ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮರ್ಪಕ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದಿಂದಾಗಿ ಒಂದು ಸಾವಿರ ಶಿಶುಗಳ ಜನನದಲ್ಲಿ ಶಿಶು ಮರಣ ಪ್ರಮಾಣ 10-11 ಕ್ಕೆ ಇಳಿದಿದೆಯೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀ ಸುಭೋದ್ ಯಾದವ್ ತಿಳಿಸಿದ್ದಾರೆ.
ಅವರು ಇಂದು ನಗರದ ವೆನ್ ಲಾಕ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಯುನಿಸೆಫ್ ವತಿಯಿಂದ ಆಯೋಜಿಸಿದ್ದ ಶಿಶು ಮರಣ ಪ್ರಕರಣ ಪರಿಶೀಲನಾ ಪದ್ಧತಿ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ದಕ್ಷಿಣಕನ್ನಡ ಜಿಲ್ಲೆ ಅತ್ಯಂತ ವಿದ್ಯಾವಂತರಿರುವ ಜಿಲ್ಲೆಯಾಗಿದ್ದು ಅಭಿವೃದ್ಧಿಶೀಲರಾಷ್ಟ್ರಗಳಲ್ಲಿರುವಂತೆ ಶಿಶು ಮರಣ ಪ್ರಮಾಣ 2-3 ಕ್ಕೆ ಬರಬೇಕು.ಈ ದಿಸೆಯಲ್ಲಿ ಆರೋಗ್ಯ ಕಾರ್ಯಕ್ರಮಗಳ ಅನುಷ್ಟಾನ ಜಿಲ್ಲೆಯಲ್ಲಿ ಇನ್ನು ಹೆಚ್ಚು ಪರಿಣಾಮಕಾರಿಯಾಗುವಂತೆ ಕ್ರಮ ವಹಿಸಬೇಕೆಂದರು.
ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ವರದಿಗಳು ಸಮರ್ಪಕವಾಗಿಲ್ಲ.ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂಕೆಲವೊಮ್ಮೆ ಮನೆಗಳಲ್ಲಿ ಆಗುವ ಶಿಶು ಮರಣ ವರದಿಗೆ ಸೇರಿರುವುದಿಲ್ಲ.ಆದ್ದರಿಂದ ನಿಖರವಾದ ಶಿಶು ಮರಣಗಳ ದಾಖಲೆಯಾಗಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮಾನವನ ಅಭಿವೃದ್ಧಿ ಸೂಚ್ಯಂಕದಲ್ಲಿ ಶಿಶು ಮರಣ ಪ್ರಮಾಣ ಅತ್ಯಂತ ಪ್ರಮುಖ.ಎಲ್ಲಾ ರಂಗಗಳಲ್ಲಿ ಅತ್ಯಂತಮುಂದುವರಿದ ದ.ಕ.ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ವರದಿಗಳು ವಿಭಿನ್ನ ರೀತಿಯ ಅಂಕಿ ಅಂಶಗಳಿಂದ ಕೂಡಿದೆ. ಆದ್ದರಿಂದ ಶಿಶು ಮರಣ ಖಾಸಗಿ ಆಸ್ಪತ್ರೆಯಲ್ಲಿ ಆಗಲೀ ಅಥವಾ ಸರಕಾರ ಆಸ್ಪತ್ರೆಯಲ್ಲೇ ಆಗಲಿ ಮನೆಯಲ್ಲೇ ಆಗಲಿ ಅದು ಸರಿಯಾದ ರೀತಿ ದಾಖಲಾತಿ ಆಗುವ ಕಾರ್ಯ ಪ್ರಾಮಾಣಿಕವಾಗಿ ಆಗಬೇಕು ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಪಿ.ಶಿವಶಂಕರ್ ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶ್ರೀ ರಂಗಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ 2005 ಕ್ಕಿಂತ ಮೊದಲು ರಾಷ್ಟ್ರಮಟ್ಟದಲ್ಲಿ ಶಿಶು ಮರಣ60,ರಾಜ್ಯ ಮಟ್ಟದಲ್ಲಿ ಈ ಪ್ರಮಾಣ 52 ಇದ್ದರೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದು 14.6 ಆಗಿತ್ತು.ಆದರೆ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಆರಂಭವಾದ ನಂತರ ರಾಷ್ಟ್ರ ಮಟ್ಟದಲ್ಲಿ ಶಿಶು ಮರಣ ಪ್ರಮಾಣ 53, ರಾಜ್ಯ ಮಟ್ಟದಲ್ಲಿ 45 ಇದ್ದಾಗ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಪ್ರಮಾಣ 10.5 ಆಗಿತ್ತು ಎಂದು ತಿಳಿಸಿದರು. ಕಸ್ತೂರ್ಬಾ ವೈದ್ಯ ಕಾಲೇಜಿನ ಮಕ್ಕಳ ವಿಭಾಗದ ಪ್ರೊ.ಬಿ.ಎಸ್.ಬಾಳಿಗ,ಇಂದಿರಾಗಾಂಧಿಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕರಾದ ಪ್ರೊ.ಎಸ್.ಶಿವಾನಂದ, ಹೈದರಾಬಾದ್ನ ಯುನಿಸೆಫ್ ಸಂಸ್ಥೆಯ ಡಾ. ಸಂಜೀವ ಉಪನಿರ್ದೇಶಕರಾದ ಡಾ.ಲಕ್ಷ್ಮಿನಾರಾಯಣ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English
December 7th, 2011 at 04:07:35
f98wzL yajhfanxcjfm, [url=http://jlowpvxcydhy.com/]jlowpvxcydhy[/url], [link=http://urtatbyumrcu.com/]urtatbyumrcu[/link], http://tlyvzfojozfp.com/