ಡಾ| ರಂಗನಾಥ್ ಎಸ್. ಶೆಟ್ಟಿ ಜೋಗೇಶ್ವರಿ ನಿಧನ

4:42 PM, Tuesday, April 1st, 2014
Share
1 Star2 Stars3 Stars4 Stars5 Stars
(4 rating, 6 votes)
Loading...

Dr.Ranganath Shettyಮುಂಬಯಿ :  ಉಪನಗರ ಜೋಗೇಶ್ವರಿ ಪೂರ್ವದ ಪ್ರಸಿದ್ಧ ವೈದ್ಯಾಧಿಕಾರಿ, ಡಾ| ರಂಗನಾಥ್ ಎಸ್.ಶೆಟ್ಟಿ (68.) ಅವರು ಇಂದಿಲ್ಲಿ ಸೋಮವಾರ (31.03.2014) ಮುಂಜಾನೆ ತನ್ನ ಸ್ವನಿವಾಸ ಗೋರೆಗಾಂವ್ ಪೂರ್ವದ ಪೇರುಭಾಗ್ ಅಲ್ಲಿನ ಧನವಂತಿ ಅಪಾರ್ಟ್ ಮೆಂಟ್ ನ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.

ಮೂಲತಃ ಮಂಗಳೂರು ಬಳ್ಕುಂಜೆ ಸನಿಹದ ಮುಂಡ್ಕೂರು ಉಳೆಪಾಡಿ ಕಲೆಂಬಿ ನಿವಾಸದವರಾಗಿದ್ದ ರಘುನಾಥ್ ಶೆಟ್ಟಿ ಹಲವಾರು ವರ್ಷಗಳಿಂದ ಜೋಗೇಶ್ವರಿ ಪೂರ್ವದಲ್ಲಿ ಪಾರಸ್ ನಗರದಲ್ಲಿ ಕ್ಲಿನಿಕ್ ಮೂಲಕ ವೈದ್ಯಕೀಯ ಸೇವಾ ನಿರತರಾಗಿದ್ದರು. ಮೃತರು ಪತ್ನಿ ಶ್ರೀಮತಿ ಸುಕನ್ಯಾ ಆರ್.ಶೆಟ್ಟಿ, ಏಕೈಕ ಸುಪುತ್ರಿ ಡಾ| ಪೂಜಾ ಆರ್.ಶೆಟ್ಟಿ ಆಸ್ಟ್ರೇಲಿಯಾ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಆಸ್ಟ್ರೇಲಿಯಾದಿಂದ ಸುಪುತ್ರಿಯ ಆಗಮನದ ಬಳಿಕವಷ್ಟೇ ಮೃತರ ಅಂತ್ಯಕ್ರಿಯೆ ಇಂದು (02.04.2014) ಮಂಗಳವಾರ ರಾತ್ರಿ ವಿಲೇಪಾರ್ಲೆ ಪೂರ್ವದ ಸಾಠೆ ಕಾಲೇಜು ಸಮೀಪದ ಅಪೊಲೋದೇವಿ ಬಿಲ್ಡಿಂಗ್ನಲ್ಲಿನ ನಿವಾಸದಿಂದ ಹೊರಟು ವಿಲೇಪಾರ್ಲೆ ಪೂರ್ವದಲ್ಲಿನ ರುಧ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿದೆ.

         

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English