ಗ್ಯಾಸ್‌ಗೆ ಆಧಾರ್ ಗೊಡವೆ ಇಲ್ಲ

4:30 PM, Tuesday, March 11th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Sylinderಮೈಸೂರು: ಅಡುಗೆ ಅನಿಲ ಸಿಲಿಂಡರ್ ಪಡೆಯಲು ‘ಆಧಾರ್’ ಇನ್ನು ಅಡ್ಡಿಯಾಗದು. ರಾಜ್ಯದೆಲ್ಲೆಡೆ ಸಬ್ಸಿಡಿ ಸಿಲಿಂಡರ್ ಗ್ರಾಹಕರ ಮನೆ ಬಾಗಿಲಿಗೆ ಬರಲಿದೆ. ಇದರ ಅರ್ಥ ಸಿಲಿಂಡರ್ ಏಜೆನ್ಸಿಗಳಿಗೆ ಆಧಾರ್ ಸಂಖ್ಯೆ ನೀಡಿ, ಅದನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಬೇಕೆಂಬ ನಿಯಮ ಕೈಬಿಡಲಾಗಿದೆ.

ಈ ನಿಯಮ ಆಧಾರ್ ಪೈಲಟ್ ಯೋಜನೆ ಜಾರಿಗೊಂಡ ರಾಜ್ಯದ ಮೂರು ಜಿಲ್ಲೆಗಳಾದ ಮೈಸೂರು, ತುಮಕೂರು ಮತ್ತು ಧಾರವಾಡ ಜಿಲ್ಲೆಗಳಿಗೂ ಅನ್ವಯವಾಗಿದೆ. ಪ್ರತಿಯೊಬ್ಬ ಗ್ರಾಹಕ ವರ್ಷಕ್ಕೆ 11 ಸಿಲಿಂಡರ್‌ಗಳನ್ನು ಪಡೆಯಬಹುದಾಗಿದ್ದು, ಪ್ರತಿ ಸಿಲಿಂಡರ್‌ಗೆ 423 ರೂ. ದರ ನಿಗದಿಪಡಿಸಲಾಗಿದೆ.

ಆಧಾರ್ ಕಾರ್ಡ್ ವ್ಯವಸ್ಥೆ ಜಾರಿಗೊಂಡ ನಂತರ ರಾಜ್ಯದ ಮೂರು ಜಿಲ್ಲೆಗಳಲ್ಲಿ ನೇರ ನಗದು ವ್ಯವಸ್ಥೆ ಅನುಷ್ಠಾನಕ್ಕೆ ಬಂದಿತ್ತು. ಇದರಡಿ ಇಂತಿಷ್ಟು ಸಿಲಿಂಡರ್ ಮಾತ್ರ ಸಹಾಯಧನಕ್ಕೆ ನೀಡುವುದು. ಉಳಿಕೆ ಸಿಲಿಂಡರ್‌ಗೆ ಮಾರುಕಟ್ಟೆ ದರದಲ್ಲಿ ಹಣವನ್ನು ಪಾವತಿ ಮಾಡಬೇಕಾಗಿತ್ತು. ಸಬ್ಸಿಡಿ ಸಿಲಿಂಡರ್‌ನ ಸಹಾಯಧನವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುವುದಾಗಿ ಸರಕಾರ ಹೇಳಿತ್ತು. ಇದರ ಅನ್ವಯ ಕೆಲವರ ಖಾತೆಗೆ ಸರಿಯಾಗಿ ಹಣ ಜಮಾ ಆಗುತ್ತಿದ್ದರೆ, ಬಹಳಷ್ಟು ಗ್ರಾಹಕರ ಖಾತೆಗೆ ಸಬ್ಸಿಡಿ ಹಣ ಬಂದಿಲ್ಲ ಎಂಬ ದೂರುಗಳೂ ಕೇಳಿಬಂದಿದ್ದರು.

ಬೆಂಗಳೂರಿನಲ್ಲೂ ಆಧಾರ್ ನೀಡಿಕೆ ಪದ್ದತಿಯನ್ನು ಜನವರಿಯಿಂದ ಜಾರಿಗೆ ತರಲಾಗಿದ್ದು, ಏಪ್ರಿಲ್ ಬಳಿಕ ಆಧಾರ್ ಒದಗಿಸದ ಗ್ರಾಹಕರಿಗೆ ಸಹಾಯಧನ ದೊರೆಯುವುದಿಲ್ಲ ಎಂದು ಎಚ್ಚರಿಸಲಾಗಿತ್ತು. ಇದರಿಂದ ಗ್ರಾಹಕರು ಗೊಂದಲಕ್ಕೀಡಾಗಿದ್ದರು.

ಅಡುಗೆ ಅನಿಲ ಸೇರಿದಂತೆ ಸರಕಾರದ ಸೌಲಭ್ಯಗಳಿಗೆ ಆಧಾರ್ ಕಡ್ಡಾಯಗೊಳಿಸಬಾರದು ಎಂದು ತೀರ್ಪು ನೀಡಿದ ಬಳಿಕ ಸಾಕಷ್ಟು ಮೀನಮೇಷ ಎಣಿಸಿದ ಕೇಂದ್ರ ಸರಕಾರ, ಎಲ್ಪಿಜಿ ಸಹಾಯಧನಕ್ಕೆ ಆಧಾರ್ ಕಡ್ಡಾಯವಲ್ಲ ಎಂದು ಆದೇಶ ಹೊರಡಿಸಿತ್ತು. ಆದರೆ, ಗ್ಯಾಸ್ ಏಜೆನ್ಸಿಗಳು ಮಾತ್ರ ತಮ್ಮ ಗ್ರಾಹಕರಿಗೆ ಆಧಾರ್ ಸಂಖ್ಯೆ ನೀಡುವಂತೆ ಎಸ್‌ಎಂಎಸ್ ಸಂದೇಶ ಕಳಿಸುವುದನ್ನು ಮುಂದುವರಿಸಿದ್ದವು. ಇದರಿಂದ ಗೊಂದಲ ಮುಂದುವರಿದಿತ್ತು.

ಸದ್ಯ ಈ ಎಲ್ಲಾ ಗೊಂದಲಗಳಿಗೆ ತೆರೆಬಿದ್ದಿದೆ. ಈಗ ಬಂದಿರುವ ಮಾಹಿತಿಯಂತೆ ಮಾರ್ಚ್ 10ರ ಸೋಮವಾರದಿಂದ ಹಿಂದಿನ ಪದ್ಧತಿ ಜಾರಿಯಾಗಿದೆ.

‘ಸಿಲಿಂಡರ್ ವಿತರಣೆಯಲ್ಲಿ ಹಿಂದಿನ ಪದ್ಧತಿಯನ್ನೇ ಕೇಂದ್ರ ಸರಕಾರ ಜಾರಿಗೊಳಿಸಿದ ಆದೇಶ ಬಂದಿದೆ. ಅದರಂತೆ ಈ ತಿಂಗಳಿನಿಂದಲೇ ಇದು ಜಾರಿಗೊಂಡಿದೆ. ನೇರ ನಗದು ಹಣ ಯೋಜನೆಯಡಿ ಈಗಾಗಲೇ ಹೆಚ್ಚುವರಿ ಹಣ ಪಾವತಿ ಮಾಡಿ ಇನ್ನೂ ಸಹಾಯಧನ ಪಡೆಯದವರಿಗೆ ಹಣ ಪಾವತಿಯಾಗಲಿದೆ

ಸರಕಾರದ ಆದೇಶದಂತೆ ಸೋಮವಾರದಿಂದಲೇ ಪ್ರತಿ ಸಿಲಿಂಡರ್‌ಗೆ 423 ರೂ. ದರದಂತೆಯೇ ವಿತರಣೆ ಆರಂಭಿಸಿದ್ದೇವೆ. ಜಿಲ್ಲೆಯಾದ್ಯಂತ ನೇರ ನಗದು ವರ್ಗಾವಣೆಯಾದ ಕೆಲ ಗ್ರಾಹಕರು ಇದ್ದಾರೆ. ಅವರ ಸಹಾಯಧನ ವಾಪಸ್ ಮಾಡಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English