮಕೂರು ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ತಿಳಿಸಿದ್ದಾರೆ.
ವಾಸವಿ ವಿದ್ಯಾರ್ಥಿ ನಿಲಯ ಟ್ರಸ್ಟ್ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ಈ ವಿಷಯ ತಿಳಿಸಿದರು.
ಸಂಸ್ಕಾರಯುತ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ಅದನ್ನು ರೂಪಿಸುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಟ್ರಸ್ಟ್ ಟ್ರಸ್ಟಿಗಳ ಮೂಲಕ ರು. 12 ಕೋಟಿ ವೆಚ್ಚದಲ್ಲಿ ಹೊಸ ವಿದ್ಯಾರ್ಥಿ ನಿಲಯ ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿದ್ದು, ಅದಕ್ಕಾಗಿ ಟ್ರಸ್ಟ್ ಅಧ್ಯಕ್ಷ ಮಾನಂದಿ ನಂಜುಂಡ ಶೆಟ್ಟಿ ಅವರು 1.02 ಕೋಟಿ ಮೊತ್ತದ ಚೆಕ್ ನೀಡಿದರು. ಬಳಿಕ ಮಾತನಾಡಿದ ಅವರು ಜಾಗತೀಕರಣದ ಈ ಯುಗದಲ್ಲಿ ಆರ್ಯವೈಶ್ಯರು ಪಾರಂಪರಿಕ ವ್ಯಾಪಾರ ಮಾತ್ರವಲ್ಲದೆ ಆಧುನಿಕ ಶಿಕ್ಷಣದ ವಿವಿಧ ಆಯಾಮಗಳಲ್ಲಿ ಜ್ಞಾನ ಪಡೆದು ತಮ್ಮ ವ್ಯಾಪಾರ-ವಹಿವಾಟುಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪದ್ಮಶ್ರೀ ಡಾ.ಬಿಎಲ್‌ಎನ್ ಮೂರ್ತಿ, ಶಿಕ್ಷಣ ತಜ್ಞ ಎಂ.ಕೆ.ಪಾಂಡುರಂಗ ಶೆಟ್ಟಿ, ಆದಾಯ ತೆರಿಗೆ ಆಯುಕ್ತ ಗೋಪಾಲ್‌ರಾವ್, ಮಾನಂದಿ ಕುಟುಂಬದ ಸುರೇಶ್, ರಮೇಶ್, ದ್ವಾರಕಾನಾಥ್, ಐಸೋಲ್‌ನ ಕಿರಣ್ ಹಾಜರಿದ್ದರು
Click this button or press Ctrl+G to toggle between Kannada and English