ಬೆಂಗಳೂರುಃ ಕಾಮಿಡಿ, ಥ್ರಿಲ್ಲಿಂಗ್ ಹಾಗೂ ಹಾರರ್ ಅಂಶಗಳನ್ನು ಹದವಾಗಿ ಬೆರೆಸಿ ಮಾಡಿದ ಚಿತ್ರವಿದು. ಆಕಡೆ ತೀರಾ ಹಾರರ್ ಅಲ್ಲದ ಈಕಡೆ ತೀರಾ ಕಾಮಿಡಿ ಅಲ್ಲದ ವಿಭಾಗಕ್ಕೆ ಈ ಚಿತ್ರವನ್ನು ಸೇರಿಸಬಹುದು. ಆ ಮಟ್ಟಿಗೆ ಇದೊಂದು ವಿಭಿನ್ನ ಪ್ರಯೋಗ ಅನ್ನಬಹುದು.
ಆದರೆ ಈ ಚಿತ್ರದ ಸಂಪೂರ್ಣ ಕ್ರೆಡಿಟ್ ಸಿಗೋದು ಮಾತ್ರ ತೆಲುಗಿನ ‘ಪ್ರೇಮ ಕಥಾ ಚಿತ್ರಂ’ಗೆ. ಏಕೆಂದರೆ ‘ಚಂದ್ರಲೇಖ’ ಚಿತ್ರ ಅದರ ಪಡಿಯಚ್ಚು. ತೆಲುಗು ಚಿತ್ರವನ್ನು ಯಥಾವತ್ತಾಗಿ ಕನ್ನಡಕ್ಕೆ ತಂದಿದ್ದಾರೆ ಓಂ ಪ್ರಕಾಶ್ ರಾವ್.
ಇಲ್ಲಿ ಅವರ ತನ ಎನುವುದು ಏನೂ ಇಲ್ಲ. ಎಲ್ಲವೂ ರೆಡಿಮೇಡ್. ಹಾಗಾಗಿ ಇದೊಂದು ರೆಡಿಮೇಡ್ ಚಿತ್ರಾನ್ನ. ಓರಿಜಿನಲ್ ಚಿತ್ರ ನೋಡದವರಿಗೆ ಚಿತ್ರಾನ್ನ ರುಚಿಸುತ್ತದೆ. ಇಲ್ಲದಿದ್ದರೆ ಹಳಸಲು ಚಿತ್ರಾನ್ನದಂತೆ ಭಾಸವಾಗುತ್ತದೆ.
ಚಿತ್ರ: ಚಂದ್ರಲೇಖ ನಿರ್ಮಾಪಕರು: ಕೆ ವಿ ಶ್ರೀಧರ್ ರೆಡ್ಡಿ ನಿರ್ದೇಶನ: ಓಂ ಪ್ರಕಾಶ್ ರಾವ್ ಛಾಯಗ್ರಹಣ: ರವಿಕುಮಾರ್ ಸಂಗೀತ:ಜೆ.ಬಿ ಸಂಕಲನ: ಲಕ್ಷ್ಮಣ್ ರೆಡ್ಡಿ ಸಂಭಾಷಣೆ: ಎಂ.ಎಸ್.ರಮೇಶ್ ಪಾತ್ರವರ್ಗ: ಚಿರಂಜೀವಿ ಸರ್ಜಾ, ಸಾನ್ವಿ ಶ್ರೀನಿವಾಸ್, ನಾಗಶೇಖರ್, ಸಾಧು ಕೋಕಿಲ ಮುಂತಾದವರು.
Click this button or press Ctrl+G to toggle between Kannada and English