ನವದೆಹಲಿ: ತೆಲಂಗಾಣ ವಿಭಜನೆ ಖಂಡಿಸಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಿರಣ್ ಕುಮಾರ್ ರೆಡ್ಡಿ ಸಿಂಮಾಧ್ರ ಪ್ರದೇಶದಲ್ಲಿ ಹೊಸ ಪಕ್ಷ ರಚಿಸುವುದಾಗಿ ಗುರುವಾರ ತಿಳಿಸಿದ್ದಾರೆ.
ರಾಜಮಹೇಂದ್ರಿಯಲ್ಲಿ ಮಾರ್ಚ್ 12ರಂದು ನಡೆಯಲಿರುವ ಬೃಹತ್ ಸಮಾವೇಶದಲ್ಲಿ ನೂತನ ಪಕ್ಷದ ನೀತಿ ನಿರ್ಧಾರಗಳು ಹಾಗೂ ಕಾರ್ಯಕ್ರಮಗಳನ್ನು ಪ್ರಕಟಿಸಲಾಗುವುದು ಎಂದು ಕಿರಣ್ ಕುಮಾರ್ ಹೇಳಿದ್ದಾರೆ.
ಆಂಧ್ರಪ್ರದೇಶದ ವಿಭಜನೆಯನ್ನು ವಿರೋಧಿಸಿ ಕಿರಣ್ ಕುಮಾರ್ ರೆಡ್ಡಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಲ್ಲದೇ ಕಾಂಗ್ರೆಸ್ ಪಕ್ಷವನ್ನೂ ತ್ಯಜಿಸಿದ್ದರು. ಕಿರಣ್ ಕುಮಾರ್‌ಗೆ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಆರು ಸಂಸದರ ಬೆಂಬಲ ನೀಡಿದ್ದಾರೆ.
ಕಿರಣ್ ಕುಮಾರ್ ಸಂಪುಟದಲ್ಲಿನ ಸೀಮಾಂಧ್ರದ ಕೆಲವು ಸಹೋದ್ಯೋಗಿಗಳು ಹೊಸ ಪಕ್ಷ ಕಟ್ಟಲು ಬೆಂಬಲ ನೀಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಆಂಧ್ರವನ್ನು ವಿಭಜಿಸಲು ಕಾಂಗ್ರೆಸ್, ತೆಲುಗು ದೇಶಂ ಪಾರ್ಟಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ಕೈಜೋಡಿಸಿರುವ ಕಾರಣ ಸೀಮಾಂಧ್ರದ ಜನರ ಬೆಂಬಲ ತಮ್ಮ ನೂತನ ಪಕ್ಷಕ್ಕೆ ಸಿಗುವುದು ಖಚಿತವೆಂಬ ವಿಶ್ವಾಸ ಕಿರಣ್ ಕುಮಾರ್ ರೆಡ್ಡಿ ಹೊಂದಿದ್ದಾರೆ.
Click this button or press Ctrl+G to toggle between Kannada and English