ನವದೆಹಲಿ : ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕ್ಯಾಂಪಸ್‌ನಲ್ಲಿ ಅಗ್ನಿ ಆಕಸ್ಮಿಕವಾಗಿರುವ ಘಟನೆ ಸೋಮವಾರ ವರದಿಯಾಗಿದ್ದು, ಬಲ್ಲ ಮೂಲಗಳಿಂದ ತಿಳಿದುಬಂದಿರುವಂತೆ ಕೆಮೆಸ್ಟ್ರಿ ಲ್ಯಾಬ್‌ನಲ್ಲಿ ಉಂಟಾದ ಸಣ್ಣ ಪ್ರಮಾಣದ ನ್ಪೋಟದಿಂದ ಕಾಣಿಸಿಕೊಂಡ ಬೆಂಕಿ ಬಳಿಕ ಕಟ್ಟಡ ವಿವಿಧ ಕಡೆಗೆ ಹಬ್ಬಲಾರಂಭಿಸಿತು, ಬಳಿಕ ಈ ಬೆಂಕಿ ಪಕ್ಕದಲ್ಲಿಯೇ ಇದ್ದ ಹಾಸ್ಟೆಲ್ ಕಟ್ಟಡಕ್ಕೂ ಹಬ್ಬಿತು ಎಂದು ತಿಳಿದುಬಂದಿದೆ.
ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಕಾಲೇಜು ಕ್ಯಾಂಪಸ್ಸಿನಲ್ಲಿ ಹರಡಿಕೊಳ್ಳಲಾರಂಭಿಸಿದಂತೆ ಅಲ್ಲಿದ್ದ ವಿದ್ಯಾರ್ಥಿಗಳಲ್ಲಿ ಹಾಗೂ ಉಪನ್ಯಾಸಕ ವರ್ಗದಸರಲ್ಲಿ ಭೀತಿಯ ವಾತಾವರಣ ಮೂಡಲ ಕಾರಣವಾಯಿತು. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿಯನ್ನು ನೀಡಲಾಯಿತು. ಸಮಾರು ಏಳು ಅಗ್ನಿಶಾಮಕ ವಾಹನಗಳು ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಿಯಂತ್ರಿಸುವ ಕಾರ್ಯದಲ್ಲಿ ನಿರತವಾದವು.
ಇದೀಗ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದ್ದು ಎಲ್ಲರೂ ಸುರಕ್ಷಿತವಾಗದ್ದಾರೆ ಎಂಬುದಾಗಿ ತಿಳಿದುಬಂದಿದೆ. ಆದಾಗ್ಯೂ ಈ ಅಗ್ನಿ ಆಕಸ್ಮಿಕಕ್ಕೆ ನಿಖರ ಕಾರಣವೆನೆಂಬುದು ಇನ್ನಷ್ಟೇ ಪತ್ತೆಯಾಗಬೇಕಾಗಿದೆ.
Click this button or press Ctrl+G to toggle between Kannada and English