ನಟಿ ಜೂಹಿ ಚಾವ್ಲಾ ಸೋದರ ಕೊನೆಗೂ ಬದುಕಿಗೆ ವಿದಾಯ

1:03 PM, Monday, March 10th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Bobby-Chawlaಮುಂಬೈ: ಬಾಲಿವುಡ್ ನಟಿ, ಪ್ರೇಮಲೋಕ ಖ್ಯಾತಿಯ ಜೂಹಿ ಚಾವ್ಲಾ ಅವರ ಸೋದರ ಕೊನೆಗೂ ಬದುಕಿಗೆ ವಿದಾಯ ಹೇಳಿದ್ದಾರೆ. ನಟಿ ಜೂಹಿ ಅವರ ಸೋದರ ಬಾಬ್ಬಿ ಚಾವ್ಲಾ ಅವರು ಸರಿಯಾಗಿ ನಾಲ್ಕು ವರ್ಷಗಳ ಹಿಂದೆ ತೀವ್ರ ಹೃದಯಾಘಾತಕ್ಕೆ ತುತ್ತಾದ ನಂತರ ಕೋಮಾದಲ್ಲಿಯೇ ಇದ್ದರು. ನಿನ್ನೆ ಭಾನುವಾರ ಮುಂಬೈನ Jaslok Hospital ನಲ್ಲಿ ಅವರು ಕೊನೆಯುಸಿರೆಳೆದರು. ಭಾನುವಾರವೇ ಬಾಬ್ಬಿ ಅಂತ್ಯಕ್ರಿಯೆ ನೇರವೇರಿದೆ.

ಸಹೋದರನಾಗಿ ನಟಿ ಜೂಹಿ ಚಾವ್ಲಾಗೆ ಅತ್ಯಂತ ಹತ್ತಿರವಾಗಿದ್ದ ಬಾಬ್ಬಿ ನಿಧನದಿಂದ ಜೂಹಿ ಅಧೀರರಾಗಿದ್ದಾರೆ. ಸೋದರ ಕೋಮಾ ಸ್ಥಿತಿ ತಲುಪಿದ ಬಳಿಕ, ನಟಿ ಜೂಹಿ ವ್ಯಾಕುಲಗೊಂಡು ಅನೇಕ ಬಾರಿ ಆತನ ಆರೋಗ್ಯವನ್ನು ಸಾರ್ವಜನಿಕ ವೇದಿಕೆಗಳಲ್ಲಿ ಪ್ರಸ್ತಾಪಿಸಿದ್ದರು. ನಟಿ ಜೂಹಿ ಚಾವ್ಲಾ ಸೋದರ ಕೊನೆಗೂ ಬದುಕಿಗೆ ವಿದಾಯ 2010ರ ಏಪ್ರಿಲ್ ತಿಂಗಳಲ್ಲಿ ರೆಸ್ಟೋರೆಂಟ್ ಒಂದರಲ್ಲಿ ಊಟ ಮಾಡುತ್ತಿದ್ದಾಗ ಬಾಬ್ಬಿ ಚಾವ್ಲಾ ತೀವ್ರ ಹೃದಯಾಘಾತಕ್ಕೀಡಾಗಿದ್ದರು. ನಟಿ ಜೂಹಿ ಅಭಿನಯದ Gulaab Gang ಸಿನಿಮಾ ಇದೀಗ ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಮಾಲೀಕತ್ವದ Red Chillies Entertainment ಕಂಪನಿಯ ಸಿಇಒ ಆಗಿದ್ದರು. ಜೂಹಿ, ಶಾರುಖ್ ಖಾನ್ ಸೇರಿದಂತೆ ಬಾಲಿವುಡ್ ನ ಅನೇಕ ನಟ/ನಟಿಯರು ಬಾಬ್ಬಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English