ನವದೆಹಲಿ: ಭಾರತ ಅಫ್ಘಾನಿಸ್ತಾನಕ್ಕಿಂತ ಅಪಾಯಕಾರಿ ದೇಶವಾಗಿದ್ದು, ನೀವು ಯಾವುದೇ ಕ್ಷಣದಲ್ಲೂ ಬೇಕಾದರು ಬಾಂಬ್ ಸ್ಫೋಟದಿಂದ ಸಾಯಬಹುದು. ಹೀಗಂತ ಸರ್ಕಾರಿ ದಾಖಲೆಗಳೇ ಹೇಳುತ್ತಿವೆ. ಭಾರತ ಜಗತ್ತಿನಲ್ಲಿ ಮೂರನೇ ಅಪಾಯಕಾರಿ ದೇಶವಾಗಿದ್ದು, ಜಗತ್ತಿನಲ್ಲಿ ಅತಿ ಹೆಚ್ಚು ಬಾಂಬ್ ಸ್ಫೋಟ ಸಂಭವಿಸುವ ದೇಶಗಳಲ್ಲಿ ಭಾರತ, ಇರಾಖ್ ಮತ್ತು ಪಾಕಿಸ್ತಾನದ ನಂತರದ ಸ್ಥಾನದಲ್ಲಿದೆ.
ಯುದ್ಧದಿಂದ ತತ್ತರಿಸಿರುವ ಅಫ್ಘಾನಿಸ್ತಾನ ಮತ್ತು ಸಿರಿಯಾ ಸಹ ಭಾರತಕ್ಕಿಂತ ಉತ್ತಮ ಎಂದು ರಾಷ್ಟ್ರೀಯ ಬಾಂಬ್ ಅಂಕಿ-ಅಂಶ ಕೇಂದ್ರ(ಎನ್‌ಬಿಡಿಸಿ) ಬಿಡುಗಡೆ ಮಾಡಿರುವ ವರದಿ ಹೇಳುತ್ತಿದೆ.
ಎನ್‌ಬಿಡಿಸಿ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಭಾರತದಲ್ಲಿ ಕಳೆದ ವರ್ಷ ಅಂದರೆ, 2013ರಲ್ಲಿ ಒಟ್ಟು 212 ಬಾಂಬ್ ಸ್ಫೋಟಗಳು ಸಂಭವಿಸಿವೆ. ಇದು ಅಫ್ಘಾನಿಸ್ತಾನ(108)ದಲ್ಲಿ ಸಂಭವಿಸಿದ್ದಕ್ಕಿಂತ ಡಬಲ್ ಆಗಿದೆ. ಇನ್ನು ಆಂತರಿಕ ಕಲಹದಿಂದ ಬಳಲುತ್ತಿರುವ ಬಾಂಗ್ಲಾದೇಶದಲ್ಲಿ ಕೇವಲ 75 ಬಾಂಬ್ ಸ್ಫೋಟಗಳು ಸಂಭವಿಸಿವೆ.
2012ರಲ್ಲಿ ಭಾರತದಲ್ಲಿ ಒಟ್ಟು 241 ಸ್ಫೋಟ ಪ್ರಕರಣಗಳು ಸಂಭವಿಸಿದ್ದವು. ಆದರೆ 2013ರಲ್ಲಿ ಕೊಂಚ ಕಡಿಯಾಗಿದ್ದು, 2013ರಲ್ಲಿ ಒಟ್ಟು 212 ಸ್ಫೋಟಗಳು ಸಂಭವಿಸಿವೆ. ಇದರಲ್ಲಿ 130 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ಕಳೆದ ವರ್ಷ ಸಂಭವಿಸಿದ ಸ್ಫೋಟಗಳಲ್ಲಿ 466 ಮಂದಿ ಗಾಯಗೊಂಡಿದ್ದಾರೆ.
ಎನ್‌ಬಿಡಿಸಿ ಅಂಕಿ ಅಂಶಗಳ ಪ್ರಕಾರ, ಜಗತ್ತಿನಲ್ಲಿ ಶೇ.75ರಷ್ಟು ಬಾಂಬ್ ಸ್ಫೋಟಗಳು ಪಾಕಿಸ್ತಾನ, ಇರಾಖ್ ಮತ್ತು ಭಾರತದಲ್ಲಿ ಸಂಭವಿಸುತ್ತಿವೆ.
Click this button or press Ctrl+G to toggle between Kannada and English