ತುಳು ನಾಟಕ ರಂಗದ ಹಿರಿಯ ಕಲಾವಿದರಿಗೆ ಹಾಗೂ ತಜ್ಞರಿಗೆ ಸನ್ಮಾನ

10:29 PM, Thursday, December 16th, 2010
Share
1 Star2 Stars3 Stars4 Stars5 Stars
(No Ratings Yet)
Loading...

ತುಳು ನಾಟಕ ಕಲಾವಿದರ ಒಕ್ಕೂಟಮಂಗಳೂರು : ತುಳು ನಾಟಕ ಕಲಾವಿದರ ಒಕ್ಕೂಟ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇವುಗಳ ಸಹಯೋಗದಲ್ಲಿ ತುಳು ನಾಟಕ ರಂಗದ ಹಿರಿಯ ಕಲಾವಿದರ ಹಾಗೂ ತಜ್ಞರ ಪ್ರಥಮ ಹಂತದ ಸನ್ಮಾನ ಸಮಾರಂಭವು ಇಂದು ಸಂಜೆ ಮಂಗಳೂರು ಪುರಭವನದಲ್ಲಿ ನಡೆಯಿತು.
ತುಳು ನಾಟಕ ಕಲಾವಿದರ ಒಕ್ಕೂಟಸನ್ಮಾನ ಸಮಾರಂಭದ ದೀಪ ಜ್ವಲನೆಯನ್ನು ಶರವು ಮಹಾಗಣಪತಿ ದೇವಸ್ಥಾನ, ಮಂಗಳೂರು ಇದರ ಆಡಳಿತ ಮೊಕ್ತೇಶರರಾದ ಎಸ್. ರಾಘವೇಂದ್ರ ಶಾಸ್ತ್ರಿ ನಡೆಸಿ ಕೊಟ್ಟರು. ಬಳಿಕ ಮಾತನಾಡಿದ ಅವರು ದೀಪ ಕತ್ತಲೆಯನ್ನು  ದೂರ ಸರಿಸಿ ಬೆಳಕನ್ನು ನೀಡುತ್ತದೆ, ಅದೇ ರೀತಿ ತುಳು ನಾಟಕ ಕಲಾವಿದರ ಒಕ್ಕೂಟ ಕತ್ತಲೆಯಲ್ಲಿರುವ ಅಶಕ್ತ ಕಲಾವಿದರನ್ನು ಬೆಳಕಿನೆಡೆಗೆ ತರುವ ಪ್ರಯತ್ನ ಮಾಡುತ್ತಿದೆ. ಯಾವುದೇ ಕಲಾವಿದ ದೇವರ ಆಶೀರ್ವಾದವಿಲ್ಲದೆ ಕಲೆಯನ್ನು ಪ್ರದರ್ಶಿಸಲಾರ, ಈ ಒಕ್ಕೂಟವು ದೇವರ ಆಶೀರ್ವಾದದೊಂದಿಗೆ ಜನರ ಬೆಂಬಲ ಪಡೆದು ವಿಶ್ವದಲ್ಲೇ ಹೆಸರು ಪಡೆದು ಅಶಕ್ತ ಕಲಾವಿದರಿಗೆ ನೆರವು ನೀಡಲಿ ಎಂದು ಹಾರೈಸಿದರು.
ತುಳು ನಾಟಕ ಕಲಾವಿದರ ಒಕ್ಕೂಟ-ನಾಟಕಕಾರ ಭೋಜ ಸುವರ್ಣ

ತುಳು ನಾಟಕ ಕಲಾವಿದರ ಒಕ್ಕೂಟನಾಟಕಕಾರ ಭೋಜ ಸುವರ್ಣ, ನಿರ್ದೇಶಕ ಎಂ.ಗಣೇಶ ರೈ, ಪ್ರಸಾದನ ಕಲಾವಿದ ಎ.ಕೃಷ್ಣನಾಯಕ್, ರಂಗ ನಟ ಬಿ.ಎನ್.ರಾವ್, ರಂಗ ನಟಿ ರೋಹಿಣಿ ಜಗರಾಂ, ಶಾರದಾ ಇಲೆಕ್ಟ್ರಿಕಲ್ಸ್ ಮಾಲಕರನ್ನು ಶಾಲು ಹೊದಿಸಿ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ತುಳು ನಾಟಕ ಕಲಾವಿದರ ಒಕ್ಕೂಟಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಎಲ್.ಶೇಟ್ ಜ್ಯುವೆಲ್ಲರ್ಸ್ ಮಾಲಕ ಎಂ. ರಘುನಾಥ್ ಶೇಟ್ ವಹಿಸಿದ್ದರು. ಮುಖ್ಯ ಅತಿಥಿಗಾಗಿ ತುಳು ಚಲನ ಚಿತ್ರ ನಿರ್ಮಾಪಕ ಟಿ.ಎ. ಶ್ರೀನಿವಾಸ್, ನ್ಯಾಯವಾದಿ ಕೆ.ಗೋವಿಂದರಾಜ್ ಬೆಂಗಳೂರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ. ಸೀತಾರಾಂ ಕುಲಾಲ್ ಭಾಗವಹಿಸಿದ್ದರು, ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಅಚ್ಯುತ ಕಲ್ಲಾಪು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತುಳು ನಾಟಕ ಕಲಾವಿದರ ಒಕ್ಕೂಟಶರಣ್ ಕುಮಾರ್ ಕಾರ್ಯಕ್ರಮ ನಿರೂಪಿದರು. ಮುರಳೀಧರ ಕಾಮತ್ ಮತ್ತು ಬಳಗದವರಿಂದ ತುಳು ಹಾಡುಗಳ ರಸಮಂಜರಿ ನಡೆಯಿತು.

ತುಳು ನಾಟಕ ಕಲಾವಿದರ ಒಕ್ಕೂಟ

ತುಳು ನಾಟಕ ಕಲಾವಿದರ ಒಕ್ಕೂಟ

ತುಳು ನಾಟಕ ಕಲಾವಿದರ ಒಕ್ಕೂಟ

ತುಳು ನಾಟಕ ಕಲಾವಿದರ ಒಕ್ಕೂಟ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English