ಪ್ರಧಾನಿ ಹುದ್ದೆಗೆ ನಾನೇ ಸಮರ್ಥ: ನಿತೀಶ್ ಕುಮಾರ್

4:42 PM, Thursday, March 6th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Nitish-kumarನವದೆಹಲಿ: ಇನ್ನಿತರ ಪ್ರಧಾನಿ ಆಕಾಂಕ್ಷಿಗಳಿಗಿಂತ ನಾನೇ ಆ ಹುದ್ದೆಗೆ ಹೆಚ್ಚು ಸಮರ್ಥ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಪ್ರಧಾನಿ ಹುದ್ದೆಯನ್ನಲಂಕರಿಸಲು ತಾನು ಯೋಗ್ಯ ಹೇಗೆ ಎಂಬುದನ್ನು ವಿವರಿಸಿದ ನಿತೀಶ್, ಪ್ರಧಾನಿ ಹುದ್ದೆಯ ಆಕಾಂಕ್ಷಿಗಳಿಗಿಂತ ನನಗೆ ಹೆಚ್ಚಿನ ಅರ್ಹತೆಯಿದೆ ಎಂದು ಹೇಳಿದ್ದಾರೆ.

ಬಿಹಾರಕ್ಕೆ ವಿಶೇಷ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ಕೈಗೊಂಡಿರುವ ಸಂಕಲ್ಪಯಾತ್ರೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಥವಾ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಬ್ಬರಲ್ಲಿ ಯಾರ ಹೆಸರನ್ನೂ ಉಲ್ಲೇಖಿಸದೇ ಮಾತನಾಡಿದ ನಿತೀಶ್, ಒಬ್ಬರಿಗೆ ಸಂಸತ್‌ನ ಬಗ್ಗೆ ಯಾವುದೇ ಅನುಭವವಿಲ್ಲ, ಇನ್ನೊಬ್ಬರಿಗೆ ರಾಜ್ಯಾಡಳಿತ ಮಾಡಿ ಅನುಭವವಿಲ್ಲ. ಹೀಗಿರುವಾಗ ಎರಡರಲ್ಲೂ ಅನುಭವವಿರುವ ನನಗೆ ಅಲ್ಲವೆ ಹೆಚ್ಚಿನ ಅರ್ಹತೆ ಇರುವುದು? ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಯಾಗುವ ಹಂಬಲದ ಬಗ್ಗೆ ಹೇಳಿದ ನಿತೀಶ್, ನಮ್ಮ ಪಕ್ಷ ತುಂಬಾ ಚಿಕ್ಕದು ಆದ್ದರಿಂದ ಹೆಚ್ಚು ಬೇಡಿಕೆಗಳನ್ನೊಡ್ಡಲಾಗುವುದಿಲ್ಲ. ಆದರೆ ನಾವು ಜನರಿಗಾಗಿ ಕೆಲಸ ಮಾಡಬಲ್ಲೆವು ಎಂಬ ಆತ್ಮವಿಶ್ವಾಸ ನಮ್ಮಲ್ಲಿದೆ ಎಂದಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English