ಅನಧಿಕೃತ ನೀರು ಪಡೆಯುತ್ತಿರುವ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕ್ಕೆ ಸೂಚನೆ

6:42 PM, Friday, December 24th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಜಿಲ್ಲಾಧಿಕಾರಿ ಶ್ರೀ ಸುಭೋದ್ ಯಾದವ್ ಮಂಗಳೂರು :  ಮಹಾನಗರಪಾಲಿಕೆಗೆ ವಂಚಿಸಿ ಹೆಚ್ಚುವರಿ ನೀರು ಪಡೆಯತ್ತಿರುವವರ ಮೇಲೆ ನಿರ್ಧಾಕ್ಷಿಣ್ಯ ಕ್ರಮಕ್ಕೆ ಜಿಲ್ಲಾಧಿಕಾರಿ ಶ್ರೀ ಸುಭೋದ್ ಯಾದವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವರು ಇಂದು ತಮ್ಮಕಚೇರಿಯಲ್ಲಿ ಮಂಗಳೂರು ಮಹಾನಗರಪಾಲಿಕೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು.
ಮಹಾನಗರಪಾಲಿಕೆಯಿಂದ ಅದಿಕೃತವಾಗಿ ನೀರು ಸಂಪರ್ಕ ಪಡೆದು ಅನಧಿಕೃತವಾಗಿ ಯಥೇಚ್ಛವಾಗಿ ನೀರನ್ನು ಬಳಸುತ್ತಿರುವ ಉದ್ದಿಮೆ ಕೈಗಾರಿಕೆಗಳನ್ನು ಪತ್ತೆ ಹಚ್ಚಿ ಅಂತಹವರ ವಿರುದ್ಧ ಎಫ್ಐಆರ್ ದಾಖಲಿಸುವುದು ಸೇರಿದಂತೆ ದಂಡ ವಸೂಲು ಮಾಡಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಅತ್ಯಂತ ಕಡುಬಡವರಿಗೆ ನೀರು ಸಂಪರ್ಕ ಪಡೆಯಲು ಸಾಧ್ಯವಾಗುವಂತೆ ಕೇವಲ ಮೀಟರ್ ಶುಲ್ಕ ಮಾತ್ರ ಪಡೆದು ಇನ್ನುಳಿದ ಶುಲ್ಕವನ್ನು ನಗರಪಾಲಿಕೆ ವತಿಯಿಂದಲೇ ಭರಿಸಲು ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮೀಟರ್ ಶುಲ್ಕ ಇತ್ಯಾದಿಗಳನ್ನು ಶೇಕಡಾ 22.25 ರ ಆನುದಾನದಿಂದ ಭರಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದರು. ಇದರಿಂದಾಗಿ ಬಡವರಿಗೆ  ನೀರು ಸೌಲಭ್ಯ ದೊರಕಿ ಪಾಲಿಕೆಗೆ ಆದಾಯವೃದ್ಧಿಯಾಗಲಿದೆಯೆಂದರು. 30-9-10ರ ಅಂತ್ಯಕ್ಕೆ 2010-11 ರ ಸಾಲಿಗೆ 1241 ಲಕ್ಷ ನೀರಿನ ತೆರಿಗೆಬಾಕಿ ಇದ್ದು 991 ಲಕ್ಷ ರೂ. ವಸೂಲಾತಿ ಮಾಡಲಾಗಿದೆ
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ಅನಧಿಕೃತ ಪರವಾನಗಿ ಪಡೆಯದ ಹಾಗೂ ಪರವಾನಗಿ ನವೀಕರಿಸದ ಉದ್ದಿಮೆದಾರರ ಪರವಾನಗಿಯನ್ನು ಕೂಡಲೇ ನವೀಕರಿಸಲು ಜನವರಿ 15 ರೊಳಗಾಗಿನವೀಕರಿಸಲು ಕಾಲಮಿತಿ ನಿಗದಿಪಡಿಸಲು ಹಾಗೂ ಕಡ್ಡಾಯವಾಗಿ ಉದ್ದಿಮೆದಾರರು ಪರವಾನಗಿ ಪಡೆದೇ ತಮ್ಮ ವ್ಯಾಪಾರ ವಹಿವಾಟು ನಡೆಸುವಂತೆ ಸೂಚಿಸಲು ಅಧಿಕಾರಿಗಳಿಗೆ ತಿಳಿಸಿದರು. ಮಂಗಳೂರು ಮಹಾನಗರಪಾಲಿಕೆ ವತಿಯಿಂದ19591 ವ್ಯಾಪಾರ /ಉದ್ದಿಮೆದಾರರಿಗೆ ಪರವಾನಿಗೆ ನೀಡಲಾಗಿದ್ದು,ಇವರಲ್ಲಿ 18813 ಉದ್ದಿಮೆದಾರರು ಪರವಾನಬಗಿ ನವೀಕರಿಸಿರುತ್ತಾರೆ. 778 ಪರವಾನಿಗೆಗಳು ನವೀಕರಿಸಲು ಬಾಕಿ ಇರುತ್ತವೆ. ಉಳ್ಳಾಲಪುರಸಭೆ, ವ್ಯಾಪ್ತಿಗೆ ಮಂಗಳೂರು ಮಹಾನಗರಪಾಲಿಕೆ ವತಿಯಿಂದ ನೀರು ಸರಬರಾಜಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಹಾಗೂ 2010ರ ಜನವರಿ 1 ರಿಂದ ನೀರು ದರ ಕರಾರು ಮಾಡಿಕೊಳ್ಳುವಂತೆ ಉಳ್ಳಾಲ ಪುರಸಭೆ ಮುಖ್ಯಾಧಿಕಾರಿಗಳಿಗೆ ಹಾಗೂ ಮಹಾನಗರಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಮಂಗಳೂರು ಮಹಾನಗರಪಾಲಿಕೆಯಲ್ಲಿ ಪರಿಶಿಷ್ಟ ಜಾತಿ ಪಂಗಡಗಳ ಅಭಿವೃದ್ಧಿಗಾಗಿ ನಿಗಧಿಪಡಿಸಿರುವ ಶೇ.22.75 ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳದ ಬಗ್ಗೆ ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿ, ಮಾರ್ಚ್ ಅಂತ್ಯದೊಳಗಾಗಿ845.12 ಲಕ್ಷ ರೂಪಾಯಿಯಲ್ಲಿ ಶೇ.75 ರಷ್ಟು ವೆಚ್ಚ ಮಾಡಬೇಕೆಂದು ಸೂಚಿಸಿದರು.
ಶೆ 22.75 ಅನುದಾನದಡಿ ಪರಿಶಿಷ್ಟರಿಗೆ ಸೌಲಭ್ಯ ಒದಗಿಸುವಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲು ಮಾಡುವುದಾಗಿ ಎಚ್ಚರಿಸಿದ್ದಾರೆ.
ಮುಖ್ಯಮಂತ್ರಿಗಳ ವಿಶೇಷ ಅನುದಾನ100ಕೋಟಿಯಿಂದ 251ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು 171 ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇನ್ನು 37 ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ ಎಂದು ಜಿಲ್ಲಾಧಿಕಾರಿಗಳ ಅವಗಾಹನೆಗೆ ತರಲಾಯಿತು.
ನಮ್ಮ ಮನೆ ಯೋಜನೆ, 13ನೇ ಹಣಕಾಸು ಯೋಜನೆ, ಘನತ್ಯಾಜ್ಯ ವಿಲೇವಾರಿ, ರಸ್ತೆ ಗುಂಡಿಗಳ ಮುಚ್ಚುವಿಕೆ ಮುಂತಾದವುಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಮಹಾನಗರಪಾಲಿಕೆ ಜಂಟಿ ಆಯುಕ್ತರಾದ ಎಂ. ಕೆ. ಗಡ್ಕರ್ ಸೇರಿದಂತೆ ಇನ್ನಿತರ ಪಾಲಿಕೆ ಅಧಿಕಾರಿಗಳು ಹಾಜರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English