6 ಸೀಮಾಂಧ್ರ ಸಂಸದರ ಉಚ್ಚಾಟನೆ

5:26 PM, Tuesday, February 11th, 2014
Share
1 Star2 Stars3 Stars4 Stars5 Stars
(4 rating, 6 votes)
Loading...

Six-simandhraನವದೆಹಲಿ: ಅಖಂಡ ಆಂಧ್ರಪ್ರದೇಶಕ್ಕೆ ಆಗ್ರಹಿಸಿ ಕಾಂಗ್ರೆಸ್ನ 6 ಸೀಮಾಂಧ್ರ ಸಂಸದರು ಸ್ವಪಕ್ಷದ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ಮಂಡಿಸುವ ಪ್ರಸ್ತಾಪ ಹಿನ್ನೆಲೆಯಲ್ಲಿ ಆರು  ಸಂಸದರನ್ನು ಯುಪಿಎ ಸರ್ಕಾರ ಮಂಗಳವಾರ ಅಮಾನತುಗೊಳಿಸಿದೆ.

ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ವಿರೋಧಿಸಿ ಸೀಮಾಂಧ್ರ ಸಂಸದರು ಉಭಯ ಸದನಗಳಲ್ಲಿ ವಿರೋಧಿಸುತ್ತಾ ಬಂದಿದ್ದರು. ಕಾಂಗ್ರೆಸ್ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ಮಂಡಿಸಲು ಮುಂದಾಗಿದ್ದ ಹಿನ್ನೆಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಆರೋಪದಡಿಯಲ್ಲಿ ಕಾಂಗ್ರೆಸ್ನ ಸೀಮಾಂಧ್ರ ಸಂಸದರಾದ ರಾಯಪಾಟಿ ಸಾಂಬಶಿವರಾವ್, ಸಬ್ಬಮ್ ಹರಿ, ಲಗಡಪಾಟಿ ರಾಜಗೋಪಾಲ್, ಉಂಡವಲ್ಲಿ ಅರುಣ್ ಕುಮಾರ್, ಹರ್ಷಕುಮಾರ್, ಸಾಯಿಪ್ರತಾಪ್ ಅವರನ್ನು ಪಕ್ಷದಿಂದಲೇ ಅಮಾನತು ಮಾಡಿದೆ.

ಸಂಸದರ ಅಮಾನತು ಕುರಿತಂತೆ ಇಂದು ನಡೆದ ಕಾಂಗ್ರೆಸ್ ಕೋರ್ ಕಮಿಟಿ ಸಭೆಯಲ್ಲಿ ಸೀಮಾಂಧ್ರ ಸಂಸದರನ್ನು ಅಮಾನತು ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಅಖಂಡ ಆಂಧ್ರಪ್ರದೇಶಕ್ಕೆ ಆಗ್ರಹಿಸಿ ಸೀಮಾಂಧ್ರ ಸಂಸದರು ಯುಪಿಎ ಕಾರ್ಯವನ್ನು ಟೀಕಿಸುತ್ತಾ ಬಂದಿದ್ದರು. ಅಲ್ಲದೆ ಸ್ವಪಕ್ಷದ ವಿರುದ್ಧವೇ ಸೀಮಾಂಧ್ರದ ಆರು ಸಂಸದರು ಅವಿಶ್ವಾಸ ಗೊತ್ತುವಳಿ ಮಂಡಿಸಲು ಮುಂದಾಗಿದ್ದರು. ಹೀಗಾಗಿ ಆರು ಸಂಸದರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಿದೆ ಎನ್ನಲಾಗಿದೆ.

ಕಾಂಗ್ರೆಸ್ ಕೋರ್ ಕಮಿಟಿ ಕೈಗೊಂಡಿರುವ ಸೀಮಾಂಧ್ರ ಸಂಸದರ ಉಚ್ಚಾಟನೆ ಕ್ರಮವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಸಮ್ಮತಿಯನ್ನು ಸೂಚಿಸಿದ್ದಾರೆಂದು ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English