ಮಂಗಳೂರು : ಮಾಜಿ ಮೇಯರ್ ಕೆ. ಅಶ್ರಫ್ ಅವರು ಮಂಗಳೂರು ನಗರ ಕಾಂಗ್ರೇಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಇಂದು ಸಂಜೆ ಮಂಗಳೂರಿನ ಭಾರತೀಯ ಸ್ಕೌಟ್ ಮತ್ತು ಗೈಡ್ಸ್ ಭವನ ಲಾಲ್ಭಾಗ್ ಇಲ್ಲಿ ನಡೆದ ಸಮಾರಂಭದಲ್ಲಿ ಹಿಂದಿನ ಮಂಗಳೂರು ಉತ್ತರ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಸುರೇಶ್ ಬಲ್ಲಾಳ್ ಇವರಿಂದ ಬಿ. ಜನಾರ್ಧನ ಪೂಜಾರಿ ಇವರ ಸಮ್ಮಖದಲ್ಲಿ ಪದಗ್ರಹಣ ನಡೆಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿ ದೀಪ ಬೇಳಗಿಸುವುದರ ಮೂಲಕ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಹಿಂದೆ ಕಾಂಗ್ರೇಸ್ ಸಮಿತಿ ಅಧ್ಯಕ್ಷರುಗಳು ಪಕ್ಷದ ಅಭಿವೃದ್ದಿಗಾಗಿ ಹಾಕಿದ ಪಂಕ್ತಿಯಲ್ಲಿ ನೂತನ ಅಧ್ಯಕ್ಷರು ಮುನ್ನಡೆಸಿ ಕಾಂಗ್ರೇಸ್ಸಿನ ಯಶಸ್ಸಿಗಾಗಿ ಶ್ರಮಿಸಬೇಕಿದೆ. ಮುಂಬರುವ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಕಾಂಗ್ರೇಸ್ಸಿನ ಗೆಲುವಿಗಾಗಿ ಕೆಲಸಮಾಡಬೇಕಿದೆ ಎಂದು ಹೇಳಿದರು.
ಕಾಂಗ್ರೇಸ್ಸಿನ ಸಾಮಾನ್ಯ ಕಾರ್ಯಕರ್ತನಾಗಿ ಹಲವಾರು ವರ್ಷ ದುಡಿದು ಮೇಯರ್ ಆಗಿ ಸೇವೆ ಸಲ್ಲಿಸಿದ ಅನುಭವ ನೂತನ ಅಧ್ಯಕ್ಷರಿಗಿದೆ ಅವರು ಪಕ್ಷವನ್ನು ಇನ್ನಷ್ಟು ಬಲಿಷ್ಟಗೊಳಿಸಲು ಕಾರ್ಯಕರ್ತರನ್ನು ಬಲಗೊಳಿಸಬೇಕು ಎಂದು ಅವರು ಹೇಳಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಂಗ್ರೇಸ್ ಮುಖಂಡ ಇಬ್ರಾಹಿಂ ಕೋಡಿಜಾಲ್ ವಹಿಸಿದ್ದರು, ವೇದಿಕೆಯಲ್ಲಿ ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್, ಮಂಗಳೂರು ಶಾಸಕ ಯುಟಿ ಖಾದರ್, ಮಾಜಿ ಸಂಸದ ವಿನಯ ಕುಮಾರ್ ಸೊರಕೆ, ಮಹಮ್ಮದ್ ಮಸೂದ್, ಮಾಜಿ ಎಂ.ಎಲ್.ಎ ವಿಜಯಕುಮಾರ್ ಶೆಟ್ಟಿ, ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಐವನ್ ಡಿ ಸೋಜ, ಮೊದಿನ್ ಬಾವ, ಕೆಪಿಸಿಸಿ ಸದಸ್ಯ ಬದ್ರುದ್ದೀನ್, ಯುವ ಕಾಂಗ್ರೇಸ್ಸಿನಧ್ಯಕ್ಷ ಅರುಣ್ ಕುವೆಲ್ಲೋ, ಅಶೋಕ್ ಡಿ.ಕೆ., ಪದ್ಮನಾಭ ನರಿಂಗಾನ, ನೌಪಾಲ್, ಆಶ್ರಫ್, ನಾಗೇಂದ್ರ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಐವನ್ ಡಿ ಸೋಜ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿರ್ಗಮನ ಅಧ್ಯಕ್ಷ ಸುರೇಶ್ ಬಲ್ಲಾಳ್ ಸ್ವಾಗತಿಸಿದರು, ಮಾಜೀ ಮೇಯರ್ ಶಶಿಧರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು, ಈ ಸಂದರ್ಭದಲ್ಲಿ ಇಬ್ಬರು ಹಿರಿಯ್ ಕಾಂಗ್ರೆಸ್ಸ್ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು
ಮಾಧ್ಯಾಹ್ನ 3.30ಕ್ಕೆ ಬಂದರು ಗಾಂಧೀ ಸನ್ಸ್ ಬಳಿ ಬೃಹತ್ ಮೆರವಣಿಗೆಯನ್ನು ಕೇಂದ್ರ ಸಚಿವ ಆಸ್ಕರ್ ಫೆನಾಂಡೀಸ್ ಉದ್ಘಾಟಿಸಿದರು, ಮೆರವಣಿಗೆಯಲ್ಲಿ ಡೋಲು, ಬ್ಯಾಂಡು, ಬ್ಯಾರೀ ಪಾಟ್, ಗೊಂಬೆ ಹಾಗೂ ಸುಡು ಮದ್ದುಗಳ ಪ್ರದರ್ಶನ ನಡೆಯಿತು, ಕಾಂಗ್ರೇಸ್ಸ್ ಗಣ್ಯರು ಹಾಗೂ ನೂತನ ಅಧ್ಯಕ್ಷ ಕೆ. ಆಶ್ರಫ್ ಮೆರವಣಿಗೆಯಲ್ಲಿ ಸಾಗಿದರು.
Click this button or press Ctrl+G to toggle between Kannada and English