ಉಡುಪಿ : ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರ 80 ವರ್ಷದ ಅಭಿವಂದನಾ ಸಂತ ಸಮಾವೇಶ ವನ್ನು ಶುಕ್ರವಾರ ಸಂಜೆ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಅವರು ಕಾಂಚಿ ಶಂಕರಾಚಾರ್ಯರ ಮೇಲೆ ಕೊಲೆ ಆರೋಪ, ಆರೆಸ್ಸೆಸ್-ವಿ.ಹಿಂ.ಪಂ., ನಾಯಕರಿಗೆ ಹಿಂದು ಉಗ್ರಗಾಮಿ ಗಳೆಂಬ ಹಣೆಪಟ್ಟಿ ಕಟ್ಟಿರುವುದು, ಉಗ್ರಗಾಮಿಗಳನ್ನು ರಕ್ಷಿಸಲು, ನ್ಪೋಟ ನಡೆದಾಗ ಹಿಂದು ಉಗ್ರ ಗಾಮಿಗಳಿಂದ ನಡೆಯಿತೆಂಬ ಪುಕಾರು ಹುಟ್ಟಿಸುವುದೇ ಮೊದಲಾದ ಯತ್ನಗಳು ವ್ಯವಸ್ಥಿತ ವಾಗಿ ನಡೆಯುತ್ತಿದೆ. ಅಯೋಧ್ಯೆ, ತಿರುಪತಿಯಂತಹ ಸಮಸ್ಯೆಗಳು, ಅಸ್ಪರ್ಶ್ಯತೆಯಂತಹ ಸಮಸ್ಯೆಗಳು ಬಂದಾಗ ಪೇಜಾವರ ಶ್ರೀಗಳು ಆಗಾಗ್ಗೆ ಮಾರ್ಗದರ್ಶನ ನೀಡಿದ್ದರು. ವಿ.ಹಿಂ.ಪ. ಆರಂಭದಿಂದಲೂ ಮಾರ್ಗದರ್ಶನ ಮಾತ್ರವಲ್ಲ ತನ್ನೆಲ್ಲ ಶಕ್ತಿಗಳನ್ನೂ ಧಾರೆ ಎರೆದಿದ್ದಾರೆ. ಅಯೋಧ್ಯೆ ರಾಮಜನ್ಮ ಭೂಮಿ ಕುರಿತು ಎಲ್ಲ ಪುರಾವೆಗಳಿದ್ದರೂ ಮೂರು ಪಾಲು ಮಾಡಿ ಹಂಚಿರುವುದರ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುತ್ತೇವೆ. ಪೇಜಾವರ ಶ್ರೀಗಳ ನೇತೃತ್ವದಲ್ಲಿಯೇ ಭವ್ಯ ರಾಮಮಂದಿರವನ್ನು ಅಲ್ಲಿ ನಿರ್ಮಿಸುತ್ತೇವೆ ಎಂದು ಅವರುಹೇಳಿದರು.
ಪೇಜಾವರ ಶ್ರೀಗಳ ಕುರಿತು ಹೊರತಂದ ಸಾಕ್ಷ್ಯಚಿತ್ರ ‘ನೇತ್ಯಂತರ’ ಸಿಡಿಯನ್ನು ಪರ್ಯಾಯ ಶ್ರೀಶೀರೂರು ಮಠದ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು, ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕೊಲ್ಯದ ಶ್ರೀಸದ್ಗುರು ರಮಾನಂದ ಸ್ವಾಮೀಜಿ, ಆನೆಗುಂದಿ ಸಂಸ್ಥಾನದ ಶ್ರೀಕಾಳ ಹಸ್ತೇಂದ್ರ ಸರಸ್ವತೀ ಸ್ವಾಮೀಜಿ, ಬನ್ನಂಜೆ ಶ್ರೀರಾಘವೇಂದ್ರತೀರ್ಥ ಸ್ವಾಮೀಜಿ, ಶ್ರೀರಾಮ ಚಂದ್ರಾಪುರ ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ, ಗುರುಪುರ ಶ್ರೀರಾಜಶೇಖರಾನಂದ ಸ್ವಾಮೀಜಿ, ಕನ್ಯಾನ ಶ್ರೀರಾಮಕ್ಷೇತ್ರದ ಶ್ರೀ ಆತ್ಮಾನಂದಸರಸ್ವತೀ ಸ್ವಾಮೀಜಿ, ಆದಿಚುಂಚನ ಗಿರಿಯ ಮಂಗಳೂರು ಶಾಖಾ ಮಠದ ಶ್ರೀಧರ್ಮಪಾಲಾನಾಥ ಸ್ವಾಮೀಜಿ, ಕೇಮಾರು ಶ್ರೀಸಾಂದೀಪಿನೀ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ, ಮಾಣಿಲದ ಶ್ರೀಮೋಹನ ದಾಸ ಸ್ವಾಮೀಜಿ, ಬೊಲೊಟ್ಟುವಿನ ಶ್ರೀವಿಖ್ಯಾತಾನಂದ ಸ್ವಾಮೀಜಿ, ಮೂಡುಬಿದಿರೆ ಸತ್ಯ ನಾರಾಯಣ ಮಠದ ಕರಿಂಜೆ ಮುಕ್ತಾನಂದ ಸ್ವಾಮೀಜಿ, ಕೊಂಡೆವೂರಿನ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ, ಇಸ್ಕಾನ್‌ನ ಶ್ರೀಭಕ್ತಿ ವೇದಾಂತ ಸ್ವಾಮೀಜಿ ಅವರು ಅಭಿನಂದನಾ ಸಮಾವೇಶದಲ್ಲಿ ಆಶೀರ್ವಚನ ನೀಡಿದರು.
ಸಚಿವ ಡಾ|ವಿ.ಎಸ್.ಆಚಾರ್ಯ, ಶಾಸಕ ಕೆ.ರಘುಪತಿ ಭಟ್, ಭೀಮಾ ಜುವೆಲ್ಲರ್ಸಿ ಮಾಲಕ ಸುಧಾ ಮತ್ತು ಬಿ.ಲಕ್ಷ್ಮೀಕಾಂತನ್, ಉದ್ಯಮಿಗಳಾದ ಮುಂಬಯಿಯ ತೋನ್ಸೆ ಜಯಕೃಷ್ಣ ಶೆಟ್ಟಿ, ಬೆಂಗಳೂರಿನ ಎಸ್.ಸದಾನಂದ ಮಡಿ, ಚೆನ್ನೆçನ ರಾಮಪ್ರಸಾದ್ ಉಪಸ್ಥಿತರಿದ್ದರು. ಅತಿಥಿ ಸತ್ಕಾರ ಸಮಿತಿ ಅಧ್ಯಕ್ಷ ಭಾಸ್ಕರ ಶೆಟ್ಟಿ ಸ್ವಾಗತಿಸಿ ವಾಸುದೇವ ಭಟ್ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English