ಬೆಂಗಳೂರುಃ ಯಡಿಯೂರಪ್ಪ ಒತ್ತಡಕ್ಕೆ ಮಣಿದಿರುವ ಬಿಜೆಪಿ ಅವರ ಬೆಂಬಲಿಗರಿಗೆ ಸ್ಥಾನಮಾನ ನೀಡುವ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದ್ದು, ಬುಧವಾರ ಹಲವರಿಗೆ ಸ್ಥಾನ ಮಾನ ಕಲ್ಪಿಸಿದೆ. ಯಡಿಯೂರಪ್ಪ ಜತೆ ಕೆಜೆಪಿಗೆ ಹೆಜ್ಜೆ ಹಾಕಿ ವಾಪಸಾಗಿರುವ ನಿಂಬಣ್ಣನವರ್ ಹಾಗೂ ಮಂಜುಳಾ ಅವರನ್ನು ರಾಜ್ಯ ಮಾಧ್ಯಮ ಸಹ ವಕ್ತಾರರನ್ನಾಗಿ ನೇಮಿಸ ಲಾಗಿದೆ. ಅಲ್ಲದೆ, ಮಾಜಿ ಶಾಸಕರಾದ ಸುನೀಲ್ ವಲ್ಯಾಪುರೆ ಹಾಗೂ ವಿಟuಲ ಕಟಕದೊಂಡ ಅವರಿಗೆ ರಾಜ್ಯ ಎಸ್‌ಸಿ ಮೋರ್ಚಾದ ಉಪಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಲಾಗಿದೆ. ಎಂ. ಚಂದ್ರಪ್ಪ ಹಾಗೂ ಬಾಬೂರಾವ್ ಚವಾಣ್ ಅವರನ್ನು ಎಸ್‌ಸಿ ಮೋರ್ಚಾದ ವಿಶೇಷ ಆಹ್ವಾನಿತರನ್ನಾಗಿ ಮಾಡಲಾಗಿದೆ.
ಪ್ರಕ್ರಿಯೆ ಈಗ ಆರಂಭವಾಗಿದ್ದು, ಯಡಿ ಯೂರಪ್ಪ ಅವರ ಇನ್ನೂ ಹಲವು ಬೆಂಬ ಲಿಗರಿಗೆ ರಾಜ್ಯ ಮಟ್ಟದ ವಿವಿಧ ಸಮಿತಿಗಳಲ್ಲಿ ಅವಕಾಶ ಕಲ್ಪಿಸಲಾಗುವುದು. ಜತೆಗೆ ಸ್ಥಳೀಯ ಮುಖಂಡರನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಸಮಿತಿಗಳ ಪದಾಧಿಕಾರಿಗಳನ್ನಾಗಿ ನೇಮಿಸುವ ಮೂಲಕ ಕೆಜೆಪಿಯಿಂದ ವಾಪಸಾಗಿರುವ ಎಲ್ಲರನ್ನೂ ಪಕ್ಷದ ಮುಖ್ಯವಾಹಿನಿಗೆ ಕರೆ ತರಲಾಗುವುದು ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ತಮ್ಮೊಂದಿಗೆ ಪಕ್ಷಕ್ಕೆ ಬಂದಿರುವ ಬೆಂಬಲಿಗರಿಗೆ ಸ್ಥಾನಮಾನ ನೀಡುವ ಸಂಬಂಧ ಯಡಿಯೂರಪ್ಪ ಕಳೆದ ರವಿವಾರ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಅನಂತರ ಸೋಮವಾರ ನಗರದ ಪಕ್ಷದ ಕಚೇರಿಯಲ್ಲಿ ನಡೆದ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯಲ್ಲೂ ಯಡಿ ಯೂರಪ್ಪ ಇದೇ ವಿಷಯವನ್ನು ಬಲವಾಗಿ ಪ್ರತಿಪಾದಿಸಿದ್ದರು.
“ನಾನು ಬಿಜೆಪಿಗೆ ಬಂದ ಅನಂತರ ರಾಜ್ಯ ಕೋರ್ ಕಮಿಟಿಯಲ್ಲಿ ಅವಕಾಶ ಸಿಕ್ಕಿದೆ. ಆದರೆ, ನನ್ನನ್ನು ನಂಬಿಕೊಂಡು ಬಂದಿರುವವರಿಗೆ ಯಾವುದೇ ಸ್ಥಾನವೂ ಸಿಗದಿದ್ದರೆ ನಾನು ಅವರನ್ನು ಎದು ರಿಸುವುದು ಕಷ್ಟವಾಗುತ್ತದೆ. ನನ್ನ ಮನಸ್ಸಿಗೂ ಸದಾ ಕಾಡುತ್ತಿರುತ್ತದೆ. ನಾನು ಇಂಥವರಿಗೆ ಇಂಥದ್ದೇ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ಇಡುವುದಿಲ್ಲ. ಆದರೆ, ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಆದಷ್ಟು ಬೇಗ ಅವಕಾಶ ಕಲ್ಪಿಸಬೇಕು’ ಎಂದು ಯಡಿಯೂರಪ್ಪ ಅವರು ಪಕ್ಷದ ಇತರ ನಾಯಕರಲ್ಲಿ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರ ಜತೆ ಸಮಾಲೋಚನೆ ನಡೆಸಿದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಬುಧವಾರ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳ ನೇಮಕ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.
ಪದಾಧಿಕಾರಿಗಳ ನೇಮಕ : ಯಡಿಯೂರಪ್ಪ ಅವರ ಕೆಲವು ಬೆಂಬಲಿಗರೂ ಸೇರಿದಂತೆ ಬಿಜೆಪಿಯ ವಿವಿಧ ಮುಖಂಡರು ಹಾಗೂ ಕಾರ್ಯಕರ್ತರನ್ನು ಒಳಗೊಂಡಂತೆ ಕೆಲವು ಸಮಿತಿಗಳ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
ರಾಜ್ಯ ಮಾಧ್ಯಮ ಸಹ ವಕ್ತಾರರು: ಕೋಟ ಶ್ರೀನಿವಾಸ ಪೂಜಾರಿ, ನಿಂಬಣ್ಣನವರ್, ವಿವೇಕ್ ರೆಡ್ಡಿ, ಗೀತಾ ವಿವೇಕಾ ನಂದ, ಮಾಳವಿಕಾ ಅವಿನಾಶ್, ಮಂಜುಳಾ ಹಾಗೂ ಅಪರ್ಣಾ ಪಟವರ್ಧನ್.
ರಾಜ್ಯ ಎಸ್‌ಸಿ ಮೋರ್ಚಾ ಪದಾಧಿಕಾರಿಗಳು: ಉಪಾಧ್ಯಕ್ಷರು- ಎಂ.ಪಿ. ಕುಮಾರ ಸ್ವಾಮಿ, ಸುನೀಲ್ ವಲ್ಯಾಪುರೆ, ವಿಟuಲ ಕಟಕದೊಂಡ, ಮಲ್ಲೇಶಪ್ಪ ಹರಿಜನ, ಸಿದ್ದು ಬಂಡಿ, ಗಂಗರಾಜು, ಎಸ್.ಮಹಾದೇವಯ್ಯ. ಪ್ರಧಾನ ಕಾರ್ಯದರ್ಶಿಗಳು- ಚಿ.ನಾ.ರಾಮು, ಬಸವರಾಜ್ ನಾಯಕ್. ಕಾರ್ಯದರ್ಶಿ ಗಳು- ಭಾಗೀರಥಿ, ಹನು ಮಂತಪ್ಪ, ಬಸವರಾಜ ಧಡೇಸೂರ, ಧರ್ಮಣ್ಣ ಇಟಗಿ, ಯಲ್ಲಪ್ಪ ಬೆಂಡಿಗೇರಿ, ದಾಸಯ್ಯ, ಡಾ| ಜೀವರಾಜ್. ಕೋಶಾಧ್ಯಕ್ಷ- ಮಹೇಶ್‌ಬಾಬು. ಕಾರ್ಯಾಲಯ ಕಾರ್ಯದರ್ಶಿ- ಸಿದ್ದರಾಜು. ವಿಶೇಷ ಆಹ್ವಾನಿತರು- ವೀರಭದ್ರ ಹಾಲಹರವಿ, ಎಂ.ಚಂದ್ರಪ್ಪ, ಬಾಬುರಾವ್ ಚವಾಣ್.
Click this button or press Ctrl+G to toggle between Kannada and English