ವಿಷ್ಣು ಅಭಿಮಾನಿಗಳಿಂದ ಅಭಿಮಾನ್ ಸ್ಟುಡಿಯೋದಲ್ಲಿ ಪುಣ್ಯ ಸ್ಮರಣೆ

10:20 PM, Thursday, December 30th, 2010
Share
1 Star2 Stars3 Stars4 Stars5 Stars
(No Ratings Yet)
Loading...

ವಿಷ್ಣುವರ್ಧನ್ ಬೆಂಗಳೂರು : ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳನ್ನಗಲಿ ವರ್ಷ ತುಂಬಿರುವ ಹಿನ್ನೆಲೆಯಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು ರಕ್ತದಾನ, ನೇತ್ರದಾನದಂತಹ ಹಲವಾರು ಕಾರ್ಯಗಳನ್ನು  ಬಡವರಿಗಾಗಿ ರಾಜ್ಯಾದ್ಯಂತ ಹಮ್ಮಿಕೊಂಡಿದ್ದರು
ವಿಷ್ಣು ಸಮಾಧಿ ಇರುವ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ, ಆರಾಧ್ಯಮೂರ್ತಿಗೆ ನಮನ ಸಲ್ಲಿಸಿದರು.
ಉತ್ತರಳ್ಳಿಯಲ್ಲಿರುವ ಸ್ಟುಡಿಯೋಗೆ ಮೆರವಣಿಗೆಯಲ್ಲಿ ಸಾಗಿದ ಸಾವಿರಾರು ಅಭಿಮಾನಿಗಳು ಗೌರವ ಅರ್ಪಿಸಿದರು.
ಸರಕಾರದ ಪರವಾಗಿ ಸಚಿವೆ ಶೋಭಾ ಕರಂದ್ಲಾಜೆ ಗೌರವ ಸಲ್ಲಿಸಿದರು ವಿಷ್ಣು ಸಹೋದರ ರವಿಕುಮಾರ್, ಪತ್ನಿ ಭಾರತಿ ವಿಷ್ಣುವರ್ಧನ್, ಮಗಳು ಕೀರ್ತಿವರ್ಧನ್, ಅಳಿಯ ಅನಿರುದ್ಧ ಸೇರಿದಂತೆ ಕುಟುಂಬದ ಸದಸ್ಯರು  ವಿಷ್ಣು  ಸಮಾಧಿಗೆ ಪೂಜೆ ಸಲ್ಲಿಸಿದರು.
ಸಚಿವೆ ಶೋಭಾ ಕರಂದ್ಲಾಜೆ ಮತ್ತು ಭಾರತಿ ಜತೆಯಾಗಿ ವಿಷ್ಣು ಸಮಾಧಿಗೆ ಆರತಿ ಬೆಳಗಿ, ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು. ಸ್ಟುಡಿಯೋದಲ್ಲೇ ಟೆಂಟ್ ಹಾಕಿ ರಕ್ತದಾನ ಶಿಬಿರ ಏರ್ಪಡಿಸಲಾಗಿದ್ದು, ನೂರಾರು ಮಂದಿ ರಕ್ತದಾನ ಮಾಡಿದರು. ಭಾರತಿಯವರು   ಅಭಿಮಾನಿ ರಕ್ತದಾನಿಗಳ ಯೋಗಕ್ಷೇಮ ವಿಚಾರಿಸಿ ಸಂತೈಸಿದರು. ನೂರಾರು ಮಂದಿ ಅಭಿಮಾನಿಗಳು ನೇತ್ರದಾನ ಮಾಡುವ ಸಂಬಂಧ ದಾಖಲೆ ಪತ್ರಗಳಿಗೂ ಸಹಿ ಮಾದರಿಯಾದರು.
ಮುಖ್ಯ ಮಂತ್ರಿಯವರು ವಿಷ್ಣು ಸಮಾಧಿಗೆ ಗೌರವ ಸಲ್ಲಿಸಿ, ಇನ್ನು ಕೆಲವೇ ದಿನಗಳಲ್ಲಿ ಸ್ಮಾರಕ ನಿರ್ಮಾಣ ಕೆಲಸಕ್ಕೆ ಚಾಲನೆ ನೀಡುವುದಾಗಿ ಭರವಸೆ ನೀಡಿದರು . ಸ್ನೇಹಲೋಕ ತಂಡದ ಸದಸ್ಯರು, ವಿಷ್ಣುವರ್ಧನ್ ಕೊನೆಗಾಲದ ಆಪ್ತ ನಟ ಶಿವರಾಮು, ನಿರ್ದೇಶಕ ನಾಗಣ್ಣ ಸೇರಿದಂತೆ ಚಿತ್ರರಂಗದ ನೂರಾರು ಗಣ್ಯರು ಸಮಾಧಿ ಸ್ಥಳಕ್ಕೆ ಬಂದು ಗೌರವ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ 1000 ಬಲೂನುಗಳನ್ನು ಗಾಳಿಯಲ್ಲಿ ಹಾರಿಬಿಡಲಾಯಿತು,  ಭಾರತಿಯವರು ಶಾಂತಿಯ ಸಂಕೇತವಾಗಿ ಪಾರಿವಾಳವನ್ನು ಹಾರಿ ಬಿಟ್ಟರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English