ಮಂಗಳೂರು : ನೆಹರೂ ಮೈದಾನದಲ್ಲಿ ಡಿಸೆಂಬರ್ 9 ರಂದು ನಡೆಯುವ ವಿಶ್ವಕೊಂಕಣಿ ಏಕತಾ ದಿವಸ್ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಭಾಗವಹಿಸಲಿದ್ದಾರೆ. ಅಂದು ಅವರು 11.30 ಗಂಟೆಗೆ ಬಜಪೆ ವಿಮಾಣ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಡಿಸೆಂಬರ್ 8 ರಂದು ಉಡುಪಿಯ ಮಣಿಪಾಲ್ ಯುನಿವರ್ಸಿಟಿಯ ಪದವಿ ಪ್ರಧಾನ ಸಮಾರಂಭದಲ್ಲೂ ಪಾಲ್ಗೊಳ್ಳಲಿದ್ದು ಅಂದು ಸಂಜೆ 3.50ಕ್ಕೆ ಬಜ್ಪೆ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಬಜ್ಪೆಗೆ ತೆರಳಲಿದ್ದಾರೆಂದು ಮಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಘ್ ಇಂದು ಅವರ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಗೆ ತಿಳಿಸಿದರು.
ರಾಷ್ಟ್ರಪತಿಗಳ ಆಗಮನ ಮತ್ತು ನಿರ್ಗಮನ ಸಮಯದಲ್ಲಿ ಭದ್ರತೆಯ ದೃಷ್ಟಿಯಿಂದ ಮತ್ತು ಸುಗಮ ಸಂಚಾರದ ದೃಷ್ಟಿಯಿಂದ ವಾಹನ ಸಂಚಾರದಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಲಾಗಿದ್ದು, ಅವರು ಸಂಚರಿಸುವ ಸಮಯದಲ್ಲಿ ಬೆಳಿಗ್ಗೆ 11.30 ಗಂಟೆಯಿಂದ 13.30 ಗಂಟೆಯ ತನಕ ಮತ್ತು ಸಂಜೆ 17.30 ರಿಂದ 18.30 ಗಂಟೆಯ ತನಕ ಸಂಚಾರ ಸುವ್ಯವಸ್ಥೆ ಮತ್ತು ಭದ್ರತೆಯ ದೃಷ್ಟಿಯಿಂದ ವಾಹನಗಳ ಸಂಚಾರದಲ್ಲಿ ಮಾರ್ಪಾಡು ಮಾಡಲಾಗುವುದು ಅಲ್ಲದೆ ನಗರದೊಳಗೆ ವಾಹನ ನಿಲುಗಡೆ ನಿಷೇಧವನ್ನು ಜ್ಯಾರಿಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ರಾಷ್ಟ್ರಪತಿಗಳು ಆಗಮಿಸುವ ರಸ್ತೆಯ ಇಕ್ಕೆಲಗಳಲ್ಲಿ ಬೆಳಿಗ್ಗೆ 08.00 ಗಂಟೆಯಿಂದ ಸಂಜೆ 6.30 ಗಂಟೆಯ ತನಕ ಎಲ್ಲಾ ತೆರನಾದ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ನಗರದ ವ್ಯಾಪ್ತಿಯಲ್ಲಿ ವಿಶೇಷವಾಗಿ ಈ ಕೆಳಗಿನ ಪಾರ್ಕಿಂಗ್ ಸ್ಥಳಗಳಲ್ಲಿ ಎಲ್ಲಾ ತೆರನಾದ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
* ಕೆಪಿಟಿಯಿಂದ ಸರ್ಕ್ಯುಟ್ ಹೌಸ್ ಜಂಕ್ಷನ್ ತನಕ ರಸ್ತೆಯ ಎರಡೂ ಬದಿಯಲ್ಲಿ ಎಲ್ಲಾ ತೆರನಾದ ವಾಃನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
* ನಂತೂರಿನಿಂದ ಶಿವಭಾಗ್ -ಆಗ್ನೆಸ್ – ಹಾರ್ಟಿಕಲ್ಚರ್ – ಬಲ್ಮಠ ತನಕ ರಸ್ತೆಯ ಎರಡೂ ಬದಿಯಲ್ಲಿ ಎಲ್ಲಾ ತೆರನಾದ ವಾಃನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
* ಬಲ್ಮಠ ವೃತ್ತದಿಂದ ಡಾ. ಅಂಬೇಡ್ಕರ್ ವೃತ್ತದ ತನಕ ರಸ್ತೆಯ ಎರಡೂ ಬದಿಯಲ್ಲಿ ಎಲ್ಲಾ ತೆರನಾದ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
* ಅಂಬೇಡ್ಕರ್ ವೃತ್ತದಿಂದ ಬಲ್ಮಠ ರಸ್ತೆಯಲ್ಲಿ ಹಂಪನಕಟ್ಟೆ ತನಕ ರಸ್ತೆಯ ಎರಡು ಬದಿಯಲ್ಲಿ ಎಲ್ಲಾ ತೆರನಾದ ವಾಃನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
* ಎಬಿ ಶೆಟ್ಟಿ ವೃತ್ತದಿಂದ ಹ್ಯಾಮಿಲ್ಟನ್ ವೃತ್ತದ ಮೂಲಕ ಬದ್ರಿಯಾ ಜಂಕ್ಷನ್ ತನಕ ರಸ್ತೆಯ ಎರಡೂ ಬದಿಯಲ್ಲಿ ಎಲ್ಲಾ ತೆರನಾದ ವಾಃನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ
* ಬಾವುಟಗುಡ್ಡೆ ರಸ್ತೆಯಲ್ಲಿ ಆಲುಕಾಸ್ ಎದುರಿನಿಂದ ಅಂಬೇಡ್ಕರ್ ವೃತ್ತದ ತನಕ ರಸ್ತೆಯ ಎರಡೂ ಬದಿಯಲ್ಲಿ ಎಲ್ಲಾ ತೆರನಾದ ವಾಃನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ
* ರಾಷ್ಟ್ರಪತಿಗಳ ಕಾನ್ ವಾಯ್ ಸಂಚರಿಸುವ ರಸ್ತೆಯಲ್ಲಿ ಎದುರು ಬದಿಯಿಂದ, ಬದಿಯ ಕೂಡು ರಸ್ತೆಗಳಿಗೆ ಮುಖ್ಯ ರಸ್ತೆಯ ಕಡೆಗೆ ಎಲ್ಲಾ ವಾಹನಗಳ ಪ್ರವೇಶ ಮತ್ತು ಸಂಚಾರವನ್ನು ನಿಷೇಧಿಸಲಾಗಿದೆ.
ಕಾರ್ಯಕ್ರಮಕ್ಕೆ ಕರ್ನಾಟಕ ಸರಕಾರದ ಗೌರವಾನ್ವಿತ ರಾಜ್ಯಪಾಲರು, ಕರ್ನಾಟಕ ಸರಕಾರದ ಗೌರವಾನ್ವಿತ ಮುಖ್ಯಮಂತ್ರಿಗಳು, ಜಾರ್ಖಂಡ್ ಸರಕಾರದ ಗೌರವಾನ್ವಿತ ರಾಜ್ಯಪಾಲರು ಸಹಾ ಆಗಮಿಸುವವರಿದ್ದಾರೆ. ಅವರುಗಳ ಆಗಮನ ಮತ್ತು ನಿರ್ಗಮನದ ಸಮಯವೂ ಅಗತ್ಯ ಪರಿಸ್ಥಿತಿಯಲ್ಲಿ ಸುಗಮ ಸಂಚಾರ ಹಾಗೂ ಭದ್ರತೆಯ ದೃಷ್ಟಿಯಿಂದ ಕೆಲವೊಂದು ವಾಹನ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಫೂಟ್ ಬಾಲ್ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬರುವ ವಾಹನಗಳಿಗೆ ಕಾರ್ಯಕ್ರಮದ ಸಂಘಟಕರು ಅಲ್ಲೇ ಪಾರ್ಕ್ ಮಾಡುಲು ವ್ಯವಸ್ಥೆಗೊಳಿಸಿದ್ದಾರೆ.
Click this button or press Ctrl+G to toggle between Kannada and English