ನವದೆಹಲಿ: ಮುರಳಿ ದಿಯೋರಾ, ವೀರಪ್ಪ ಮೊಯ್ಲಿ, ವಿ.ಕೆ ಸಿಬಲ್ , ಮುಖೇಶ್ ಅಂಬಾನಿ ಮತ್ತು ರಿಲಾಯನ್ಸ್ ಇಂಡಸ್ಟ್ರೀಸ್ ವಿರುದ್ಧ ಎಫ್‌ಐಆರ್ ದಾಖಲಿಸಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸೂಚನೆ ನೀಡಿದ್ದಾರೆ.
ಮಂಗಳವಾರ ದೆಹಲಿಯಲ್ಲಿ ಸುದ್ದಿಗೋಷ್ಠಿನ್ನುದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಅನಿಲ ಬೆಲೆ ಹೆಚ್ಚಳ ರಿಲಾಯನ್ಸ್ ಕಂಪನಿಯೇ ಕಾರಣ ಎಂದು ಹೇಳಿದ್ದಾರೆ. ರಿಲಾಯನ್ಸ್ ಕಂಪನಿ ಅನಿಲ ಬಾವಿ ಗುತ್ತಿಗೆಯ ವಿಚಾರದಲ್ಲಿ ಕೇಂದ್ರ ಗೋಲ್‌ಮಾಲ್ ನಡೆಸಿದೆ ಹಾಗು ರಿಲಾಯನ್ಸ್ ಕಂಪನಿ ದೇಶದಲ್ಲಿ ಅನಿಲವನ್ನು ಕೃತಕ ಸಂಗ್ರಹದಲ್ಲಿರಿಸಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ಏಪ್ರಿಲ್ 1ರಿಂದ ರಿಲಾಯನ್ಸ್ ಕಂಪನಿಸಾಧ್ಯತೆ ಇದೆ. ಒಂದು ವೇಳೆ ಅನಿಲ ಬೆಲೆ ಏರಿಕೆಯಾದರೆ ಇನ್ನುಳಿದ ಸಾಮಾಗ್ರಿಗಳ ಬೆಲೆಯೂ ಜಾಸ್ತಿಯಾಗಲಿದೆ. ಇದು ಸಾಮಾನ್ಯ ಮನುಷ್ಯನಿಗೆ ಇನ್ನಷ್ಟು ಹೊರೆಯಾಗಲಿದೆ.
ರಿಲಾಯನ್ಸ್ ಕಂಪನಿಯ ಅನಿಲ ಬೆಲೆ ಉತ್ಪನ್ನ ತಯಾರಿಯ ವೆಚ್ಚವನ್ನು ಆಧರಿಸಿಲ್ಲ ಹಾಗು ರಿಲಾಯನ್ಸ್‌ನೊಂದಿಗೆ ಕೇಂದ್ರ ಕೈಜೋಡಿಸಿದೆ ಎಂದು ಆರೋಪಿಸಿದ ದೆಹಲಿ ಸಿಎಂ ಮಾಜಿ ತೈಲ ಸಚಿವ ಮುರಳಿ ದಿಯೋರಾ, ಕೇಂದ್ರ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ, ಹೈಡ್ರೋಕಾರ್ಬನ್‌ನ ಮಾಜಿ ಡೈರೆಕ್ಟರ್ ಜನರಲ್ ವಿ.ಕೆ ಸಿಬಲ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸೂಚಿಸಿದ್ದಾರೆ.
ಈ ಬಗ್ಗೆ ತಾನು ಪ್ರಧಾನಿಗೆ ಪತ್ರ ಬರೆಯುವುದಾಗಿಯೂ ಕೇಜ್ರಿವಾಲ್ ಹೇಳಿದ್ದಾರೆ. ಆದಾಗ್ಯೂ, ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ದೆಹಲಿ ಚುನಾವಣೆಯಲ್ಲಿ ಲಂಚ ಪಡೆದುಕೊಂಡ ಕಾರಣವೇ ಪ್ರಸ್ತುತ ಸಮಸ್ಯೆ ಬಗ್ಗೆ ಮೌನವಹಿಸಿವೆ ಎಂದು ಕೇಜ್ರಿವಾಲ್ ವಿಪಕ್ಷಗಳ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
Click this button or press Ctrl+G to toggle between Kannada and English