ಕಾರ್ಕಳ: ಶ್ರೀ ಬ್ರಹ್ಮ ಶ್ರೀ ಸತ್ಯ ಸಾರಮಣಿ ಪಳ್ಳಿ ಹಾಗೂ ಫ್ರೆಂಡ್ಸ್ ಪಳ್ಳಿ ವತಿಯಿಂದ ಇತ್ತೀಚೆಗೆ ಪಳ್ಳಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಸೀಮಿತ ಓವರ್ಗಳ ಕ್ರಿಕೆಟ್ ಪಂದ್ಯಾಟದಲ್ಲಿ ಕಂಪಾನ್ ಫ್ರೆಂಡ್ಸ್ ತಂಡ `ಶ್ರೀ ಬ್ರಹ್ಮಶ್ರೀ ಸತ್ಯ ಸಾರಮಣಿ ಟ್ರೋಫಿ’ಯನ್ನು ತನ್ನದಾಗಿಸಿಕೊಂಡಿದೆ. ಬ್ರಹ್ಮಲಿಂಗೇಶ್ವರ ಬಜೆಕಳ ತಂಡ ರನ್ನರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಈ ಪಂದ್ಯಾಟದಲ್ಲಿ ಒಟ್ಟು 36 ತಂಡಗಳು ಭಾಗವಹಿಸಿದ್ದವು. ಸೆಮಿಫೈನಲ್ನಲ್ಲಿ ಪಳ್ಳಿ ಫ್ರೆಂಡ್ಸ್ ತಂಡವನ್ನು ಸೋಲಿಸಿದ ಕಂಪಾನ್ ತಂಡ ಫೈನಲ್ನಲ್ಲಿ ಬ್ರಹ್ಮಲಿಂಗೇಶ್ವರ ತಂಡವನ್ನು ಮಣಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಕಂಪಾನ್ ತಂಡದ ಫಾರೂಕ್ ಪಂದ್ಯಶ್ರೇಷ್ಠ ಹಾಗೂ ಬ್ರಹ್ಮಲಿಂಗೇಶ್ವರ ತಂಡದ ರಾಕೇಶ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಕ್ಕೆ ಮುಖ್ಯ ಅತಿಥಿಗಳಾಗಿದ್ದ ಗೋವಿಂದ ಜೋಗಿ, ಮನೋಹರ ಶೆಟ್ಟಿ, ಸತ್ಯಾನಂದ ಶೆಟ್ಟಿ ಟ್ರೋಫಿ ವಿತರಿಸಿದರು. ಇದೇ ಸಂದರ್ಭ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆಗೆ ಪ.ಗೋ. ಪ್ರಶಸ್ತಿ ಪಡೆದ ಪತ್ರಕರ್ತ ಸುರೇಶ್ ಡಿ. ಪಳ್ಳಿಯವರನ್ನು ಸನ್ಮಾನಿಸಲಾಯಿತು. ಕ್ರೀಡಾಪಟು ನಾಗೇಶ್ ಪಳ್ಳಿ ಕಾರ್ಯಕ್ರಮ ನಿರೂಪಿಸಿದರು.
ಆರಂಭದಲ್ಲಿ ಪಂದ್ಯಾಟಕ್ಕೆ ಮುಖ್ಯ ಅತಿಥಿಯಾಗಿದ್ದ ವಿಜಯ ಎಂ ಶೆಟ್ಟಿ ಚಾಲನೆ ನೀಡಿದರು. ಪಳ್ಳಿ ಸರಕಾರಿ ಪ.ಪೂ.ಕಾಲೇಜಿನ ದೈಹಿಕ ಶಿಕ್ಷಕ ಆನಂದ ಶೆಟ್ಟಿ, ಪ್ರಮುಖರಾದ ರಘುನಾಥ ಶೆಟ್ಟಿ, ಬಾಬು ಪಳ್ಳಿ, ಸಂದೀಪ್ ಅಮೀನ್, ನವೀನ್ ಶೆಟ್ಟಿ, ಹರೀಶ್ ಶೆಟ್ಟಿ, ಸನತ್ ಹೆಗ್ಡೆ, ಸತೀಶ್ ಪಳ್ಳಿ, ಪ್ರದೀಪ್ ಸನಿಲ್, ವಿಶ್ವನಾಥ, ರತ್ನಾಕರ ಪಳ್ಳಿ, ಶ್ರೀಕಾಂತ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English