ನವದೆಹಲಿ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಲೋಕಪಾಲ ಆಯ್ಕೆ ಮತ್ತು ಹುಡಕಾಟ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ಕೆ.ಟಿ.ಥಾಮಸ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ಸೋಮವಾರ ವರದಿಗಳು ತಿಳಿಸಿವೆ.
ಕಳೆದ ವಾರವಷ್ಟೆ ಲೋಕಪಾಲರ ಆಯ್ಕೆ ಪ್ರಕ್ರಿಯೆಯಲ್ಲಿ ತಾವು ಪಾಲ್ಗೊಳ್ಳಬೇಕು ಎಂಬ ಕೇಂದ್ರ ಸರ್ಕಾರದ ಆಹ್ವಾನವನ್ನು ಹಿರಿಯ ವಕೀಲ ಫಾಲಿ ನಾರಿಮನ್ ಅವರು ತಿರಸ್ಕರಿಸಿದ್ದರು. ಅಲ್ಲದೆ ಲೋಕಪಾಲ ಹುಡುಕಾಟ ಸಮಿತಿಯನ್ನು ಅರ್ಥಹೀನ ಮತ್ತು ಹಾಸ್ಯಾಸ್ಪದ ಎಂದು ಕರೆದಿದ್ದರು. ಇದೀಗ ಸಮತಿಯ ಅಧ್ಯಕ್ಷರೇ ರಾಜಿನಾಮೆ ನೀಡಿರುವುದರಿಂದ ದೇಶದ ಮೊದಲ ಲೋಕಪಾಲರ ಆಯ್ಕೆ ಪ್ರಕ್ರಿಯೆ ಕೇಂದ್ರ ಸರ್ಕಾರದ ಪಾಲಿಗೆ ಮತ್ತಷ್ಟು ಕಗ್ಗಂಟಾಗಿ ಪರಿಣಮಿಸಿದೆ.
ವರದಿಗಳ ಪ್ರಕಾರ, 9 ಸದಸ್ಯರನ್ನೊಳಗೊಂಡ ಲೋಕಪಾಲ ಆಯ್ಕೆ ಸಮಿತಿಯ ಮುಖ್ಯಸ್ಥ ನ್ಯಾ.ಥಾಮಸ್ ಅವರು ತಮ್ಮ ರಾಜಿನಾಮೆ ಪತ್ರವನ್ನು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ರವಾನಿಸಿದ್ದಾರೆ ಎನ್ನಲಾಗಿದೆ.
ಆಯ್ಕೆ ಸಮಿತಿಯ ನಿಯಮಗಳನ್ನು ಪರಿಶೀಲಿಸಿದ ಬಳಿಕ ತಾವು ರಾಜಿನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದು, ಲೋಕುಪಾಲ ಸಂಸ್ಥೆಗೆ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡುವುದಕ್ಕಾಗಿ ಸ್ವತಂತ್ರ ಹುಡುಕಾಟ ಅಸಾಧ್ಯ. ಆಯ್ಕೆ ಸಮಿತಿ ಕೇಂದ್ರ ಸರ್ಕಾರ ನೀಡಿದ ಪಟ್ಟಿಯಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕು. ಆಯ್ಕೆ ಸಮಿತಿ ಕೆಲಸ ಕೇವಲ ಸರ್ಕಾಕ್ಕೆ ಪಟ್ಟಿಯನ್ನು ನೀಡುವುದಾಗಿದೆ. ಹೀಗಾಗಿ ತಾವು ರಾಜಿನಾಮೆ ನೀಡುತ್ತಿರುವುದಾಗಿ ನ್ಯಾ.ಥಾಮಸ್ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರನ್ನೊಳಗೊಂಡ ಲೋಕಪಾಲ ಹುಡುಕಾಟ ಸಮಿತಿಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾ.ಥಾಮಸ್ ಅವರನ್ನು ಆಯ್ಕೆ ಮಾಡಲಾಗಿತ್ತು.
Click this button or press Ctrl+G to toggle between Kannada and English