ನವದೆಹಲಿ: ನಟಿ, ರಾಜಕಾರಣಿ ಜಯಪ್ರದಾ ಮತ್ತು ಸಮಾಜವಾದಿ ಪಕ್ಷದ ಮಾಜಿ ನೇತಾರ ಅಮರ್ ಸಿಂಗ್ ಅವರು ಸೋಮವಾರ ರಾಷ್ಟ್ರೀಯ ಲೋಕ ದಳ ಪಕ್ಷಕ್ಕೆ ಸೇರಿದ್ದಾರೆ.
ಇವರಿಬ್ಬರನ್ನೂ ಆರ್‌ಎಡಿ ನಾಯಕ ಅಜಿತ್ ಸಿಂಗ್ ಸ್ವಾಗತಿಸಿದ್ದಾರೆ. ಆರ್‌ಎಲ್‌ಡಿಗೆ ಸೇರ್ಪಡೆಯಾದ ನಂತರ ಮಾತನಾಡಿದ ಅಮರ್ ಸಿಂಗ್, ಚರಣ್ ಸಿಂಗ್ ಅವರು ಈ ದೇಶಕ್ಕೆ ಹೆಚ್ಚಿನ ಕೊಡುಗೆಗಳನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.
ಅದೇ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್‌ನ ಮೇಲೆ ವಾಗ್ದಾಳಿ ನಡೆಸಿದ ಅವರು ಉಭಯ ಪಕ್ಷಗಳು ಉತ್ತರ ಪ್ರದೇಶದ ವಿಭಜನೆಗೆ ಯಾವುದೇ ಆಸಕ್ತಿ ತೋರಿಸಿಲ್ಲ. ರಾಜ್ಯ ಅಭಿವೃದ್ಧಿ ಆಗಬೇಕಾದರೆ ವಿಭಜನೆ ಆಗಲೇ ಬೇಕು ಎಂದು ಹೇಳಿದ್ದಾರೆ.
ಅಮರ್ ಸಿಂಗ್ ಅವರ ಹೇಳಿಕೆಗಳಿಗೆ ಸಹಮತ ವ್ಯಕ್ತ ಪಡಿಸಿದ ಜಯಪ್ರದಾ, ತಾನು ಸಿಂಗ್ ಅವರ ದಾರಿಯಲ್ಲಿಯೇ ಮುಂದುವರಿಯಲಿದ್ದು, ಅವರು ಯಾವ ಪಕ್ಷಕ್ಕೆ ಸೇರುತ್ತಾರೋ ಅದೇ ಪಕ್ಷಕ್ಕೆ ನಾನು ಸೇರ್ಪಡೆಯಾಗುತ್ತೇನೆ ಎಂದಿದ್ದಾರೆ.
ಬಲ್ಲಮೂಲಗಳ ಪ್ರಕಾರ ಅಮರ್ ಸಿಂಗ್ ಫತೇಪುರ್ ಸಿಖ್ರಿಯಿಂದ ಮತ್ತು ಜಯ ಸಿಕಾರ್‌ನಿಂದ ಕಣಕ್ಕಿಳಿಯಲಿದ್ದಾರೆ.
ಈ ಹಿಂದೆ ಸಮಾಜವಾದಿ ಪಕ್ಷ ಅಮರ್ ಸಿಂಗ್ ಮತ್ತು ಜಯಾ ಅವರನ್ನು ಪಕ್ಷದಿಂದ ಉಚ್ಛಾಟಿಸಿತ್ತು.
Click this button or press Ctrl+G to toggle between Kannada and English