ದೇವಯಾನಿ ವಿರುದ್ಧದ ವೀಸಾ ವಂಚನೆ ಪ್ರಕರಣ ಕೈ ಬಿಟ್ಟ ಅಮೆರಿಕ

12:50 PM, Thursday, March 13th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Devyaniನ್ಯೂಯಾರ್ಕ್: ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರ ದೇವಯಾನಿ ವಿರುದ್ಧದ ವೀಸಾ ವಂಚನೆ ಪ್ರಕರಣವನ್ನು ಗುರುವಾರ ಅಮೆರಿಕ ಕೋರ್ಟ್ ವಜಾಗೊಳಿಸಿದೆ. ಇದರಿಂದ ದೇವಯಾನಿ ಪ್ರಕರಣದಲ್ಲಿ ಅಮೆರಿಕಕ್ಕೆ ಭಾರಿ ಹಿನ್ನಡೆಯಾದಂತಾಗಿದೆ.

ದೇವಯಾನಿ ಖೋಬ್ರಾಗಡೆ ಅವರ ಬಂಧನ ಮತ್ತು ಕ್ಯಾವಿಟಿ ಸರ್ಚ್ ಪ್ರಕರಣದಿಂದ ಅಮೆರಿಕ ಮತ್ತು ಭಾರತದ ನಡುವಿನ ಹಲವು ವರ್ಷಗಳ ಉತ್ತಮ ಬಾಂಧವ್ಯಕ್ಕೆ ಧಕ್ಕೆಯಾಗಿತ್ತು.

ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಉಪ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದೇವಯಾನಿ ಅವರನ್ನು ವೀಸಾ ವಂಚನೆ ಆರೋಪದ ಮೇಲೆ ಕಳೆದ ಡಿಸೆಂಬರ್ 12ರಂದು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಅಮೆರಿಕ ನ್ಯಾಯಾಧೀಶ ಶಿರ ಶೆಡ್ಲಿನ್ ಅವರು ದೇವಯಾನಿ ಅವರಿಗೆ ಸಂಪೂರ್ಣ ರಾಜತಾಂತ್ರಿಕ ರಕ್ಷಣೆ ನೀಡಿದ ಆಧಾರದ ಮೇಲೆ ಅವರ ವಿರುದ್ಧದ ಪ್ರಕರವನ್ನು ವಜಾಗೊಳಿಸಿದ್ದಾರೆ. ಅಮೆರಿಕ ಕೋರ್ಟ್‌ನ ಈ ನಿರ್ಧಾರವನ್ನು ಭಾರತ ಸ್ವಾಗತಿಸಿದೆ.

ಜನವರಿ 8ರಂದು ಭಾರತ ಸರ್ಕಾರ ದೇವಯಾನಿ ಅವರಿಗೆ ಸಂಪೂರ್ಣ ರಾಜತಾಂತ್ರಿಕ ರಕ್ಷಣೆ ನೀಡಿ ವಿಶ್ವಸಂಸ್ಥೆಗೆ ವರ್ಗಾವಣೆ ಮಾಡಿತ್ತು. ಅಲ್ಲದೆ ತಮ್ಮ ವಿರುದ್ಧದ ಪ್ರಕರಣವನ್ನು ಕೈಬಿಡುವಂತೆ ದೇವಯಾನಿ ಅವರು ಸಹ ಅಮೆರಿಕ ಕೋರ್ಟ್‌ಗೆ ಮನವಿ ಮಾಡಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English