ಬೆಂಗಳೂರು : ಎರಡು ಹಂತದಲ್ಲಿ ನಡೆದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣಾ ಫಲಿತಾಂಶ ಘೋಷಣೆಯಾಗಿದ್ದು, ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸುವ ಮೂಲಕ ಆಡಳಿತಾರೂಢ ಬಿಜೆಪಿಯ ಕಡೆ ಮತದಾರ ಒಲವು ತೋರಿಸಿದ್ದಾನೆ
ಬಿಜೆಪಿಯ ಭದ್ರಕೋಟೆ ಬಳ್ಳಾರಿಯಲ್ಲಿ ಮತ್ತು ಉತ್ತರ ಕನ್ನಡದಲ್ಲಿ ಬಿಜೆಪಿ ಬಹುತೇಕ ಹಿಂದೆ ಬಿದ್ದಿದೆ. ಮುಖ್ಯಮಂತ್ರಿಗಳ ತವರು ಕ್ಷೇತ್ರ ಶಿವಮೂಗ್ಗದಲ್ಲಿ ಬಿಜೆಪಿ ಮುನ್ನಡೆ ಸಾಧಿಸುವ ಮೂಲಕ ಯಡಿಯೂರಪ್ಪ ಮುಖಭಂಗವನ್ನು ತಪ್ಪಿಸಿಕೊಂಡಿದ್ದಾರೆ.
ರಾಮನಗರ, ಹಾಸನ, ತುಮಕೂರು ಹಾಗೂ ಕೋಲಾರ ಜಿಲ್ಲೆಗಳಲ್ಲಿ ಜೆಡಿಎಸ್, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಪ್ರದೇಶ ಬಿಜೆಪಿ ಗೆದ್ದಿದೆ. ಕೆಲವಡೆ ಅನಿರೀಕ್ಷಿತ ಫಲಿತಾಂಶ ಹೊರತುಪಡಿಸಿ ಉಳಿದೆಡೆ ಎಲ್ಲ ಬಿಜೆಪಿ ನಿರೀಕ್ಷಿತ ಫಲಿತಾಂಶ ಮೂಡಿಬಂದಿದೆ.
ಜಿಲ್ಲಾ ಪಂಚಾಯಿತಿ ಚುನಾವಣೆ ರೆಡ್ಡಿ ಸಹೋದರರಿಗೆ ಹಿನ್ನೆಡೆಯಾಗಿದೆ. ಬಳ್ಳಾರಿಯ 35 ಜಿಪಂ ಸ್ಥಾನಗಳಲ್ಲಿ 18 ಬಿಜೆಪಿ ಗೆಲುವು ಸಾಧಿಸಿದರೆ, 17 ಕಾಂಗ್ರೆಸ್ ಮತ್ತು 1 ಸ್ಥಾನವನ್ನು ಜೆಡಿಎಸ್ ಜಯಗಳಿಸಿದ್ದು, ಕಂದಾಯ ಸಚಿವ ಕರುಣಾಕರರೆಡ್ಡಿ ಪ್ರತಿನಿಧಿಸುವ ಹರಪನಹಳ್ಳಿಯಲ್ಲಿ ಕಾಂಗ್ರೆಸ್ ಜಯಭೇರಿಗಳಿಸಿ ರೆಡ್ಡಿಗಳಿಗೆ ಹಿನ್ನೆಡೆಯಾಗಿದೆ.
ಹಾಸನದಲ್ಲಿ ಜೆಡಿಎಸ್ 40 ಸ್ಥಾನಗಳಲ್ಲಿ 33 ಸ್ಥಾನಗಳಲ್ಲಿ ಜಯಗಳಿಸಿದೆ. ಮಾಜಿ ಸಿಎಂ ಕುಮಾರಸ್ವಾಮಿ ಅವರ ಕ್ಷೇತ್ರ ರಾಮನಗರದಲ್ಲಿ ಜೆಡಿಎಸ್ ಭರ್ಜರಿ ವಿಜಯ ಸಾಧಿಸಿದೆ. ತುಮಕೂರು ಮತ್ತು ಕೋಲಾರದಲ್ಲಿ ಜೆಡಿಎಸ್ ಜಯ ಗಳಿಸಿ ಅಚ್ಚರಿ ಮೂಡಿಸಿದೆ.
ಜಿಲ್ಲಾ ಪಂಚಾಯತ್ ಫಲಿತಾಂಶ:
ಒಟ್ಟು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಅತಂತ್ರ
30 12 04 04 10
ತಾಲೂಕ ಪಂಚಾಯತ್ ಗೆಲುವು ಸಾಧಿಸಿದ ಕ್ಷೇತ್ರಗಳು:
ಜಿಲ್ಲೆ ಅಧಿಕಾರ ಒಟ್ಟು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಇತರ
ಬಾಗಲಕೋಟೆ ಬಿಜೆಪಿ 32 17 14 0 1
ಬೆಂಗಳೂರು (ನ) ಅತಂತ್ರ 34 16 14 4 0
ಬೆಂಗಳೂರು (ಗ್ರಾ) ಅತಂತ್ರ 18 9 3 6 0
ಬೆಳಗಾವಿ ಬಿಜೆಪಿ 86 63 17 0 6
ಬಳ್ಳಾರಿ ಅತಂತ್ರ 36 18 17 1 0
ಬೀದರ್ ಬಿಜೆಪಿ 31 18 2 5 6
ಬಿಜಾಪುರ ಅತಂತ್ರ 38 16 19 2 1
ಚಾಮರಾಜನಗರ ಕಾಂಗ್ರೆಸ್ 21 6 15 0 0
ಚಿಕ್ಕಮಗಳೂರು ಬಿಜೆಪಿ 34 25 6 2 1
ಚಿಕ್ಕಬಳ್ಳಾಪುರ ಕಾಂಗ್ರೆಸ್ 27 1 1 5 8
ಚಿತ್ರದುರ್ಗ ಅತಂತ್ರ 34 12 16 6 0
ದಕ್ಷಿಣ ಕನ್ನಡ ಬಿಜೆಪಿ 35 24 11 0 0
ದಾವಣಗೆರೆ ಬಿಜೆಪಿ 34 18 16 0 0
ಧಾರವಾಡ ಬಿಜೆಪಿ 22 15 6 1 0
ಗದಗ ಬಿಜೆಪಿ 18 11 7 0 0
ಗುಲ್ಬರ್ಗಾ ಅತಂತ್ರ 43 20 19 3 1
ಹಾಸನ ಜೆಡಿಎಸ್ 40 5 2 33 0
ಹಾವೇರಿ ಬಿಜೆಪಿ 32 27 4 0 1
ಕೊಡಗು ಬಿಜೆಪಿ 29 21 6 2 0
ಕೋಲಾರ ಅತಂತ್ರ 28 7 5 11 5
ಕೊಪ್ಪಳ ಅತಂತ್ರ 27 12 10 4 1
ಮಂಡ್ಯ ಜೆಡಿಎಸ್ 40 0 14 24 2
ಮೈಸೂರು ಅತಂತ್ರ 46 8 21 16 1
ರಾಯಚೂರು ಅತಂತ್ರ 35 11 15 9 0
ರಾಮನಗರ ಜೆಡಿಎಸ್ 22 0 10 12 0
ಶಿವಮೊಗ್ಗ ಬಿಜೆಪಿ 31 16 13 2 0
ತುಮಕೂರು ಜೆಡಿಎಸ್ 57 13 10 33 1
ಉಡುಪಿ ಬಿಜೆಪಿ 25 16 9 0 0
ಉತ್ತರ ಕನ್ನಡ ಕಾಂಗ್ರೆಸ್ 36 9 22 1 4
ಯಾದಗಿರಿ ಕಾಂಗ್ರೆಸ್ 22 7 15 0 0
Click this button or press Ctrl+G to toggle between Kannada and English