ಮಂಗಳೂರು; ಬಿಎಸ್ಎನ್ಎಲ್ ದಿನಕೂಲಿ ಕಾರ್ಮಿಕರ ಕೆಲಸದ ಭದ್ರತೆಗಾಗಿ ಸಿಐಟಿಯು ವತಿಯಿಂದ ಒಂದು ದಿನದ ಧರಣಿ ಸತ್ಯಾಗ್ರಹವು ಇಂದು ಬೆಳಿಗ್ಗೆ ನಗರದ ಬಿಎಸ್ಎನ್ಎಲ್ ಪ್ರಧಾನ ಕಛೇರಿ ಮುಂದುಗಡೆ ನಡೆಯಿತು.
ಕೇಂದ್ರ ಸರಕಾರದ ಅಧೀನತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಎಸ್ಎನ್ಎಲ್ ಪ್ರಧಾನ ಕಛೇರಿ ಹಾಗೂ ಎಲ್ಲಾ ಎಕ್ಸ್ಚೇಂಚ್ ಕೇಂದ್ರಗಳಲ್ಲಿ ದಿನಕೂಲಿ ಕಾರ್ಮಿಕರಿಗಾಗಿ ಗುತ್ತಿಗೆದಾರರ ಅಡಿಯಲ್ಲಿ ಕಳೆದ 12 ವರ್ಷಗಳಿಂದ ವೇತನ ಹೊರತು ಪಡಿಸಿ ಯಾವುದೇ ಸವಲತ್ತುಗಳಿಲ್ಲದೆ ದುಡಿಯುತ್ತಿದ್ದಾರೆ. ಕೆಲಸದ ಒತ್ತಡಗಳ ಮಧ್ಯೆ ಗ್ರಾಹಕರಿಗೆ ಅನುಕೂಲವಾಗುವಂತೆ ಸದಾ ದುಡಿಯುತ್ತಿರುವ ಈ ಕಾರ್ಮಿಕರಿಗೆ ಕೆಲಸದ ಭದ್ರತೆಯಿಲ್ಲ ನಿಗದಿತ ಸಮಯಕ್ಕೂ ಮೀರಿ ದುಡಿಯುವ ಈ ಕಾರ್ಮಿಕರಿಗೆ ಯಾವುದೇ ಹೆಚ್ಚುವರಿ ವೇತನವಿಲ್ಲ. ದುಡಿಮೆಯ ಸಂದರ್ಭದಲ್ಲಿ ಅವಘಡಗಳಾದರೆ ಕೇಳುವ ಗತಿಯಿಲ್ಲ, ಬೋನಸ್ಸು, ರಜೆ, ಸಂಬಳ ಇಲ್ಲವೇ ಇಲ್ಲ, ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವ ಈ ಸಂದರ್ಭದಲ್ಲಿ ಹೊಟ್ಟೆಗೆ ಬಟ್ಟೆ ಕಟ್ಟಿ ದುಡಿಯುವ ಈ ಕಾರ್ಮಿಕರ ಬವಣೆಗಳಿಗೆ ಮಿತಿ ಇಲ್ಲವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಂತೇಶ್ ಹೇಳಿದರು
ಅವರು ದಿನಕೂಲಿ ಕಾರ್ಮಿಕರ ಕೆಲಸದ ಭದ್ರತೆಗಾಗಿ ಸಿಐಟಿಯು ವತಿಯಿಂದ ಬಿಎಸ್ಎನ್ಎಲ್ ಪ್ರಧಾನ ಕಛೇರಿ ಮುಂದುಗಡೆ ಇಂದು ಬೆಳಿಗ್ಗೆ ನಡೆದ ಪ್ರತಿಭಟನಾ ಧರಣಿಯನ್ನುದ್ದೇಶಿಸಿ ಮಾತನಾಡಿದರು. ಈಗ ಬಿಎಸ್ಎನ್ಎಲ್ ಆಡಳಿತ ವರ್ಗ ಖರ್ಚು ಕಡಿಮೆಗೊಳಿಸುವ ನಷ್ಟವನ್ನು ಒಡ್ಡಿ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆಯುತ್ತಿದ್ದು ಸಂಸ್ಥೆಗಾಗಿ ದುಡಿಯುತ್ತಿರುವ ಕಾರ್ಮಿಕರ ಸ್ಥಿತಿ ಇನ್ನೂ ಚಿಂತಾಜನಕವಾಗುತ್ತದೆ. ಈ ಬಗ್ಗೆ ತಾ. 2-12-20 ರಂದು ಬಿಎಸ್ಎನ್ಎಲ್ ಜನರಲ್ ಮೇನೇಜರ್ ರವರಿಗೆ ಮನವಿಯನ್ನು ಯೂನಿಯನ್ ಮುಖಾಂತರ ನೀಡಿ “ಯಾವುದೇ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆಯಬಾರದಾಗಿ” ಒತ್ತಾಯಿಸಲಾಗಿದೆ ಎಂದು ಅವರು ಹೇಳಿದರು
ವೇಣುಗೋಪಾಲ್ ನಂಬಿಯಾರ್, ಗೌರವಾಧ್ಯಕ್ಷರು, ವಸಂತ ಆಚಾರಿ, ಅಧ್ಯಕ್ಷರು, ಬಾಲಕೃಷ್ಣ ಬಿ, ಪ್ರಧಾನ ಕಾರ್ಯದರ್ಶಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English