ಚುನಾವಣೆಯ ದೃಷ್ಟಿಯಿಂದ ಮಂಡಿಸಿದ ಗೊತ್ತು ಗುರಿಗಳಿಲ್ಲದ ಗಿಮಿಕ್ ಬಜೆಟ್: ಕ್ಯಾಪ್ಟನ್ ಕಾರ್ಣಿಕ್

2:16 PM, Saturday, February 15th, 2014
Share
1 Star2 Stars3 Stars4 Stars5 Stars
(5 rating, 7 votes)
Loading...

Ganesh Karnik

ಮಂಗಳೂರುಃ ರಾಜ್ಯದ ಜನತೆಯಲ್ಲಿ ಯಾವುದೇ ಹೊಸ ಬರವಸೆ ಮೂಡಿಸದ ಕೃಷಿ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಿ ರೈತರ ಸಮಸ್ಯೆಗಳಿಗೆ ಪರಿಹಾರವನ್ನು ಯೋಚಿಸದ ಕೇವಲ ಕಲವೇ ಸಮುದಾಯಗಳನ್ನು ಮುಂದಿಟ್ಟುಕೊಂಡು ಚುನಾವಣೆಗಾಗಿ ಮಂಡಿಸಿದ ಗಿಮಿಕ್ ಬಜೆಟ್ ಇದಾಗಿದೆ. ಈಗಾಗಲೇ 8 ಬಜೆಟ್ ಮಂಡಿಸಿ ಅರ್ಥಿಕ ತಜ್ಞರೆನಿಸಿಕೊಂಡಿದ್ದ ಸನ್ಮಾನ್ಯ ಮುಖ್ಯಮಂತ್ರಿಗಳಿಂದ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯ ನೀಲನಕ್ಷೆಯನ್ನು ನಿರೀಕ್ಷಿಸಿದ್ದ ಸಂದರ್ಭದಲ್ಲಿ ಈ ಬಜೆಟ್ ನಿರಾಶೆ ಮೂಡಿಸಿದೆ.

ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಾಲಾ ಕಾಲೇಜುಗಳನ್ನು ಅನುದಾನಕ್ಕೊಳಪಡಿಸುವ ಮಾನದಂಡವನ್ನು ಈ ಬಜೆಟ್ನಲ್ಲಿ ಕನಿಷ್ಟ ಇನ್ನೂ 5 ವರ್ಷಗಳಿಗೆ ಹೆಚ್ಚಿಸಬಹುದೆಂದು ನಿರೀಕ್ಷಿಸಿದ್ದ ಸಹಸ್ರಾರು ಶಿಕ್ಷಕರಿಗೆ ನಿರಾಶೆಯಾಗಿದೆ. ಅಲ್ಲದೆ ಅನುದಾನಿತ ಸಂಸ್ಥೆಗಳಲ್ಲಿ 2011 ಜೂನ್ವರೆಗೆ ನಿವೃತ್ತಿ/ನಿಧನದಿಂದ ತೆರವಾದ ಹುದ್ದೆಗಳನ್ನು ಭರ್ತಿ ಗೊಳಿಸಲು ಮಂಡಿಸಿದ್ದ ಪ್ರಸ್ತಾವನೆಯನ್ನು ಪುರಸ್ಕರಿಸದಿರುವುದರಿಂದ ಕನ್ನಡ ಮಾಧ್ಯಮ ಖಾಸಗಿ ಶಾಲೆಗಳ ಭವಿಷ್ಯ ಡೋಲಾನಮಯವಾಗಿದೆ. 1,38,808 ಕೋಟಿ ರೂಪಾಯಿಯ ಒಟ್ಟು ಬಜೆಟ್ನಲ್ಲಿ ಕೇವಲ ರೂ. 20,491 ಕೋಟಿ ಬಂಡವಾಳ ವೆಚ್ಚವಿರುವುದು ಅರ್ಥಿಕ ದುಸ್ಥಿತಿಗೆ ಹಿಡಿದ ಕೈಗನ್ನಡಿ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English