ಮಂಗಳೂರು: ಜನವರಿ 2 ರಂದು ಹನುಮತ್ ಶಕ್ತಿ ಜಾಗರಣಾ ಸಮಿತಿ ಮಂಗಳೂರು ಇದರ ವತಿಯಿಂದ ಮಂಗಳೂರಿನ ನೆಹರೂ ಮೈದಾನಿನಲ್ಲಿ ನಡೆಯಲಿರುವ ಹಿಂದೂ ಸಮಾಜೋತ್ಸವದ ಕಾರ್ಯಾಲಯವನ್ನು ಇಂದು ಬೆಳಿಗ್ಗೆ ನಗರದ ಬಂಟ್ಸ್ ಹಾಸ್ಟೆಲ್ ಸಮೀಪ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಉದ್ಘಾಟಿಸಿದರು.
ಹಿಂದೂಗಳು ಎಚ್ಚೆತ್ತುಕೊಂಡಲ್ಲಿ ಸಮಾಜದ ಅಭಿವೃದ್ಧಿಸಾಧ್ಯ, ಭಾರತದ ಪ್ರತಿಯೊಬ್ಬ ಪ್ರಜೆಯೂ ಹಿಂದುತ್ವವನ್ನು ಗೌರವಿಸಬೇಕು ಹಿಂದೂ ಸಮಾಜೋತ್ಸವಗಳು ಪರರಿಗೆ ಮಾರ್ಗದರ್ಶನವಾಗುವಂತೆ ಕಾರ್ಯಕರ್ತರು ಶ್ರಮವಹಿಸಬೇಕಿದೆ ಎಂದು ಡಾ. ಪ್ರಭಾಕರ ಭಟ್ ಕಲ್ಲಡ್ಕ ತನ್ನ ಉದ್ಘಾಟನಾ ಭಾಷಣದಲ್ಲಿ ಹೇಳಿದರು.
ಕೊಲ್ಯ ರಮಾನಂದ ಸ್ವಾಮೀಜಿಯವರು ಮಾತನಾಡಿ ಹಿಂದೂ ಸಮಾಜವನ್ನು ಸುಸಂಪನ್ನತೆಗೊಳಿಸಿದರೆ ಮಾತ್ರ ಧರ್ಮ ಜಾಗೃತಿ ಸಾಧ್ಯ. ಹಿಂದುಗಳೆಲ್ಲರೂ ಒಗ್ಗಟ್ಟಾದರೆ ಹಿಂದೂ ಸಮಾಜೋತ್ಸವವನ್ನು ಯಶಸ್ವೀಗೊಳಿಸಬಹುದು. ಭಾರತವನ್ನು ನಾವು ಹಿಂದೂ ರಾಷ್ಟ್ರವನ್ನಾಗಿ ಸಂಘಟಿಸಬೇಕು. ವಿದೇಶಿಯನೊಬ್ಬ ಹೇಳುತ್ತಾನೆ ನನ್ನಲ್ಲಿ ಸಂಪತ್ತು, ಐಶ್ವರ್ಯವಿದ್ದರೂ ನಾನು ಶಾಂತಿ, ನೆಮ್ಮದಿಯನ್ನೂ ಹಿಂದೂ ದೇಶದಲ್ಲಿ ಕಾಣುತ್ತಿದ್ದೇನೆ ಎಂದು ಆಶೀರ್ವಚನ ನೀಡಿದರು.
ಡಾ.ಎಂ.ಬಿ ಪುರಾಣಿಕ್, ಜಗದೀಶ್ ಶೇಣವ, ಮನೋಹರ ತುಲಜಾರಾಂ, ರವಿಶಂಕರ್ ಮಿಜಾರ್ ಮೊದಲಾದವರು ಉಪಸ್ಥಿತರಿದ್ದರು.
ಹನುಮತ್ ಶಕ್ತಿ ಜಾಗರಣಾ ಸಮಿತಿ ಮಂಗಳೂರು ಮಹಾನಗರ ಇದರ ವತಿಯಿಂದ ನಡೆಯಲಿರುವ ಹಿಂದೂ ಸಮಾಜೋತ್ಸವದ ಭವ್ಯ ಶೋಭಾಯಾತ್ರೆಯು ಮಧ್ಯಾಹ್ನ 3 ಗಂಟೆಗೆ ಜ್ಯೋತಿ ವೃತ್ತದಿಂದ ಹೊರಟು ಸಂಜೆ 4 ಗಂಟೆಗೆ ನಗರದ ನೆಹರೂ ಮೈದಾನದಲ್ಲಿ ನಡೆಯಲಿರುವುದು. ಡಾ. ಪ್ರವೀಣ್ ಬಾ ತೊಗಾಡಿಯಾ ಪ್ರಾಧಾನ ಭಾಷಣ ಮಾಡಲಿದ್ದಾರೆ
Click this button or press Ctrl+G to toggle between Kannada and English