ಮಂಗಳೂರು: ಕಳೆದ ಕೆಲವು ವರ್ಷಗಳಿಂದ ಬಾಂಗ್ಲಾ ನುಸುಳುಕೋರರು ನಿರಂತರ ಭಾರತಕ್ಕೆ ನುಸುಳುತ್ತಿದ್ದಾರೆ. ಈ ದೇಶದ ಅರ್ಥವ್ಯವಸ್ಥೆ ಹಾಗೂ ಆತಂರಿಕ ಭದ್ರತೆಗೆ ಅಪಾಯ ತರುತ್ತಿದ್ದಾರೆ. ಅಸ್ಸಾಂನಿಂದ ಪ್ರಾರಂಭವಾದ ಈ ಕಳ್ಳ ನುಸುಳುವಿಕೆ ಇಡೀ ದೇಶವನ್ನು ವ್ಯಾಪಿಸಿ ಸಂಕಟಮಯ ಪರಿಸ್ಥಿಯನ್ನು ತಂದಿದೆ. ಆಯಾ ರಾಜ್ಯಗಳಲ್ಲಿ ನುಸುಳುಕೋರರಿಂದ ಲೂಟಿ, ಭಯೋತ್ಪಾದನೆ, ಡಕಾಯಿತಿ ಮುಂತಾದ ಅಪರಾಧಿ ಕೃತ್ಯಗಳಲ್ಲಿ ಸೇರಿಕೊಂಡಿದ್ದಾರೆ. ಒಂದೆಡೆ ಈ ಕಳ್ಳ ನುಸುಳುವಿಕೆ ಗಂಭೀರ ಅಪಾಯವನ್ನು ತಂದೊಡ್ಡಿದರೆ ಇನ್ನೊಂದೆಡೆ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ಅತ್ಯಾಚಾರ, ಸಂಪತ್ತನ್ನು ಲೂಟಿಮಾಡುವುದು ಈ ಕೃತ್ಯಗಳಿಂದ ಬಾಂಗ್ಲಾದೇಶದಿಂದ ಹಿಂದುಗಳು ಓಡಿ ಹೋಗುವ ವಾತಾವರಣ ನಿರ್ಮಾಣ ಮಾಡಿದೆ ಎಂದು ವಿಶ್ವಹಿಂದೂ ಪರಿಷತ್ ಸಂಚಾಲಕ ಜಗದೀಶ ಶೇಣವ ಹೇಳಿದರು.
ಅವರು ಫೆಬ್ರವರಿ 25 ಮಂಗಳವಾರ ದಂದು ಜಿಲ್ಲಾಧಿಕಾರಿ ಕಛೇರಿ ಬಳಿ ನಡೆದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಬಾಂಗ್ಲಾದೇಶಿಯರ ಕಳ್ಳ ನುಸುಳುವಿಕೆ ಮತ್ತು ಬಾಂಗ್ಲಾದೇಶದಲ್ಲಿ ನಡೆಯುವ ದೌರ್ಜನ್ಯ ಅತ್ಯಾಚಾರಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮತನಾಡಿದರು. ಭಾರತ ಸರಕಾರವು ಸೂಕ್ತ ರಾಜತಾಂತ್ರಿಕ ಪ್ರಯತ್ನಗಳ ಮೂಲಕ ಬಾಂಗ್ಲಾದೇಶದ ಸರಕಾರದ ಮೇಲೆ ಒತ್ತಡವನ್ನು ತಂದು ಹಿಂದುಗಳನ್ನು ಸುರಕ್ಷಿತರನ್ನಾಗಿ ಮಾಡಬೇಕಾಗಿದೆ. ಬಾಂಗ್ಲಾದೇಶದ ಪರಿಸ್ಥಿತಿಯ ಕಾರಣದಿಂದಾಗಿ ಭಾರತಕ್ಕೆ ಶರಣಾರ್ಥಿಗಳಾಗಿ ಬರುತ್ತಿರುವ ಹಿಂದುಗಳ ವಸತಿ ವ್ಯವಸ್ಥೆಗಳು ಭಾರತದಲ್ಲಿ ಆಗಬೇಕು. ಹಿಂದೂ ಶರಣಾರ್ಥಿ ಮತ್ತು ಬಾಂಗ್ಲಾದೇಶಿ ನುಸುಳುಕೋರರನ್ನು ಪ್ರತ್ಯೇಕವಾಗಿ ಮತ್ತು ಸ್ಪಷ್ಟವಾಗಿ ಗುರುತಿಸುವ ವ್ಯವಸ್ಥೆ ಆಗಬೇಕಾಗಿದೆ. ಗೌರವಾನ್ವಿತ ಸವರ್ೋಚ್ಚ ನ್ಯಾಯಲಯವು ಸಹ ಬಾಂಗ್ಲಾದೇಶಿ ನುಸುಳುಕೋರರನ್ನು ಗುರುತಿಸಿ ಹೊರಹಾಕುವ ನಿದರ್ೇಶನವನ್ನು ನೀಡಿದೆ, 1951 ರ ನಂತರ ಭಾರತದೊಳಗೆ ಬಂದವರಿಗೆ ಮತದಾನದ ಹಕ್ಕನ್ನು ಸಹ ನೀಡಲಾಗಿದೆ. ಆಸ್ಸಾಂಮಿನಲ್ಲಿ `ಡಿ ವೊಟರ್ ಹೆಸರಿನಲ್ಲಿರುವ ವ್ಯಕ್ತಿಗಳನ್ನು ತಕ್ಷಣವೇ ದೇಶದಿಂದ ಹೊರಹಾಕಬೇಕು ಹಾಗೂ ಗಡಿ ಭದ್ರತಾ ಸೈನಿಕರಿಗೆ ಶಕ್ತಿ ತುಂಬಿ ಹೆಚ್ಚಿನ ಅಧಿಕಾರ ನೀಡಬೇಕು ಮತ್ತು ಈ ಕೂಡಲೇ ಗಡಿ ಜಿಲ್ಲೆಗಳನ್ನು ಭದ್ರಗೊಳಿಸಿ ಬಿಗಿ ಪಹರೆ ಹಾಕಬೇಕೆಂದು ಒತ್ತಾಯಿಸಿದರು.
ಬುಜಂಗ ಕುಲಾಲ್, ಗೋಪಾಲ್ ಕುತ್ತಾರ್, ಶಿವಾನಂದ ಮೆಂಡನ್, ಪ್ರವೀಣ್ ಕುತ್ತಾರ್, ಶ್ರೀಧರ್ ಭಟ್ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು
Click this button or press Ctrl+G to toggle between Kannada and English