ಮಂಗಳೂರಿಗೆ 2 ಹೊಸ ರೈಲುಗಳ ಭಾಗ್ಯ !

5:48 PM, Wednesday, February 12th, 2014
Share
1 Star2 Stars3 Stars4 Stars5 Stars
(4 rating, 6 votes)
Loading...

Manglore-Trainsಹೊಸದಿಲ್ಲಿ: ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯಲ್ಲಿಂದು ಮಂಡಿಸಿರುವ 2014-15ರ ಸಾಲಿನ ಮಧ್ಯಾಂತ್ರ ರೈಲ್ವೆ ಬಜೆಟ್‌ನಲ್ಲಿ ಮಂಗಳೂರಿಗೆ ಎರಡು ಹೊಸ ರೈಲುಗಳ ಭಾಗ್ಯ ಒದಗಿ ಬಂದಿದೆ.

ಈ ಎರಡು ಹೊಸ ರೈಲುಗಳೆಂದರೆ ಮಂಗಳೂರು – ಮಡಗಾಂವ್‌ ಇಂಟರ್‌ ಸಿಟಿ (ದಿನನಿತ್ಯ) ರೈಲು ಮತ್ತು ಮಂಗಳೂರು – ಕಾಚಿಗುಡ ರೈಲು. ಮಂಗಳೂರು – ಕಾಚಿಗುಡ ರೈಲು ಕೊಯಮುತ್ತೂರು, ರೆಣಿಂತಾ ಮತ್ತು ಗೂಟಿ ಮಾರ್ಗವಾಗಿ ಸಾಗಲಿದೆ.
ಈ ಎರಡೂ ಹೊಸ ರೈಲುಗಳಿಗೆ ಸ್ವತಃ ಸಚಿವ ಖರ್ಗೆ ಅವರೇ ಫೆ.23 ಅಥವಾ 24ರಂದು ಹಸಿರು ನಿಶಾನೆ ತೋರಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಎರಡು ಹೊಸ ರೈಲುಗಳು ಈ ವಲಯಕ್ಕೆ ಈ ಹಿಂದೆ ಪ್ರಕಟಿಸಲಾಗಿದ್ದ ನಾಲ್ಕು ರೈಲುಗಳಲ್ಲಿ ಸೇರಿವೆ. ಉಳಿದ ಎರಡು ರೈಲುಗಳೆಂದರೆ ಬೆಂಗಳೂರು – ಮಂಗಳೂರು (ವಾರಕ್ಕೊಮ್ಮೆ) ಮತ್ತು ಭಟ್ಕಳ – ತೋಕೂರು ನಡುವಿನ ಡೀಸಿಲ್‌ – ಇಲೆಕ್ಟ್ರಿಕ್‌ ಮಲ್ಪಿಪಲ್‌ ಯುನಿಟ್‌ (ಡಿಇಎಂಯು). ಮಂಗಳೂರು – ತಿರುಚಿನಾಪಳ್ಳಿ ಎಕ್ಸ್‌ಪ್ರೆಸ್‌ ರೈಲನ್ನು ಪುದುಚೇರಿ ವರೆಗೆ ವಿಸ್ತರಿಸಲಾಗಿರುವುದಾಗಿ ರೈಲ್ವೆ ಪ್ರಕಟನೆ ತಿಳಿಸಿದೆ. ಇದನ್ನು ಈಗಾಗಲೇ ಅನುಷ್ಠಾನಕ್ಕೆ ತರಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English