ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಆಶ್ರಯದಲ್ಲಿ ಪುರಭವನದಲ್ಲಿ ಸಿಂಹಗಳ ನಡುವೆ ಕನ್ನಡದ ಕಲರವ

10:15 PM, Friday, December 17th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಸಿಂಹಗಳ ನಡುವೆ ಕನ್ನಡದ ಕಲರವ ಮಂಗಳೂರು : ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಆಶ್ರಯದಲ್ಲಿ ಮಂಗಳೂರಿನ ಪುರಭವನದಲ್ಲಿ ಇಂದು  ಬೆಳಗ್ಗೆ ಸಿಂಹಗಳ ನಡುವೆ ಕನ್ನಡದ ಕಲರವ ಎನ್ನುವ ಶೀರ್ಷಿಕೆಯಡಿ ಲಯನ್ಸ್ ಕನ್ನಡ ಸಾಹಿತ್ಯ-ಸಂಸ್ಕೃತಿ ಸಮ್ಮೇಳನವು    ನಡೆಯಿತು.    ಸಮ್ಮೇಳನಾಧ್ಯಕ್ಷರನ್ನು ಹಾಗೂ ಉದ್ಘಾಟಕರನ್ನೂ ಮೆರವಣಿಗೆ ಮೂಲಕ ಪುರಭವನಕ್ಕೆ ಕರೆ ತರಲಾಯಿತು. ಬಳಿಕ ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಲಯನ್ಸ್ ಕನ್ನಡ ಸಾಹಿತ್ಯ-ಸಂಸ್ಕೃತಿ ಸಮ್ಮೇಳನವನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.  ಸಮ್ಮೇಳನದ ಸಮ್ಮೇಳನಾಧ್ಯಕ್ಷತೆಯನ್ನು ಹಿರಿಯ  ಸಾಹಿತಿ ಹೆಚ್.ದುಂಡಿರಾಜ್ ಅವರು ವಹಿಸಿದ್ದರು.
ಸಿಂಹಗಳ ನಡುವೆ ಕನ್ನಡದ ಕಲರವ

ಸಿಂಹಗಳ ನಡುವೆ ಕನ್ನಡದ ಕಲರವ ಉದ್ಘಾಟನೆ ಬಳಿಕ ಮಾತನಾಡಿದ ಹೆಗ್ಗಡೆಯವರು ಅಂಗ್ಲ ಭಾಷೆಯ ಜೊತೆಗೆ ಕನ್ನಡ ಭಾಷೆಗೂ ಪ್ರಾಧಾನ್ಯತೆ ನೀಡಬೇಕು ಆಂಗ್ಲ ಭಾಷೆಯಿಂದ ಕನ್ನಡ ಶ್ರೀಮಂತವಾಗಿದೆ ನಿಜ ಆದರೆ ಅದರ ದಾಸರಾಗಬಾರದು ಎಂದು ಹೇಳಿದರು. ನಾಡಿನ ಸಂಸ್ಕೃತಿಯನ್ನು ಬೆಳೆಸುವ ಲಯನ್ಸ್ ಕ್ಲಬ್ಬಿನ್ ಈ ಕಾರ್ಯ ಅಬಿನದನಿಯ ಎಂದು ಅವರು ಹೇಳಿದರು.
ಸಿಂಹಗಳ ನಡುವೆ ಕನ್ನಡದ ಕಲರವ

ಸಿಂಹಗಳ ನಡುವೆ ಕನ್ನಡದ ಕಲರವ ಸಮಾರಂಭದ ಮುಖ್ಯ ಅತಿಥಿಗಳಾದ ಕರ್ಣಾಟಕ ಬ್ಯಾಂಕ್‌ನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಪಿ.ಜಯರಾಮ್ ಭಟ್, ಉದಯವಾಣಿ ಪತ್ರಿಕೆಯ ಮಂಗಳೂರು ಸುದ್ಧಿ ವಿಭಾಗದ ಮುಖ್ಯಸ್ಥರಾದ ಮನೋಹರ್ ಪ್ರಸಾದ್, ಕಸಾಪ ಜಿಲ್ಲಾಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ನಗರದ ಖ್ಯಾತ ಉದ್ಯಮಿ ಅಬ್ದುಲ್ ರೌಫ್ ಪುತ್ತಿಗೆ ಮೊದಲಾದವರು ಭಾಗವಹಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು, ಇದರ ಸಹಾಯಕ ನಿರ್ದೇಶಕರಾದ ಶ್ರೀಮತಿ ಮಂಗಳ ನಾಯಕ್ ಅವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಿಂಹಗಳ ನಡುವೆ ಕನ್ನಡದ ಕಲರವ ಸಮ್ಮೇಳನದ ವಿಶೇಷ ಸಂಚಿಕೆಯನ್ನು ಲಯನ್ಸ್ ಜಿಲ್ಲೆ  ರಾಜ್ಯಪಾಲರಾದ ಲ|ಎಂಜೆ‌ಎಫ್, ಜೆ.ಕೃಷ್ಣಾನಂದ ರಾವ್  ಅವರು ಬಿಡುಗಡೆಗೊಳಿಸಿದರು.
ಸಿಂಹಗಳ ನಡುವೆ ಕನ್ನಡದ ಕಲರವ ಸಮಾರಂಭದಲ್ಲಿ,  ವಿವಿಧ ರಂಗಗಳಲ್ಲಿ ಸಾದನೆಗೈದ ಮಹನಿಯರನ್ನು ಹಾಗೂ ವಿಶಿಷ್ಠ ಸಾಧನೆ ಮಾಡಿದ ಮಕ್ಕಳನ್ನು ಸನ್ಮಾನಿಸಿ, ಸ್ಮರಣ ಫಲಕ ನೀಡಿ ಗೌರವಿಸಲಾಯಿತು.
ಸಿಂಹಗಳ ನಡುವೆ ಕನ್ನಡದ ಕಲರವ

ಸಿಂಹಗಳ ನಡುವೆ ಕನ್ನಡದ ಕಲರವ ಸಮ್ಮೇಳನ ಸಮಿತಿಯ ಕಾರ್ಯಧ್ಯಕ್ಷರು ಹಾಗೂ ಕದ್ರಿ ಹಿಲ್ಸ್ ಘಟಕದ ಅಧ್ಯಕ್ಷ ಲ| ಎಂಜೆ‌ಎಫ್, ಎನ್.ಟಿ.ರಾಜ ಅವರು ಸ್ವಾಗತಿಸಿದರು. ಸಮಿತಿಯ ಗೌರವಾಧ್ಯಕ್ಷರಾದ ಧರ್ಮಧರ್ಶಿ ಹರಿಕೃಷ್ಣ ಪುನರೂರು ಪ್ರಾಸ್ತಾವನೆಗೈದರು. ಸಮಿತಿಯ  ಪ್ರಧಾನ ಸಂಚಾಲಕರಾದ ಲ| ಅರೆಹೊಳೆ ಸದಾಶಿವ ರಾವ್ ಕಾರ್ಯಕ್ರಮ ನಿರೂಪಿಸಿದರು. ಕೆ.ಸಿ.ಪ್ರಭು ವಂದಿಸಿದರು.
ಸಿಂಹಗಳ ನಡುವೆ ಕನ್ನಡದ ಕಲರವ ಸಮಾರೋಪ ಸಂಮಾರಂಭ ಸಂಜೆ ನಡೆಯಿತು. ಹಲವು ಸಾಂಸ್ಕ್ರತಿಕ ಕಾರ್ಯಕ್ರಮಗಳು ಬಳಿಕ ನಡೆದವು.

ಸಿಂಹಗಳ ನಡುವೆ ಕನ್ನಡದ ಕಲರವ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English